ಕ್ರೀಡೆ

ಸಾನಿಯಾ- ಕಾರಾ ಕ್ವಾರ್ಟರ್‌ಗೆ

ಸಾನಿಯಾ- ಕಾರಾ ಕ್ವಾರ್ಟರ್‌ಗೆ
Published On :

ಓಯಿರಾಸ್: ಅಗ್ರ ಶ್ರೇಯಾಂಕ ಪಡೆದಿರುವ ಭಾರತದ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲಾಕ್ ಜೋಡಿ, ಡಬ್ಲ್ಯೂಟಿಎ ಪೋರ್ಚುಗಲ್ ಓಪನ್‌ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ.  ಭಾರತ ಮತ್ತು ಜಿಂಬಾಬ್ವೆ ಜೋಡಿ, ರೋಮೆನಿಯಾದ ಇರಿನಾ ಕಾಮೆಲಿಯಾ ಬೆಗು ಮತ್ತು ಮಾರಿಯಾ ಇರಿಗೋಯೇನ್ ಜೋಡಿಯನ್ನು 4-6, 6-2, 10-5 ಸೆಟ್‌ಗಳಿಂದ ಪರಾಭವಗೊಳಿಸುವ ಮೂಲಕ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು.     ಈಗ ಪ್ಯಾರೀಸ್‌ನ ಮಾರಿಯಾ ಜೋಯೋ ಕೋಹ್ಲೆರ್ ಮತ್ತು ಮಾರಿಯಾ ತೆರೆಸಾ ಟೊರ್ರೋ ಫ್ಲೋರ್ ಜೋಡಿ ಹಾಗೂ ಸಿಲ್ವಿಯಾ ಸೋಲೆರ್-ಎಸ್ಪಿನೋಸಾ ಮತ್ತು ಶೂಯಿ ಝಂಗ್ ಜೋಡಿ ನಡುವೆ ನಡೆಯುವ ಪಂದ್ಯದವರೆಗೂ ಸಾನಿಯಾ ಮತ್ತು ಕಾರಾ ಬ್ಲಾಕ್ ಕಾಯಬೇಕಾಗಿದೆ. ಕಾರಣ ಈ ಪಂದ್ಯದಲ್ಲಿ ಗೆದ್ದ ಜೋಡಿ ವಿರುದ್ಧ ಭಾರತ ಮತ್ತು ಜಿಂಬಾಬ್ವೆ ಜೋಡಿ ಕ್ವಾರ್ಟರ್‌ಫೈನಲ್‌ನಲ್ಲಿ ಸೆಣಸಲಿದೆ.
ಏತನ್ಮಧ್ಯೆ, ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ದಿವಿಜ್ ಶರಣ್ ಮತ್ತು ಪುರವ ರಾಜಾ ಜೋಡಿ ವಾಕ್ ಓವರ್ ಪಡೆಯುವ ಮೂಲಕ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಹಾಕಿದೆ.
ಈಗ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಜೋಡಿ, ಅಗ್ರ ಶ್ರೇಯಾಂಕ ಪಡೆದಿರುವ ಪಬ್ಲೋ ಕುವಾಸ್ ಮತ್ತು ಡೇವಿಡ್ ಮರ್ರೆರೋ ಜೋಡಿಯನ್ನು ಎದುರಿಸುವ ಸಾಧ್ಯತೆಗಳಿವೆ.
ಇನ್ನು ಪುರುಷರ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನಲ್ಲಿ ಅಗ್ರ ಶ್ರೇಯಾಂಕ ಪಡೆದ ಚೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್ ವಿರುದ್ಧ ಸೋಲನುಭವಿಸಿದ ಸೋಮ್‌ದೇವ್ ದೇವ್‌ವರ್ಮನ್ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.