ಜಯದ ವಿಶ್ವಾಸದಲ್ಲಿ ಬಿಎಫ್ಸಿ
ಬೆಂಗಳೂರು: ಅಗ್ರಸ್ಥಾನದಲ್ಲಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ ಭಾನುವಾರ ನಡೆಯಲಿರುವ ಐ-ಲೀಗ್ ಪಂದ್ಯದಲ್ಲಿ ಮುಂಬೈ ಫುಟ್ಬಾಲ್ ಕ್ಲಬ್ ವಿರುದ್ಧ ಸೆಣಸಲಿದೆ.
ಇನ್ನು ಕೇವಲ 9 ಪಂದ್ಯಗಳು ಬಾಕಿ ಉಳಿದಿರುವ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಕುಸಿತ ಕಾಣುವುದು ಬಿಎಫ್ಸಿಗೆ ಹಿನ್ನಡೆ ಉಂಟುಮಾಡಲಿದೆ. ಹೀಗಾಗಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ ತಂಡಕ್ಕಿಂತ ಕೇವಲ 2 ಅಂಕ ವ್ಯತ್ಯಾಸ ಹೊಂದಿರುವ ಬಿಎಫ್ಸಿ ಈ ಪಂದ್ಯದಲ್ಲಿ ಜಯ ಕಾಣಲು ಅದು ಎದುರು ನೋಡುತ್ತಿದೆ.ಆರಂಭದಿಂದಲೂ ತವರಿನ ಅಂಗಣದಲ್ಲಿ ಗೆಲ್ಲುವ ಫೇವರಿಟ್ ಎನಿಸಿರುವ ಆ್ಯಶ್ಲಿ ವೆಸ್ಟ್ವುಡ್ ಗರಡಿಯಲ್ಲಿ ಪಳಗಿದ ಬಿಎಫ್ಸಿ, ಈ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಸೋಲುಣಿಸಿದರೆ, ಅಚ್ಚರಿಪಡಬೇಕಿಲ್ಲ.ಇನ್ನು ಮುಂಬೈ ಎಫ್ಸಿ ತಂಡ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಆದರೆ, ಸತತ 9 ಪಂದ್ಯಗಳಲ್ಲಿ ಜಯ ಕಂಡು ಫಾರ್ಮ್ನಲ್ಲಿರುವ ತಂಡದ ಆಟಗಾರರು ಬೆಂಗಳೂರು ವಿರುದ್ಧ ಜಯ ಕಾಣಲು ಎದುರು ನೋಡುತ್ತಿದೆ. ಅಲ್ಲದೆ, ಬೆಂಗಳೂರು ವಿರುದ್ಧ ಸೋತರೆ, ತಮ್ಮ ತಂಡ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿಯಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡಿರುವ ಮುಂಬೈ ಕನಿಷ್ಟ ಡ್ರಾ ಸಾಧಿಸಲು ಎದುರು ನೋಡುತ್ತಿದೆ. 'ಉಭಯ ತಂಡಗಳು ಬಲಿಷ್ಠ ಆಟಗಾರರನ್ನು ಹೊಂದಿವೆ. ನಾವು ಯಾವುದೇ ರೀತಿಯಲ್ಲಿ ಎದುರಾಳಿ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಈ ಪಂದ್ಯ ನಮಗೆ ಕೊಂಚ ಕಠಿಣವಾಗಿದೆ' ಎಂದು ಬೆಂಗಳೂರು ತಂಡದ ಕೋಚ್ ವೆಸ್ಟ್ವುಡ್ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

