
ಬ್ರಿಸ್ಬೇನ್: ಆಸ್ಟ್ರೇಲಿಯದ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲಿನ ದವಡೆಗೆ ಸಿಲುಕಿದೆ.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 224ಗೆ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯಗೆ ಗೆಲ್ಲಲು ಕೇವಲ 128 ರನ್‌ಗಳ ಸವಾಲು ನೀಡಿದೆ. ನಾಲ್ಕನೇ ದಿನವೇ ಆಸ್ಟ್ರೇಲಿಯದ ವಿಜಯದ ಮಾಲೆ ಧರಿಸುವ ಸಾಧ್ಯತೆ ಇದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತ್ತಿದ್ದ ಭಾರತ ಎರಡನೇ ಪಂದ್ಯದಲ್ಲೂ ಸೋಲು ಖಚಿತವಾಗಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಪರ ಆರಂಭಿಕ ಆಟಗಾರ ಶಿಖರ್ ಧವನ್(81) ರನ್ ಬಿಟ್ಟರೆ ಮತ್ಯಾರು 50ರ ಗಡಿ ದಾಟಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ 144 ರನ್ ಗಳಿಸಿದ್ದ ಮುರಳಿ ವಿಜಯ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 27 ರನ್‌ಗೆ ಔಟಾದರು.
ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಚೇತೇಶ್ವರ ಪೂಜಾರ 43 ರನ್‌ಗೆ ಔಟಾದರೆ, ಭರವಸೆಯ ಆಟಗಾರ ವಿರಾಟ್ ಕೊಹ್ಲಿ 1 ರನ್ ಗಳಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಅಂಜಿಕ್ಯಾ ರಹಾನೆ 10 ರನ್, ರೋಹಿತ್ ಶರ್ಮಾ ಹಾಗೂ ತಂಡದ ನಾಯಕ ಎಂ.ಎಸ್ ಧೋನಿ ಶೂನ್ಯಕ್ಕೆ ಔಟಾದರು.
ಬಳಿಕ ಬಂದ ಆರ್. ಅಶ್ವಿನ್ 19, ಉಮೇಶ್ ಯಾದವ್ 30, ವರುಣ್ ಅರೋರ 3 ರನ್‌ಗೆ ಔಟಾದರು.
ಆಸ್ಟ್ರೇಲಿಯ ಪರ ಮಿಚೇಲ್ ಜಾನ್ಸನ್ 4 ವಿಕೆಟ್ ಪಡೆದರೆ, ಹ್ಯಾಝಲ್‌ವುಡ್, ಸ್ಟಾರ್ಕ್, ಲಯೋನ್ ತಲಾ ಎರಡು ವಿಕೆಟ್ ಪಡೆದಿದ್ದಾರೆ.
ಸ್ಕೋರ್ ವಿವರ
ಭಾರತ ಮೊದಲ ಇನ್ನಿಂಗ್ಸ್ 408 ಹಾಗೂ ದ್ವಿತೀಯ ಇನ್ನಿಂಗ್ಸ್ 224
ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್ 505
ದ್ವೀತಿಯ ಇನ್ನಿಂಗ್ಸ್ 12 ರನ್ ಗಳಿಸಿದೆ
Advertisement