ಇಂದಿನಿಂದ ರಣಜಿ ಟ್ರೋಫಿಗೆ ಚಾಲನೆ: ಕರ್ನಾಟಕಕ್ಕೆ ತಮಿಳುನಾಡು ಸವಾಲು

ದೇಶಿಯ ಅತ್ಯಂತ ಪ್ರಮುಖ ಲೀಗ್ ಪಂದ್ಯಾವಳಿಯಾಗಿರುವ ರಣಜಿ ಟ್ರೋಫಿಗೆ ಭಾನುನಾರ ಚಾಲನೆ...
ಕರ್ನಾಟಕದ ಮೇಲೆ ಗರಿಗೆದ ನಿರೀಕ್ಷೆ
ಕರ್ನಾಟಕದ ಮೇಲೆ ಗರಿಗೆದ ನಿರೀಕ್ಷೆ

ಬೆಂಗಳೂರು: ದೇಶಿಯ ಅತ್ಯಂತ ಪ್ರಮುಖ ಲೀಗ್ ಪಂದ್ಯಾವಳಿಯಾಗಿರುವ ರಣಜಿ ಟ್ರೋಫಿಗೆ ಭಾನುನಾರ ಚಾಲನೆ ದೊರೆಯಲಿದೆ. 2014-15ರ ಆವೃತ್ತಿಯ ಈ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಪ್ರತಿಯೊಂದು ತಂಡ ದೇಶದ ಕ್ರಿಕೆಟ್ ಸಾರ್ವಭೌಮ ಎನಿಸಿಕೊಳ್ಳಲು ತುದಿಗಾಲಲ್ಲಿ ನಿಂತಿವೆ. ಈ ಪೈಕಿ ಹಾಕಿ ಚಾಂಪಿಯನ್ ಹೆಗ್ಗಳಿಕೆ ಹೊಂದಿರುವ ಕರ್ನಾಟಕದ ಮೇಲೆ ಮತ್ತೆ ನಿರೀಕ್ಷೆ ಗರಿಗೆದರಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾಗಲಿರುವ ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕದನದ ತನ್ನ ಎ ಗುಂಪಿನ ಮೊದಲ ಪಂದ್ಯದಲ್ಲಿ ಕರ್ನಾಟಕದ ಆಟಗಾರರು ಪ್ರಬಲ ತಮಿಳುನಾಡು ತಂಡವನ್ನು ಎದುರಿಸಲಿದ್ದಾರೆ.

ಆರ್.ವಿನಯ್ ಕುಮಾರ್ ಸಾರಥ್ಯದಲ್ಲಿ ಮತ್ತೆ ಅಖಾಡಕ್ಕೆ ಧುಮುಕಿರುವ ಕನ್ನಡಿಗರು ತವರಿನಲ್ಲಿ ಗೆದ್ದು ಶುಭಾರಂಭ ಮಾಡುವ ಮೂಲಕ ತಮ್ಮ ಆಸೆಯ ಗರಿ ಬಿಚ್ಚುವ ವಿಶ್ವಾಸದಲ್ಲಿದ್ದಾರೆ.

ರಣಜಿ ಟ್ರೋಫಿ ಇತಿಹಾಸದಲ್ಲಿ ಕರ್ನಾಟಕ ಈವರೆಗೆ 7 ಬಾರಿ ಪ್ರಶಸ್ತಿ ಹಾಗೂ 6 ಬಾರಿ ರನ್ನರ್ ಅಪ್  ಪ್ರಶಸ್ತಿ ಗೆದ್ದುಕೊಂಡಿದೆ. ಕಳೆದ 2013-14ರ ಆವೃತ್ತಿಯಲ್ಲಿ ಚಾಂಪಿಯನ್ ಎನಿಸಿದ್ದ ಕನ್ನಡಿಗರು ಈ ಸಲವೂ ಪ್ರಶಸ್ತಿ ಉಳಿಸಿಕೊಳ್ಳುವ ಮಹದಾಸೆ ಹೊಂದಿದ್ದಾರೆ. ಕಳೆದ ದೇಶಿಯ ಟೂರ್ನಿಯಲ್ಲಿ ನಾಲ್ಕು ಪ್ರಶಸ್ತಿಗಳ ಪೈಕಿ ಮೂರರಲ್ಲಿ ಚಾಂಪಿಯನ್ ಆಗಿರುವ ಕರ್ನಾಟಕದ ಆಟಗಾರರು ಈ ಬಾರಿಯೂ ಸಹಜವಾಗಿಯೇ ಎಲ್ಲರ ಕೇಂದ್ರಬಿಂದುವಾಗಿದ್ದಾರೆ.

ಅಲ್ಲದೆ ಈ ಬಾರಿ ಮೂವರು ಆಟಗಾರರ ಸೇವೆ ತಂಡಕ್ಕೆ ಲಭ್ಯವಾಗದಿರುವುದು ಸ್ವಲ್ಪ ಯೋಚನೆಯ ವಿಷಯ ಕೂಡ. ಕಳೆದ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿ ಕರ್ನಾಟದ ಚಾಂಪಿಯನ್ ಪಟ್ಟಕ್ಕೆ ಕಾರಣರಾಗಿದ್ದ ಕೆ.ಎಲ್.ರಾಹುಲ್ ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸದಲ್ಲಿರುವ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಮತ್ತಿಬ್ಬರು ಅನುಭವಿಗಾಳದ ಗಣೇಶ್ ಸತೀಶ್ ವಿದರ್ಭ ಪರ ಹಾಗೂ ಅಮಿತ್ ವರ್ಮಾ ಕೇರಳ ತಂಡಗಳ ಪರ ಆಡಲಿದ್ದಾರೆ.

ಮುಖ್ಯವಾಗಿ ಅತ್ತುತ್ತಮ ಫಾರ್ಮ್‌ನಲ್ಲಿರುವ ಕೆ.ಎಲ್.ರಾಹುಲ್ ಅನುಪಸ್ಥಿತಿಯೇ ದೊಡ್ಡ ಚಿಂತೆಗೆ ಕಾರಣವಾಗಿದೆ. ಹಾಗೆಂದು, ಕರ್ನಾಟಕದ ಸಾಮರ್ಥ್ಯದ ಮೇಲೆ ಅದು ಹೆಚ್ಚಿನ ಪರಿಣಾಮ ಬೀರಲಿದೆ ಎಂಬುದನ್ನು ಒಪ್ಪಿಕೊಳ್ಳಲಾಗದು.

ಏಕೆಂದರೆ ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ, ಕರುಣ್ ನಾಯರ್, ಮಾಯಾಂಕ್ ಅಗರ್‌ವಾಲ್, ಸ್ಟುವರ್ಟ್ ಬಿನ್ನಿ ಅವರಂತಹ ಹೆಚ್ಚು ಸಮರ್ಥ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದಾರೆ. ರಾಹುಲ್ ಅನುಪಸ್ಥಿತಿಯಲ್ಲಿ ಬಂದಿರುವ ಮಾಯಾಂಕ್ ಅಗರ್‌ವಾಲ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ.

ಕಳೆದ ಆವೃತ್ತಿಯಲ್ಲಷ್ಟೇ ರಣಜಿಗೆ ಪಾದಾರ್ಪಣೆ ಮಾಡಿದ್ದ ಕರುಣ್ ನಾಯರ್, 6 ಪಂದ್ಯಗಳಿಂದ 494 ರನ್ ಸಂಪಾದಿಸಿದ್ದರು. 61.75ರ ಸರಾಸರಿ ಹೊಂದಿದ್ದ ಅವರು ಸತತ ಮೂರು ಶತಕ ಬಾರಿಸಿದ್ದು ಗಮನಾರ್ಹ. ಉತ್ತಮ ತಾಂತ್ರಿಕ ಕೌಶಲ್ಯ ಹೊಂದಿರುವ ಕರುಣ್ ಮೇಲೆ ಈ ಬಾರಿಯೂ ಅಪಾರ ನಿರೀಕ್ಷೆ ಹೊಂದಲಾಗಿದೆ.

ಇನ್ನು ಬೌಲಿಂಗ್‌ನಲ್ಲಿ ನಾಯಕ ವಿನಯ್‌ಕುಮಾರ್, ಅಭಿಮನ್ಯು ಮಿಥುನ್, ಎಚ್.ಎಸ್.ಶರತ್, ಶ್ರೀನಾಥ್ ಅರವಿಂದ್ ಮತ್ತು ಶ್ರೇಯಸ್ ಗೋಪಾಲ್ ಸಾಮಾರ್ಥ್ಯದ ಬಗ್ಗೆ ಅನುಮಾನವಿಲ್ಲ. ಮೇಲಾಗಿ ಗುಂಪು ಸಣಸಿನಲ್ಲಿ ಈ ಬಾರಿ ಕರ್ನಾಟಕ ತವರಿನಲ್ಲಿಯೇ 4 ಪಂದ್ಯಗಳನ್ನು ಆಡುತ್ತಿರುವುದರಿಂದ ಕ್ವಾರ್ಟರ್ ಫೈನಲ್ ಹಾದಿಯಂತೂ ಕಷ್ಟವಾಗಲಿಕ್ಕಿಲ್ಲ.

ಮತ್ತೊಂದೆಡೆ ತಮಿಳುನಾಡು ತಂಡ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಕಳೆದ ಆವೃತ್ತಿಯಲ್ಲಿ ಬಿ ಗುಂಪಿನಲ್ಲಿದ್ದ ತಮಿಳುನಾಡು, ಆಡಿದ 8 ಪಂದ್ಯಗಳಲ್ಲಿ ಕೇವಲ 1 ರಲ್ಲಿ ಗೆಲುವು ದಾಖಲಿಸಿ ಒಟ್ಟು 9 ತಂಡಗಳ ಲೀಗ್ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದು ತೀರ ಅವಮಾನಕಾರಿಯಾಗಿ ಸ್ಪರ್ಧೆಯಿಂದ ಹೊರಬಿದ್ದಿತ್ತು.

ಈ ನಡುವೆ ಸಾಕಷ್ಟು ಅನುಭವವವುಳ್ಳ ಸುಬ್ರಹ್ಮಣ್ಯಂ ಬದರಿನಾಥ್ ಸೇವೆ ಕೂಡ ಈ ಬಾರಿ ತಂಡಕ್ಕಿಲ್ಲ. ಅಲ್ಲದೆ, ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಮುರಳಿ ವಿಜಯ್ ಅನುಪಸ್ಥಿತಿ ಕೂಡ ಪ್ರವಾಸಿ ತಂಡದಲ್ಲಿ ಎದ್ದುಕಾಣುತ್ತಿದೆ.

ಆದರೆ, ಹೆಚ್ಚು ನಂಬಿಕೆ ಇಡಬಹುದಾದ ಬಾಬಾ ಅಪರಾಜಿತ್ ತಮಿಳುನಾಡು ಬ್ಯಾಟಿಂಗ್‌ನ ಶಕ್ತಿಯಾಗಿದ್ದಾರೆ. ಉಳಿದಂತೆ, ಅಭಿನವ್ ಮುಕುಂದ್ ಮತ್ತು ದಿನೇಶ್ ಕಾರ್ತಿಕ್ ಜವಾಬ್ದಾರಿ ಹೊರುವಷ್ಟು ಸಮರ್ಥರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com