

ದುಬೈ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ಸೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಬುಧವಾರದಿಂದ ಆರಂಭವಾಗಲಿರುವ ಬಿಡಬ್ಲ್ಯೂಎಸ್ ವರ್ಲ್ಡ್ ಸೂಪರ್ ಸೀರೀಸ್ ಪಂದ್ಯಾವಳಿಯಲ್ಲಿ ಕಠಿಣ ಸವಾಲು ಎದುರಿಸಲಿದ್ದಾರೆ.
ಇತ್ತೀಚೆಗೆ ಚೀನಾ ಸೂಪರ್ ಸೀರೀಸ್ ಪ್ರೀಯಮಿರ್‌ನಲ್ಲಿ ಅತ್ಯದ್ಬುತ ಪ್ರದರ್ಶನ ನೀಡಿದ್ದ ಸೈನಾ ಹಾಗೂ ಶ್ರೀಕಾಂತ್, ತಮ್ಮ ಗುಂಪಿನಲ್ಲಿ ಅಗ್ರ ಎಂಟು ರ್ಯಾಂಕಿಂಗ್ ಆಟಗಾರರ ವಿರುದ್ಧ ಸೆಣೆಸಾಡಬೇಕಾಗಿದೆ.
ಸೈನಾ ನೆಹ್ವಾನ್ ಮಹಿಳೆಯರ ವಿಭಾಗದಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಚೀನಾದ ಶಿಕ್ಸಿಯಾನ್ ವಾಂಗ್, ಕೊರಿಯಾದ ಜಿ ಹ್ಯೂನ್ ಸುಂಗ್ ಮತ್ತು ಯೆಯಾನ್ ಜು ಬೇ ಅವರನ್ನು ಎದುರಿಸಲಿದ್ದಾರೆ. ಇನ್ನು ಪುರುಷರ ವಿಭಾಗದಲ್ಲಿ ಶ್ರೀಕಾಂತ್ ಬಿ ಗುಂಪಿನಲ್ಲಿ ಸ್ತಾನ ಪಡೆದಿದ್ದು, ಡೆನ್ಮಾರ್ಕ್‌ನ ಜಾನ್ ಒ ಜೊರ್ರಗೆನ್ಸೆನ್, ಜಪಾನ್‌ನ ಕೆಂಟೋ ಮೊಮೊಟೊ ಮತ್ತು ಇಂಡೊನೇಷ್ಯಾದ ಟಾಮಿ ಸುಗಿಯಾರ್ಟೊ ವಿರುದ್ಧ ಸೆಣೆಸಲಿದ್ದಾರೆ.