2ನೇ ಟೆಸ್ಟ್: ಐದು ಬೌಲರ್ಗಳ ತಂತ್ರಕ್ಕೆ ಟೀಂ ಇಂಡಿಯಾ ಮಣೆ?
ಲಂಡನ್: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡ ಆಟಗಾರರ ಆಯ್ಕೆಯಲ್ಲಿ ಹೆಚ್ಚಿನ ಗೊಂದಲವಿದ್ದರೂ, ಮುಂದಿನ ಪಂದ್ಯಕ್ಕೂ 5 ಬೌಲರ್ಗಳ ತಂತ್ರಕ್ಕೆ ಟೀಂ ಇಂಡಿಯಾ ಮಣೆ ಹಾಕುವುದೇ ಎಂಬ ಪ್ರಶ್ನೆ ಮೂಡಿದೆ.
ಭಾರತ ತಂಡ ಲಂಡನ್ನಲ್ಲಿ ಮಂಗಳವಾರ ಮುಂದಿನ ಪಂದ್ಯಕ್ಕೆ ಅಭ್ಯಾಸ ನಡೆಸಿದ್ದು, ಭಾರತದ ತರಬೇತಿ ನೋಡಿದರೆ 5 ಪ್ರಮುಖ ಬೌಲರ್ಗಳು ಕಣಕ್ಕಿಳಿಸುವಂತೆ ಕಂಡಿತು.
ಭಾರತ ತಂಡ ಕೇವಲ 40 ದಿನಗಳ ಅಂತರದಲ್ಲಿ 5 ಟೆಸ್ಟ್ ಪಂದ್ಯಗಳ ಸರಣಿಯನ್ನಾಡಲಿದ್ದು, ಎರಡನೇ ಟೆಸ್ಟ್ ಪಂದ್ಯ ಗುರುವಾರದಿಂದ ಸೌಥಂಪ್ಟನ್ನಲ್ಲಿ ಆರಂಭವಾಗಲಿದೆ.
ಕಳೆದ ಪಂದ್ಯದಲ್ಲಿ ಪಿಚ್ ಮಂದಗತಿಯಲ್ಲಿದ್ದರು ಭಾರತೀಯ ಬೌಲರ್ಗಳು ಉತ್ತಮ ಪ್ರದರ್ಶನವನ್ನೇ ನೀಡಿದರು. ವೇಗಿಗಳಾದ ಭುವನೇಶ್ವರ್, ಶಮಿ ಹಾಗೂ ಇಶಾಂತ್ ಗಮನ ಸೆಳೆದರು.
ಇನ್ನು ವೇಗದ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ತಂಡದಲ್ಲಿ ಪದಾರ್ಪಣೆ ಮಾಡಿದರು, ಮಂದಗತಿಯ ಪಿಚ್ನಲ್ಲಿ ತಮ್ಮ ಸ್ವಿಂಗ್ ಪರಿಣಾಮಕಾರಿಯಾಗಿಸಲು ಸಾಧ್ಯವಾಗಲಿಲ್ಲ.
ಆದರೆ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮೂಲಕ ತಂಡವನ್ನು ಆಪತ್ತಿನಿಂದ ಪಾರು ಮಾಡುವ ಅರ್ಧಶತಕ ದಾಖಲಿಸಿದ್ದು ಬಿನ್ನಿಯ ಆಲ್ರೌಂಡ್ ಸಾಮರ್ಥ್ಯ ತಂಡಕ್ಕೆ ಅಗತ್ಯವಾಗಿದೆ. ಭಾರತದ ಅಭ್ಯಾಸದಲ್ಲಿ ಹೆಚ್ಚು ಗಮನ ಸೆಳೆದಿದ್ದು, ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ. ಇಲ್ಲಿನ ಪಿಚ್ಗಳಲ್ಲಿ ಸ್ಪಿನ್ ಪರಿಣಾಮ ಕಡಿಮೆ ಇದ್ದರೂ, ಮುಂದಿನ ಪಂದ್ಯದಲ್ಲಿ ಇವರಲ್ಲಿ ಯಾರು ಕಣಕ್ಕಿಳಿಯುತ್ತಾರೆ ಎಂಬ ಕುತೂಹಲ ಹೆಚ್ಚಿದೆ.
ವೇಗದ ಪಿಚ್ ಬೇಕು: ಇಂಗ್ಲೆಂಡ್ ಪ್ರವಾಸದ ಮೊದಲ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಿರುವ ಭಾರತ ತಂಡದ ಮಹೇಂದ್ರ ಸಿಂಗ್ ಧೋನಿ, ಇಲ್ಲಿನ ವಾತಾವರಣಕ್ಕೆ ತಕ್ಕಂತೆ ವೇಗದ ಪಿಚ್ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೊದಲ ಪಂದ್ಯದ ಪಿಚ್ ಹೆಚ್ಚು ಮಂದಗತಿಯಿಂದ ಕೂಡಿದ್ದ ಹಿನ್ನೆಲೆಯಲ್ಲಿ, ಪಿಚ್ ಭಾರತೀಯ ಆಟಗಾರರಿಗೆ ಹೆಚ್ಚು ಸೂಕ್ತ ಎಂಬ ಮಾತುಗಳು ಕೇಳಿ ಬಂದಿದ್ದವು.
ಇಂಗ್ಲೆಂಡ್ ವೇಗದ ಪಿಚ್ಗಳಿಗೆ ಹೆಚ್ಚು ಹಸರುವಾಸಿಯಾಗಿದೆ. ಹಾಗಾಗಿ ಇಲ್ಲಿ ಬಂದು ಮಂದಗತಿಯ ಪಿಚ್ನಲ್ಲಿ ಆಡುವುದರಲ್ಲಿ ಪ್ರಯೋಜನವಿಲ್ಲ. ಯಾವ ದೇಶಕ್ಕೆ ಪ್ರವಾಸ ಮಾಡುತ್ತೇವೊ ಅಲ್ಲಿನ ವಾತಾವರಣಕ್ಕೆ ತಕ್ಕಂತ ಪಿಚ್ನಲ್ಲಿ ಆಡುವುದು ಹೆಚ್ಚು ಸೂಕ್ತ. ಭಾರತಕ್ಕೆ ಬೇರೆ ತಂಡಗಳು ಬಂದು ಆಡಿದಾಗ ಅಲ್ಲಿನ ಸ್ಪಿನ್ ಪಿಚ್ನಲ್ಲಿ ಶತಕ ದಾಖಲಿಸುವುದು ಹೆಚ್ಚು ಸಂತಸ ನೀಡಲಿದೆ ಎಂದು ಮಹೇಂದ್ರ ಸಿಂಗ್ ಧೋನಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

