ಕ್ರೀಡೆ

ವೇವ್ರೈಡರ್ಸ್ಗೆ ಪ್ರಶಸ್ತಿ

Published On :

ರಾಂಚಿ: ಪೆನಾಲ್ಟಿ ಶೂಟೌಟ್ನಲ್ಲಿ ಜೇಪಿ ಪಂಜಾಬ್ ವಾರಿಯರ್ಸ್ ತಂಡವನ್ನು ಪರಾಭವಗೊಳಿಸುವಲ್ಲಿ ಯಶಸ್ವಿಯಾದ ಡೆಲ್ಲಿ ವೇವ್ರೈಡರ್ಸ್ ತಂಡ ಹಾಕಿ ಇಂಡಿಯಾ ಲೀಗ್ನ ಎರಡನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಇದರೊಂದಿಗೆ, ಕಳೆದ ವರ್ಷ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದ ಡೆಲ್ಲಿ ತಂಡ, ಪಂದ್ಯಾವಳಿಯಲ್ಲಿ ಸತತ ಎರಡನೇ ಬಾರಿ ಫೈನಲ್ ಹೋರಾಟ ನಡೆಸಿದಂತಾಯಿತು. ನಿಗದಿತ 70 ನಿಮಿಷಗಳ ಪಂದ್ಯ 3-3 ಗೋಲುಗಳ ಅಂತರದಿಂದ ಅಂತ್ಯಗೊಂಡಿತ್ತು. ಹೀಗಾಗಿ ನಂತರ ನಡೆದ ಶೂಟೌಟ್ನಲ್ಲಿ ಡೆಲ್ಲಿ ವೇವ್ರೈಡರ್ಸ್ ತಂಡ ಪಂಜಾಬ್ ವಾರಿಯರ್ಸ್ ತಂಡದ ವಿರುದ್ಧ 3-1 ಗೋಲುಗಳ ಅಂತರದಿಂದ ಜಯಕಂಡಿತು.ಆಕರ್ಷಕ ರಕ್ಷಣಾತ್ಮಕ ಆಟ ಪ್ರದರ್ಶಿಸಿ ಪಂಜಾಬ್ಗೆ ಗೋಲು ಗಳಿಸಲು ಸಿಕ್ಕ ಹಲವಾರು ಅವಕಾಶಗಳನ್ನು ತಪ್ಪಿಸಿದ ನಿಕೋಲಸ್ ಜಾಕೋಬಿ ಅವರಿಗೆ ಡೆಲ್ಲಿ ತಂಡದ ಜಯದ ಶ್ರೇಯಸ್ಸು ಸಲ್ಲಬೇಕು.
ಪಂದ್ಯದ ಮಹತ್ವದ ಸಮಯದಲ್ಲಿ ಎದುರಾಳಿ ತಂಡ ಗೋಲು ಗಳಿಸದಂತೆ ತಡೆದ ಜಾಕೋಬಿ, ನಂತರ ಶೂಟೌಟ್ ಹಂತದಲ್ಲಿ ಬಂಡೆಯಂತೆ ಗೋಲ್ ಪೆಟ್ಟಿಗೆಯ ಎದುರು ನಿಲ್ಲುವ ಮೂಲಕ ಪಂಜಾಬ್ ತಂಡದ ಮೊದಲ ಮೂರು ಅವಕಾಶಗಳನ್ನು ತಪ್ಪಿಸುವಲ್ಲಿ ಯಶಸ್ವಿಯಾದರು. ನಂತರ ರಾಬರ್ಟ್ ಹಮ್ಮಾಂಡ್ ಮಾತ್ರ ಪಂಜಾಬ್ ಪರ 1 ಗೋಲು ದಾಖಲಿಸಿದರು. ಶೂಟೌಟ್ ಹಂತದಲ್ಲಿ ಮೂರು ಗೋಲು ದಾಖಲಿಸುವ ಮೂಲಕ ಗೆಲ್ಲುವುದರೊಂದಿಗೆ ಡೆಲ್ಲಿ ತಂಡ ರು. 2.5 ಕೋಟಿ ಮೊತ್ತದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಇನ್ನು ರನ್ನರ್ ಅಪ್ ಪ್ರಶಸ್ತಿ ಪಡೆದ ಪಂಜಾಬ್ ತಂಡ ರು. 1.25 ಕೋಟಿ ಹಣ ತನ್ನದಾಗಿಸಿಕೊಂಡಿತು. ಮೂರನೇ ಸ್ಥಾನ ಪಡೆದ ಕಳೆದ ವರ್ಷದ ಚಾಂಪಿಯನ್ ರಾಂಚಿ ರೈನೋಸ್ ತಂಡ ರು. 75 ಲಕ್ಷ ಪಡೆಯಿತು. ಭಾನುವಾರ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ರಾಂಚಿ ತಂಡ ಉತ್ತರ ಪ್ರದೇಶ ವಿಜಾರ್ಡ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲೇ 3-2 ಗೋಲುಗಳ ಅಂತರದಿಂದ ಜಯ ಸಾಧಿಸಿತ್ತು. ಇದಕ್ಕೂ ಮುನ್ನ ನಿಗದಿತ ಸಮಯದಲ್ಲಿ ಉಭಯ ತಂಡಗಳು 1-1 ಗೋಲುಗಳ ಅಂತರದಿಂದ ಸಮಬಲ ಸಾಧಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.