ಕಾಮನ್‌ವೆಲ್ತ್ ಗೇಮ್ಸ್: ವನಿತೆಯರ ಹಾಕಿ ತಂಡಕ್ಕೆ ರೀತು ರಾಣಿ ನಾಯಕಿ

ನವದೆಹಲಿ: ಗ್ಲಾಸ್ಗೊದಲ್ಲಿ ಇದೇ ಜುಲೈ 23ರಿಂದ ಆಗಸ್ಟ್ 3ರ ವರೆಗೆ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಕೂಟಕ್ಕೆ ಭಾರತೀಯ ಮಹಿಳಾ ಹಾಕಿ ತಂಡ ಪ್ರಕಟಿಸಲಾಗಿದ್ದು, ಅನುಭವಿ ಆಟಗಾರ್ತಿ ರಿತು ರಾಣಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಎನ್‌ಐಎಸ್ ಪಟಿಯಾಲದಲ್ಲಿ ಜೂನ್ 28 ಮತ್ತು 29ರಂದು ನಡೆದ ಆಯ್ಕೆ ಟ್ರಯಲ್ಸ್ ಮೂಲಕ ಹಾಕಿ ಇಂಡಿಯಾ ಆಯ್ಕೆದಾರರಾದ ಬಿ.ಪಿ. ಗೋವಿಂದ್, ಹರ್ವಿಂದರ್ ಸಿಂಗ್, ಸುರೀಂದರ್ ಸಿಂಗ್, ಉನ್ನತ ಪ್ರದರ್ಶನ ಮಟ್ಟದ ನಿರ್ದೇಶಕ ರೋಲಂಟ್ ಓಲ್ಟಮಸ್, ಮುಖ್ಯ ಕೋಚ್ ನೀಲ್ ಹಾಗುಡ್ ಮತ್ತು ವೆಜ್ಞಾನಿಕ ಸಲಹೆಗಾರ ಮ್ಯಾಥ್ಯೂ ಟ್ರೆಡ್ರಿಯಾ ಅವರು ತಂಡವನ್ನು ಆರಿಸಿದ್ದಾರೆ. ಹದಿನಾರು ಸದಸ್ಯರ ತಂಡಕ್ಕೆ ಸಂಪರ್ಕ ಆಟಗಾರ್ತಿ ರಿತು ರಾಣಿ ನಾಯಕಿಯಾಗಿದ್ದರೆ, ರಕ್ಷಣಾ ಆಟಗಾರ್ತಿ ದೀಪಿಕಾ ಉಪನಾಯಕಿಯಾಗಿದ್ದಾರೆ. ಸಾಕಷ್ಟು ಅನುಭವಿಯಾಗಿರುವ ದೀಪಿಕಾ 126 ಪಂದ್ಯಗಳನ್ನು ಆಡಿದ್ದಾರೆ.
ಇತ್ತೀಚೆಗೆ ಮಲೇಷಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಭಾರತದ ವನಿತೆಯರು ಜೂನ್ 24ರಂದು ನಡೆಯಲಿರುವ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಬಳಿಕ ಜೂನ್ 27ರಂದು ನ್ಯೂಜಿಲೆಂಡ್, ಜು. 28ರಂದು ಟ್ರಿನಿಡಾಡ್ ಆ್ಯಂಡ್ ಟೊಬೇಗೊ ಹಾಗೂ ಜು. 30ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದ್ದಾರೆ. ಪ್ರಸ್ತುತ ವನಿತೆಯರು ಪಟಿಯಾಲಾದಲ್ಲಿ ನಡೆಯುಲಿರುವ ಸಿದ್ಧತಾ ಸಿಬಿರದಲ್ಲಿ ಪಾಲ್ಗೊಂಡಿದ್ದು, ಜುಲೈ 9ರಂದು ಸ್ಕಾಟ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ.ಭಾರತ ವನಿತೆಯರ ತಂಡ: ಗೋಲ್‌ಕೀಪರ್- ಸವಿತಾ, ರಕ್ಷಣೆ- ದೀಪ ಗ್ರೇಸ್ ಎಕ್ಕಾ, ದೀಪಿಕಾ (ಉಪನಾಯಕಿ), ಕಿರಣ್‌ದೀಪ್ ಕೌರ್, ನಮೀತಾ ಟೊಪ್ಪೊ, ಜಸ್‌ಪ್ರೀತ್ ಕೌರ್. ಸಂಪರ್ಕ- ರಿತು ರಾಣಿ (ನಾಯಕಿ), ಸುಶೀಲಾ ಚಾನು, ಲಿಲಿಮಾ ಮಿಂಜ್, ವಂದನಾ ಕತಾರಿಯಾ, ನವಜೋತ್ ಕೌರ್. ಮುನ್ಪಡೆ-ರಾಣಿ, ಪೂನಂ ರಾಣಿ, ರಿತುಶಾ ಆರ್ಯ, ಅನುಪಾ ಬಾರ್ಲಾ, ಅನುರಾಧಾ ದೇವಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


