ಕ್ರೀಡೆ

ಅನುಭವ, ತರ್ಕದ ಮೇಲೆ ನಿರ್ಧಾರ ಕೈಗೊಳ್ಳುವೆ: ಧೋನಿ

Published On :

ನಾಟಿಂಗ್ಹ್ಯಾಮ್: ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಪಡೆದು ಭಾರತ ಕ್ರಿಕೆಟ್ ತಂಡವನ್ನು ಕಳೆದ ಏಳು ವರ್ಷಗಳಿಂದ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿರುವ ಮಹೇಂದ್ರ ಸಿಂಗ್ ಧೋನಿ, ಪಂದ್ಯದ ವೇಳೆ ತಮ್ಮ ಅನುಭವ ಹಾಗೂ ತರ್ಕದ ಆಧಾರದ ಮೇಲೆ ಊಹಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಸೋಮವಾರ 33ನೇ ವಸಂತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, 2007ರಲ್ಲಿ ತಮಗೆ ನಾಯಕತ್ವದ ಜವಾಬ್ದಾರಿ ನೀಡದ ಸಮಯವನ್ನು ಮೇಲಕು ಹಾಕಿದರು. ನಾನು ಹೆಚ್ಚು ಯೋಜನೆ ರೂಪಿಸುವುದಿಲ್ಲ.
ನನ್ನ ಊಹೆಗಳು ಅನುಭವ ಹಾಗೂ ತರ್ಕದ ಆಧಾರದ ಮೇಲೆ ನಿಂತಿರುತ್ತವೆ. ಆದರೆ ಬಹುತೇಕ ಮಂದಿ ಈ ರೀತಿಯಾಗಿ ಊಹೆ ಮಾಡಲು ಹೆಚ್ಚಿನ ಅನುಭವ ಹೊಂದಿರಬೇಕು ಎಂಬುದನ್ನು ಮರೆತಿರುತ್ತಾರೆ ಎಂದು ಅಭಿಪ್ರಾಯಪಟ್ಟರು.
ಇನ್ನು ತಂಡದಲ್ಲಿ ಹಿರಿಯ ಆಟಗಾರರನ್ನು ಹೊಂದಿದ್ದರ ಬಗ್ಗೆ ಮಾತನಾಡಿದ ಧೋನಿ, ಎಲ್ಲಾ ಹಿರಿಯ ಆಟಗಾರರು ಹೆಚ್ಚು ಅನುಭವ ಹೊಂದಿದ್ದು, ನನಗೆ ಅತ್ಯುತ್ತಮ ಸಲಹೆಗಳನ್ನು ನೀಡುತ್ತಿದ್ದರು. ಅಲ್ಲದೆ ಅವರ ಸಲಹೆಗಳು ನನಗೆ ಇಷ್ಟವಾಗದಿದ್ದರೆ ನಾನು ಅವರಿಗೆ ನೇರವಾಗಿ ಹೇಳಬಹುದಾಗಿತ್ತು. ಅದನ್ನು ಅವರು ಮುಕ್ತವಾಗಿ ಸ್ವೀಕರಿಸಿ, ನಂತರ ಮತ್ತೊಂದು ಹೊಸ ಸಲಹೆಗಳನ್ನು ಹೊತ್ತು ತರುತ್ತಿದ್ದರು ಎಂದು ಧೋನಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.