ಕ್ರೀಡೆ

ಕೊಹ್ಲಿಗೆ ತಲೆದೂಗಿದ ಬಾಂಗ್ಲಾ

ಕೊಹ್ಲಿಗೆ ತಲೆದೂಗಿದ ಬಾಂಗ್ಲಾ
Published On :

ಫಾತುಲ್ಹಾ: ಅತ್ಯದ್ಭುತ ಫಾರ್ಮ್‌ನಿಂದ ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ವಿರಾಟ್ ಕೊಹ್ಲಿ(136) ಏಷ್ಯಾಕಪ್ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಭಾರತ ಸುಲಭ ಗೆಲವು ದಾಖಲಿಸುವಂತೆ ನೋಡಿಕೊಂಡರು. ಈ ಮೂಲಕ ಭಾರತ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿತು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ಬಾಂಗ್ಲಾದೇಶವನ್ನು 50 ಓವರ್‌ಗಳಲ್ಲಿ 279 ರನ್‌ಗಳಿಗೆ 7 ವಿಕೆಟ್ ಪಡೆಯುವ ಮೂಲಕ ನಿಯಂತ್ರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ 49 ಓವರ್‌ಗಳಲ್ಲಿ 4 ವಿಕೆಟ್‌ಗೆ 280 ರನ್ ಪೇರಿಸುವ ಮೂಲಕ 6 ವಿಕೆಟ್‌ಗಳ ಗೆಲವು ದಾಖಲಿಸಿತು.
ಕಾಡಿದ ಕೊಹ್ಲಿ: ಬಾಂಗ್ಲಾ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಮತ್ತೊಮ್ಮೆ ಆಸರೆಯಾಗಿದ್ದು ನಾಯಕ ವಿರಾಟ್ ಕೊಹ್ಲಿ. ಚೇಸಿಂಗ್ ಪಂದ್ಯದಲ್ಲಿ ಭಾರತ ತಂಡದ ಯಶಸ್ಸಿನಲ್ಲಿ ಸಿಂಹಪಾಲು ಕಾಣಿಕೆ ನೀಡಿರುವ ಕೊಹ್ಲಿ ಈ ಪಂದ್ಯದಲ್ಲೂ ತಮ್ಮ ಅಮೋಘ ಬ್ಯಾಟಿಂಗ್ ಮುಂದುವರಿಸಿದರು.
280 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕರಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ, ಎಚ್ಚರಿಕೆಯ ಆರಂಭ ನೀಡಲು ಮುಂದಾದರು. ಆರಂಭಿಕ 3 ಓವರ್‌ಗಳಲ್ಲಿ ಕೇವಲ 1 ರನ್ ಗಳಿಸಿತ್ತು. ನಂತರ ರನ್‌ರೇಟ್ ಹೆಚ್ಚಿಸಿದ ಈ ಜೋಡಿ 50 ರನ್ ಪೂರೈಸಿತು.
ನಂತರ 54 ರನ್‌ಗಳಾಗುವಷ್ಟರಲ್ಲಿ ಆರಂಭಿಕ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿಕೊಂಡಾಗ, ಬಾಂಗ್ಲಾ ಪಂದ್ಯದಲ್ಲಿ ಹಿಡಿತ ಸಾಧಿಸುವ ಪ್ರಯತ್ನ ನಡೆಸಿತು.
ಆಗ ಜತೆಯಾದ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಪಂದ್ಯವನ್ನು ಎದುರಾಳಿಗಳಿಂದ ಸಂಪೂಣಂವಾಗಿ ಕಸಿದುಕೊಂಡರು. ಈ ಜೋಡಿ ಮೂರನೇ ವಿಕೆಟ್‌ಗೆ 213 ರನ್‌ಗಳ ದ್ವಿಶತಕದ ಜತೆಯಾಟ ನೀಡುವ ಮೂಲಕ ತಂಡ ಸುಲಭವಾಗಿ ಗೆಲವಿನ ದಡ ಸೇರುವಂತೆ ಮಾಡಿತು.
ತಮ್ಮ ಫಾರ್ಮ್ ಪ್ರಭುತ್ವವನ್ನು ಮುಂದುವರಿಸಿದ ವಿರಾಟ್ ಕೊಹ್ಲಿ (136 ರನ್, 122 ಎಸೆತ, 16 ಬೌಂಡರಿ, 2 ಸಿಕ್ಸರ್) ಏಕದಿನ ಕ್ರಿಕೆಟ್‌ನಲ್ಲಿ 19ನೇ ಶತಕ ದಾಖಲಿಸಿದರು. ಕೊಹ್ಲಿಗೆ ಇನಿಂಗ್ಸ್ ಕಟ್ಟಲು ಬೆಂಬಲವಾಗಿ ನಿಂತ ರಹಾನೆ (73) ಏಕದಿನದಲ್ಲಿ ನಾಲ್ಕನೇ ಅರ್ಧ ಶತಕ ಪೂರೈಸಿದರು.
ಕೊಹ್ಲಿ ಎಂದಿನಂತೆ ಆರಂಭದಲ್ಲಿ ರಕ್ಷಣಾತ್ಮಕವಾಗಿ ಆರಂಭ ಪಡೆದು ನಂತರ ಕ್ರಮೇಣ ಸ್ಫೋಟಕವಾಗಿ ಬ್ಯಾಟ್ ಬೀಸಿದರು. ಇನ್ನು ರಹಾನೆ ತಮ್ಮ ರಕ್ಷಣಾತ್ಮಕ ಆಟದಿಂದಲೇ ಕೊಹ್ಲಿಗೆ ಅತ್ಯುತ್ತಮ ಸಾಥ್ ನೀಡುವ ಜವಾಬ್ದಾರಿನಿಭಾಯಿಸಿದರು.
ಮುಶ್ಫಿಕುರ್ ಶತಕ: ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆತಿಥೇಯ ಬಾಂಗ್ಲಾ, ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿತು.
ಭಾರತ ತಂಡದ ಪರ ಪರಿಣಾಮಕಾರಿ ಬೌಲಿಂಗ್ ದಾಳಿಯನ್ನು ಮುಂದುವರಿಸಿರುವ ಮೊಹಮದ್ ಶಮಿ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳಿಗೆ ಮಾರಕವಾಗಿ ಪರಿಣಮಿಸಿದರು. ಕೇವಲ 7 ರನ್ ಗಳಿಸಿದ್ದ ಆರಂಭಿಕ ಶಮ್ಸೂರ್ ರೆಹಮಾನ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ ಶಮಿ, ಆರಂಭದಲ್ಲೇ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಹಾಗಾಗಿ ಬಾಂಗ್ಲಾ ತಂಡ ಆರಂಭಿಕರಿಂದ ಭದ್ರ ಅಡಿಪಾಯ ಸಿಗಲಿಲ್ಲ.  
ನಂತರ ಬಂದ ಮೊಮಿನುಲ್ ಹಕ್(23) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ ಮೂರನೇ ವಿಕೆಟ್‌ಗೆ ಆರಂಭಿಕ ಅನಾಮುಲ್ ಹಕ್(77 ರನ್, 106 ಎಸೆತ, 5 ಬೌಂಡರಿ, 3 ಸಿಕ್ಸರ್‌ಗಳು) ಜತೆಯಾದ ನಾಯಕ ಮುಶ್ಫಿಕುರ್ ರಹೀಮ್(117 ರನ್, 113 ಎಸೆತ, 7 ಬೌಂಡರಿ, 2 ಸಿಕ್ಸರ್‌ಗಳು) ತಂಡಕ್ಕೆ 133 ರನ್‌ಗಳ ಶತಕದ ಜತೆಯಾಟ ನೀಡಿದರು.
ಕುಸಿತ ಕಾಣುತ್ತಿದ್ದ ಬಾಂಗ್ಲಾ ತಂಡಕ್ಕೆ ಈ ಇಬ್ಬರು ಆಟಗಾರರ ಅಮೂಲ್ಯಯುತ ಬ್ಯಾಟಿಂಗ್ ಪ್ರದರ್ಶನ ತಂಡ 279 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಯಿತು.

ಬಾಂಗ್ಲಾದೇಶ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 279
ಅನಾಮುಲ್ ಹಕ್ ಬಿ ಎರಾನ್ 77(106)
ಶಮ್ಸೂರ್ ರೆಹಮಾನ್ ಸಿ ಮತ್ತು ಬಿ ಮೊಹಮದ್ ಶಮಿ 7(12)
ಮೊಮಿನುಲ್ ಹಕ್ ಸ್ಟಂಪ್ ಕಾರ್ತಿಕ್ ಬಿ ಅಶ್ವಿನ್ 23(29)
ಮುಶ್ಫಿಕುರ್ ರಹೀಮ್ ಸಿ ರೋಹಿತ್ ಬಿ ಮೊಹಮದ್ ಶಮಿ 117(113)
ನಯೀಮ್ ಇಸ್ಲಾಮ್ ಸಿ ಅಶ್ವಿನ್ ಬಿ ಮೊಹಮದ್ ಶಮಿ 14(19)
ನಾಸಿರ್ ಹೊಸೈನ್ ಸಿ ಕಾರ್ತಿಕ್ ಬಿ ಮೊಹಮದ್ ಶಮಿ 1(6)
ಜಿಯುರ್ ರೆಹಮಾನ್ ಸಿ ಎರಾನ್ ಬಿ ಭುವನೇಶ್ವರ್ 18(12)
ಸೋಹಾಗ್ ಗಾಜಿ ಅಜೇಯ 3(4)
ಮಶ್ರಫೆ ಮೊರ್ಟಾಜಾ ಅಜೇಯ 1(1)
ಇತರೆ (ಬೈ 1, ಎಲ್‌ಬಿ 3, ವೈಡ್ 12, ನೋಬಾಲ್ 2) ಒಟ್ಟು 18
ವಿಕೆಟ್ ಪತನ: 1-16, 2-49, 3-182, 4-231, 5-241, 6-270, 7-276
ಬೌಲಿಂಗ್ ವಿವರ:
ಭುವನೇಶ್ವರ್ ಕುಮಾರ್ 8-1-41-1
ಮೊಹಮದ್ ಶಮಿ 10-1-50-4
ವರುಣ್ ಎರಾನ್ 7.5-0-74-1
ಆರ್.ಅಶ್ವಿನ್ 10-1-50-1
ರವೀಂದ್ರ ಜಡೇಜಾ 10-0-37-0
ಅಂಬಟಿ ರಾಯುಡು 3-0-17-0
ವಿರಾಟ್ ಕೊಹ್ಲಿ 1.1-0-6-0

ಭಾರತ 49 ಓವರ್‌ಗಳಲ್ಲಿ 4 ವಿಕೆಟ್‌ಗೆ 280
ರೋಹಿತ್ ಶರ್ಮಾ ಬಿ ಜಿಯುರ್ ರೆಹಮಾನ್ 21(29)
ಶಿಖರ್ ಧವನ್ ಎಲ್‌ಬಿ ಅಬ್ದುರ್ ರಜಾಕ್ 28(44)
ವಿರಾಟ್ ಕೊಹ್ಲಿ ಬಿ ರುಬೆಲ್ ಹೊಸೈನ್ 136(122)
ಅಜಿಂಕ್ಯ ರಹಾನೆ ಸಿ ಇಮ್ರುಲ್ ಬಿ ಸೊಹಾಗ್ ಗಾಜಿ 73(83)
ಅಂಬಟಿ ರಾಯುಡು ಅಜೇಯ 9(15)
ದಿನೇಶ್ ಕಾರ್ತಿಕ್ ಅಜೇಯ 2(2)
ಇತರೆ (ಎಲ್‌ಬಿ 1, ವೈಡ್ 9, ನೋಬಾಲ್ 1) ಒಟ್ಟು 11
ವಿಕೆಟ್ ಪತನ: 1-50, 2-54, 3-267, 4-272
ಬೌಲಿಂಗ್ ವಿವರ:
ಮಶ್ರಫೆ ಮೊರ್ಟಾಜಾ 9-1-44-0
ರುಬೆಲ್ ಹೊಸೈನ್ 10-1-63-1
ಅಬ್ದುರ್ ರಜಾಕ್ 10-0-55-1
ಜಿಯುರ್ ರೆಹಮಾನ್ 5-0-20-1
ಸೊಹಾಗ್ ಗಾಜಿ 8-0-49-1
ಮೊಮಿನುಲ್ ಹಕ್ 2-0-13-0
ನಯೀಮ್ ಇಸ್ಲಾಮ್ 1-0-15-0
ನಾಸಿರ್ ಹೊಸೈನ್ 3-0-16-0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.