ಕ್ರೀಡೆ

ಕಾಮನ್‌ವೆಲ್ತ್: ವಿಟಾಮಿನ್‌ಗಾಗಿ ಕ್ರೀಡಾಪಟುಗಳಿಂದ ಸಿರಿಂಜ್ ಬಳಕೆ

ಕಾಮನ್‌ವೆಲ್ತ್: ವಿಟಾಮಿನ್‌ಗಾಗಿ ಕ್ರೀಡಾಪಟುಗಳಿಂದ ಸಿರಿಂಜ್ ಬಳಕೆ
Published On :

ಕಾಮನ್‌ವೆಲ್ತ್: ವಿಟಾಮಿನ್‌ಗಾಗಿ ಸಿರಿಂಜ್ ಬಳಿಸಿದ್ದ ಕ್ರೀಡಾಪಟುಗಳು ನಿಷೇಧಿತ ಔಷಧ ಸೇವಿಸಲು ಸಿರೀಂಜ್ ಬಳಕೆಯಾಗಿಲ್ಲದಿರುವುದು ಖಚಿತ.

ನವದೆಹಲಿ: ಗ್ಲಾಸ್ಗೋಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್‌ಗಳು ತಂಗಿದ್ದ ಕೊಠಡಿಗಳಲ್ಲಿ ಸಿರಿಂಜ್ ಗಳು ಪತ್ತೆಯಾಗಿವೆ. ಆದರೆ, ಅಥ್ಲೀಟ್‌ಗಳು ಯಾವುದೇ ರೀತಿಯ ನಿಷೇಧಿತ ಔಷಧಿ ಸೇವಿಸಿರುವ ಬಗ್ಗೆ ಸಾಕ್ಷ್ಯಗಳು ನಿಷೇಧಿತ ಔಷಧಿ ಸೇವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕ್ರೀಡಾಕೂಟ ನಡೆಯುತ್ತಿರುವಾಗ ಅಥ್ಲೀಟ್‌ಗಳ ಕೊಠಡಿಯಲ್ಲಿ ಸಿರಿಂಜ್ ಗಳಿಗೂ ನಿಷೇಧ ಹೇರಲಾಗಿದೆ. ಅಲ್ಲದೆ, ಜುಲೈ 23 ರಿಂದ ಆಗಸ್ಟ್ 3 ರವರೆಗೆ ಕ್ರೀಡಾಕೂಟ ನಡೆದ ಸಮಯದಲ್ಲಿ ಸಿರಿಂಜ್ ಪತ್ತೆಯಾದ ಬಗ್ಗೆ ಭಾರತದ ಅಥ್ಲೀಟ್‌ಗಳಿಗೆ ಮೂರು ಬಾರಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕ್ರೀಡಾ ಗ್ರಾಮದಲ್ಲಿ ಭಾರತದ ಪ್ಯಾರಾ ಅಥ್ಲೀಟ್‌ಗಳು ತಂಗಿದ್ದ ಕೊಠಡಿಗಳಲ್ಲಿ ಸಿರಿಂಜ್ ಗಳು ಇರುವುದನ್ನು ಗೃಹಕೃತ್ಯ ನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿ ಪತ್ತೆ ಹಚ್ಚಿದೆ.
ನಂತರ ಕುಸ್ತಿ ಪಟುಗಳು ತಂಗಿದ್ದ ಕೊಠಡಿಗಳಲ್ಲೂ ಸಿರಿಂಜ್ ಗಳು ಪತ್ತೆಯಾಗಿವೆ. ಕ್ರೀಡಾಕೂಟ ನಡೆಸುವ ಸಂದರ್ಭದಲ್ಲಿ ಕೊಠಡಿಗಳಲ್ಲಿ ಸಿರಿಂಜ್ ಗಳನ್ನು ಹೊಂದುವುದು ಅಂತಾರಾಷ್ಟ್ರೀಯ ಒಲಂಪಿಕ್ಸ್ ಸಮಿತಿಯ ನಿಯಮ ಉಲ್ಲಂಘನೆಯಾಗಿದೆ. ಹಾಗೊಂದು ವೇಳೆ ಸಿರಿಂಜ್ ಗಳು ಪತ್ತೆಯಾದರೆ, ಅದಕ್ಕೆ ವೈದ್ಯಕೀಯ ಸಮರ್ಥನೆ ನೀಡಬೇಕಾಗುತ್ತದೆ.

ಈ ನಿಯಮವನ್ನು 2012ರಲ್ಲಿ ನಡೆದ ಲಂಡನ್ ಒಲಂಪಿಕ್ಸ್ ಕ್ರೀಡಾಕೂಟದಲ್ಲೇ ಜಾರಿಗೆ ತರಲಾಗಿದೆ. ನಂತರ ಕಾಮನ್ ವೆಲ್ತ್ ಗೇಮ್ಸ್ ಫೆಡರೇಷನ್ ಅದೇ ನಿಯಮವನ್ನು ಗ್ಲಾಸ್ಗೋದಲ್ಲಿ ಜಾರಿಗೆ ತಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.