ಮೈಸೂರಿನಲ್ಲಿ ಮಹಿಳಾ ಹಾಕಿ
ನವದೆಹಲಿ: ಹಾಕಿ ಇಂಡಿಯಾ ಜೂನಿಯರ್ ಮಹಿಳೆಯರ ರಾಷ್ಟ್ರೀಯ ಚಾಂಪಿಯನ್ಶಿಪ್ ಮೈಸೂರಿನಲ್ಲಿ ಮಾರ್ಚ್ 5ರಿಂದ 23ರ ವರೆಗೆ ನಡೆಯಲಿದೆ.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿರುವ ಲೀಗ್-ಕಮ್-ನಾಕೌಟ್ ಮಾದರಿಯ ಪಂದ್ಯಾವಳಿಯಲ್ಲಿ ಒಟ್ಟು 32 ತಂಡಗಳು ಪಾಲ್ಗೊಳ್ಳಲಿವೆ.
'ಎ' ಮತ್ತು 'ಬಿ' ಈ ಎರಡು ವಿಭಾಗಗಳಲ್ಲಿ ಪಂದ್ಯಾವಳಿ ನಡೆಯಲಿದ್ದು, ತಲಾ ವಿಭಾಗ 16 ತಂಡಗಳನ್ನು ಒಳಗೊಂಡಿದ್ದು, ಅವುಗಳನ್ನು 'ಎ' 'ಬಿ' 'ಸಿ' ಮತ್ತು 'ಡಿ' ಈ 4 ಗುಂಪುಗಳಲ್ಲಿ ವಿಭಜಿಸಲಾಗಿದೆ.
ಮೊದಲಿಗೆ ಮಾರ್ಚ್ 5ರಿಂದ 13ರ ವರೆಗೆ 'ಬಿ' ವಿಭಾಗದ ಪಂದ್ಯಗಳು ನಡೆಯಲಿದ್ದರೆ, ಮಾ. 15ರಿಂದ 23ರ ವರೆಗೆ 'ಎ' ವಿಭಾಗದ ಪಂದ್ಯಗಳು ಜರುಗಲಿವೆ. ಈ ಬಾರಿಯ ಟೂರ್ನಿಯಲ್ಲಿ ಓಡಿಶಾದ ಹಾಕಿ ಗಂಗಾಪುರ ಮತ್ತು ವಿದರ್ಭ ಹಾಕಿ ಸಂಸ್ಥೆ ಈ ಎರಡು ಹೊಸ ತಂಡಗಳು ಪಾಲ್ಗೊಳ್ಳಲಿವೆ.
ಮಾ. 5ರ ಉದ್ಘಾಟನೆ ಪಂದ್ಯದಲ್ಲಿ 'ಸಿ'ಗುಂಪಿನ ತಂಡಗಳಾದ ಛತ್ತೀಸ್ಗಢ ಮತ್ತು ಹಿಮಾಚಲಪ್ರದೇಶ ತಂಡಗಳು ಸೆಣಸಲಿವೆ. ಅದೇ ರೀತಿ, ಮಾ.15ರ ಉದ್ಘಾಟನೆ ಪಂದ್ಯದಲ್ಲಿ 'ಸಿ' ಗುಂಪಿನ ತಂಡಗಳಾದ ಕಳೆದ ಬಾರಿಯ ಕಂಚಿನ ಪದಕ ವಿಜೇತ ಜಾರ್ಖಂಡ್ ಮತ್ತು ಬಂಗಾಳ ಪರಸ್ಪರ ಮುಖಾಮುಖಿಯಾಗಲಿವೆ.
ಹಾಲಿ ಚಾಂಪಿಯನ್ ಹರಿಯಾಣ 'ಎ' ವಿಭಾಗದ 'ಎ' ಗುಂಪಿನಲ್ಲಿ ಸ್ಥಾನ ಹೊಂದಿದ್ದರೆ, ಪಂದ್ಯಾವಳಿಯ ಆತಿಥ್ಯ ವಹಿಸಿರುವ ಕರ್ನಾಟಕದ ವನಿತೆಯರು 'ಎ' ವಿಭಾಗದ 'ಬಿ' ಗುಂಪಿನಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಹರಿಯಾಣ ತಂಡ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಮಧ್ಯಪ್ರದೇಶ ಹಾಕಿ ಅಕಾಡೆಮಿಯನ್ನು 2-1 ಗೋಲುಗಳಿಂದ ಸೋಲಿಸಿ ಚಾಂಪಿಯನ್ಪಟ್ಟ ಅಲಂಕರಿಸಿತ್ತು.
'ಎ'ವಿಭಾಗ
'ಎ' ಗುಂಪು: ಹರಿಯಾಣ, ತಮಿಳುನಾಡು, ಸಾಯ್, ರಾಜಸ್ಥಾನ
'ಬಿ' ಗುಂಪು: ಮಧ್ಯಪ್ರದೇಶ, ದೆಹಲಿ, ಕರ್ನಾಟಕ, ಭೋಪಾಲ್
'ಸಿ' ಗುಂಪು: ಜಾರ್ಖಂಡ್, ಉತ್ತರಪ್ರದೇಶ, ಬಂಗಾಳ, ಮಹಾರಾಷ್ಟ್ರ
'ಡಿ' ಗುಂಪು: ಪಂಜಾಬ್, ಓಡಿಶಾ, ಮುಂಬಯಿ, ಬಿಹಾರ
'ಬಿ' ವಿಭಾಗ
'ಎ' ಗುಂಪು: ಮಣಿಪುರ, ಉತ್ತರಾಖಂಡ, ತ್ರಿಪುರಾ, ವಿದರ್ಭ
'ಬಿ' ಗುಂಪು: ಅಸ್ಸಾಂ, ಆಂಧ್ರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಓಡಿಶಾದ ಗಂಗಾಪುರ
'ಸಿ' ಗುಂಪು: ಛತ್ತೀಸ್ಗಢ, ಗೋವಾ, ಹಿಮಾಚಲಪ್ರದೇಶ, ಮಿಜೋರಾಂ
'ಡಿ' ಗುಂಪು: ಕೇರಳ, ಗುಜರಾತ್, ಚಂಡೀಗಢ, ಪುದುಚೆರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

