ಟೆನಿಸ್ ರ್ಯಾಂಕಿಂಗ್: 78ನೇ ಕ್ರಮಾಂಕದಲ್ಲಿ ಸೋಮದೇವ್
ನವದೆಹಲಿ: ದೆಹಲಿ ಓಪನ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವುದರೊಂದಿಗೆ ಭಾರತದ ಸೋಮದೇವ್ ದೇವವರ್ಮನ್ ನೂತನ ವಿಶ್ವ ಟೆನಿಸ್ ರ್ಯಾಂಕಿಂಗ್ನಲ್ಲಿ 18 ಸ್ಥಾನ ಮೇಲೇರಿದ್ದಾರೆ. ಆ ಮೂಲಕ ಅವರು ವಿಶ್ವದ 78ನೇ ಕ್ರಮಾಂಕದ ಗೌರವ ಪಡೆದಿದ್ದಾರೆ.
ಭಾನುವಾರ ನಡೆದ ಸಿಂಗಲ್ಸ್ ಫೈನಲ್ನಲ್ಲಿ ಅಗ್ರಶ್ರೇಯಾಂಕಿತ ಆಟಗಾರ ಕಜಕಿಸ್ತಾನದ ಅಲೆಕ್ಸಾಂಡರ್ ನೆಡೊಯೇಸೊವ್ ಅವರನ್ನು ಸೋಲಿಸಿದ ಸೋಮ್ದೇನ್ ಒಟ್ಟು 100 ಅಂಕಗಳನ್ನು ಸಂಪಾದಿಸಿದರು. ಸೋಮ್ದೇವ್ 2011ರಲ್ಲಿ 62ನೇ ಕ್ರಮಾಂಕ ತಲುಪಿದ್ದು ಅವರು ಉತ್ತಮ ಸಾಧನೆಯಾಗಿದೆ.
ಮಂಗಳವಾರದಿಂದ ಆರಂಭವಾಗಲಿರುವ ದುಬೈ ಡ್ಯೂಟಿ ಫ್ರೀ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಆಟಗಾರ, ವಿಶ್ವದ 5ನೇ ಶ್ರೇಯಾಂಕಿತ ಹಾಗೂ 2009ರ ಯುಎಸ್ ಓಪನ್ ಚಾಂಪಿಯನ್ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರನ್ನು ಎದುರಿಸಲಿದ್ದು, ಈ ಸವಾಲು ಅತ್ಯಂತ ಕಠಿಣ ಸವಾಲಾಗಿದೆ. ಈ ಮಧ್ಯೆ ಭಾರತದ ಎರಡನೇ ಶ್ರೇಷ್ಠ ಸಿಂಗಲ್ಸ್ ಆಟಗಾರ ದೆಹಲಿಯ ಯುಕಿ ಭಾಂಬ್ರಿ ಮೂರು ಸ್ಥಾನ ಕುಸಿದಿದ್ದು, 146ಕ್ಕೆ ತೃಪ್ತಿ ಹೊಂದಿದ್ದಾರೆ. ದೆಹಲಿ ಓಪನ್ನಲ್ಲಿ ಅವರು ಮೊದಲ ಸುತ್ತಿನಲ್ಲಿಯೇ ಆಘಾತ ಅನುಭವಿಸಿದ್ದರು. ಡಬಲ್ಸ್ ವಿಭಾಗದಲ್ಲಿ ಲಿಯಾಂಡರ್ ಪೇಸ್ 10ನೇ ಕ್ರಮಾಂಕದಲ್ಲಿದ್ದು, ಭಾರತದ ಪರ ಉತ್ತಮ ರ್ಯಾಂಕ್ ಹೊಂದಿದ್ದಾರೆ. ಉಳಿದಂತೆ, ರೋಹನ್ ಬೋಪಣ್ಣ 16ನೇ ಹಾಗೂ ಮಹೇಶ್ ಭೂಪತಿ 41ನೇ ಸ್ಥಾನಕ್ಕೆ ಕುಸಿದಿದ್ದಾರೆ. ಎಡಗೈ ಆಟಗಾರ ದಿವಿಜ್ ಶರಣ್ (65) ನಂತರದ ಉತ್ತಮ ಕ್ರಮಾಂಕದಲ್ಲಿರುವ ಭಾರತೀಯ ಆಟಗಾರರಾಗಿದ್ದಾರೆ.
ಇನ್ನು ಮಹಿಳೆಯರ ವಿಭಾಗದಲ್ಲಿ ಸಾನಿಯಾ ಮಿರ್ಜಾ ಅಗ್ರ 10ರಿಂದ ಹೊರಗುಳಿದಿದ್ದು, 11ರಲ್ಲಿದ್ದಾರೆ. ದುಬೈ ಓಪನ್ನ ಡಬಲ್ಸ್ನಲ್ಲಿ ಜಿಂಬಾಬ್ವೆಯ ಕಾರಾ ಬ್ಯ್ಲಾಕ್ ಜೊತೆಗೂಡಿ ಆಡಿದ್ದ ಸಾನಿಯಾ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

