ವಿಶ್ವಕಪ್ ವೇಳೆ ನೆಟ್ಸ್ನಲ್ಲಿ ಎಸೆತ ಎದುರಿಸದೇ ತೆಂಡೂಲ್ಕರ್ ಸಾಧನೆ

ನವದೆಹಲಿ: 2003ರ ವಿಶ್ವಕಪ್ಪಂದ್ಯಾವಳಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದ ಸಚಿನ್ ತೆಂಡೂಲ್ಕರ್ ಅವರು ಆಗ ನೆಟ್ ಅಭ್ಯಾಸದಲ್ಲಿ ಒಂದೇ ಒಂದು ಚೆಂಡನ್ನೂ ಎದುರಿಸಿರಲಿಲ್ಲವಂತೆ. ಹಾಗಂತ ತಂಡದ ಸಹ ಆಟಗಾರ ರಾಹುಲ್ ದ್ರಾವಿಡ್ ಅವರು ಹೇಳಿಕೊಂಡಿದ್ದಾರೆ.
ಆಗ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಸಚಿನ್ ಅವರು 673 ರನ್ ದಾಖಲಿಸಿದ್ದರು. ವಿಶ್ವಕಪ್ ಪಂದ್ಯಾವಳಿಯೊಂದರಲ್ಲಿ ಇಷ್ಟೊಂದು ರನ್ಗಳನ್ನು ಯಾವುದೇ ಆಟಗಾರ ದಾಖಲಿಸಿಲ್ಲ. ಆಗ ಪಾಕಿಸ್ತಾನದ ವಿರುದ್ಧ 98 ರನ್ ಗಳಿಸಿದ್ದ ಸಚಿನ್ ಅವರು, ಖ್ಯಾತ ಬೌರ್ಗಳಾದ ವಾಸೀಂ ಅಕ್ರಮ್, ವಖಾರ್ ಯೂನಿಸ್ ಹಾಗೂ ಶೋಯಿಬ್ ಅಖ್ತರ್ ಅವರ ಬೆವರಿಳಿಸಿದ್ದರು. 'ಆಗಾಗ ತಮ್ಮ ಬ್ಯಾಟಿಂಗ್ ತಯಾರಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದ್ದ ಸಚಿನ್ ಅವರು, 2003ರ ವಿಶ್ವಕಪ್ ಪಂದ್ಯಾವಳಿಯಲ್ಲಿ ನೆಟ್ನಲ್ಲಿ ಒಂದೇ ಒಂದು ಎಸೆತವನ್ನು ಎದುರಿಸಿರಲಿಲ್ಲ. ಆದರೆ, ಪಂದ್ಯಾವಳಿಯ ಉದ್ದಕ್ಕೂ ಅವರು ರನ್ಮಳೆಗರಿಯುವಲ್ಲಿ ಯಶಸ್ವಿಯಾಗಿದ್ದರು.
'ಸಚಿನ್ ನೆಟ್ ಅಭ್ಯಾಸಕ್ಕೆ ಗಮನಕೊಡದಿರುವುದು ನಮಗೆಲ್ಲ ಅಚ್ಚರಿ ಮೂಡಿಸಿತ್ತು. ಅವರೇಕೆ ಹಾಗೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿತ್ತು. ಆ ಕುರಿತು ನಾನು ಸಚಿನ್ ಅವರನ್ನು ಪ್ರಶ್ನಿಸಿಯೇ ಬಿಟ್ಟೆ. ಅದಕ್ಕೆ ಅವರು, ನಾನು ಫಾರ್ಮ್ನಲ್ಲಿದ್ದೇನೆ ಎಂದು ಅನಿಸುತ್ತಿದೆ. ಹೀಗಾಗಿ ನಾನು ನೆಟ್ ಪ್ರವೇಶಿಸಿ ಅಭ್ಯಾಸ ಮಾಡುವ ಅಗತ್ಯವಿಲ್ಲ ಎನಿಸಿತು. ಒಂದು ವೇಳೆ ನನ್ನ ಫಾರ್ಮ್ ಬಗ್ಗೆ ನನಗೆ ತೃಪ್ತಿ ಇಲ್ಲದಿದ್ದರೆ, ನಾನು ನೆಟ್ ಅಭ್ಯಾಸಕ್ಕೆ ಇಳಿಯುತ್ತೇನೆ. ಅಷ್ಟಕ್ಕೂ ಈಗೇನಾಯಿತು ಎಂದಿದ್ದರು ಸಚಿನ್' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


