ಕ್ರೀಡೆ

ಫಿಬಾ ಏಷ್ಯಾ ಕಪ್ ಬಾಸ್ಕೆಟ್‌ಬಾಲ್ ಭಾರತಕ್ಕೆ 7ನೇ ಸ್ಥಾನ

Published On :

ಮುಂಬೈ: ಭಾರತ ತಂಡದ ಆಟಗಾರರು ಚೀನಾದ ವುಹಾನ್‌ನಲ್ಲಿ ನಡೆದ 5ನೇ ಫಿಬಾ ಏಷ್ಯಾ ಕಪ್ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ 7ನೇ ಸ್ಥಾನಕ್ಕೆ ತೃಪ್ತಿಗೊಂಡಿದ್ದಾರೆ.
ಶನಿವಾರ ನಡೆದ ಪ್ಲೇಆಫ್ ಪಂದ್ಯದಲ್ಲಿ ಭಾರತದ ಆಟಗಾರರು 85-36 ಅಂಕಗಳಿಂದ ಸಿಂಗಾಪುರ ತಂಡದ ಸವಾಲನ್ನು ಸುಲಭವಾಗಿ ಹತ್ತಿಕ್ಕಿದರು.
ವಿಶ್ವದಲ್ಲಿ 61ನೇ ಹಾಗೂ ಉಪಖಂಡದಲ್ಲಿ 11ನೇ ಕ್ರಮಾಂಕ ಹೊಂದಿರುವ ಭಾರತ ತಂಡ ಪಂದ್ಯದ ಆರಂಭದಿಂದಲೇ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ವಿರಾಮದ ವೇಳೆಗೆ 49-13 ಅಂಕಗಳಿಂದ ಭಾರಿ ಮುನ್ನಡೆಯಲ್ಲಿದ್ದರು. ಮೊದಲ ಹತ್ತು ನಿಮಿಷಗಳ ಆಟದಲ್ಲಿಯೇ ಹೆಚ್ಚು ಪ್ರಭಾವ ಬೀರಿದ್ದ ಭಾರತ, 26-10 ಅಂಕಗಳಿಂದ ಮೇಲುಗೈ ಸಾಧಿಸಿತ್ತು.
ಪಂದ್ಯದ ನಾಲ್ಕೂ ಕ್ವಾರ್ಟರ್‌ಗಳಲ್ಲಿ ಸಹ ಆಟಗಾರರು ಉತ್ತಮ ಹೊಂದಾಣಿಕೆ ಪ್ರದರ್ಶಿಸುವ ಮೂಲಕ ಅಂತಿಮವಾಗಿ ನಿರೀಕ್ಷಿತ ಫಲಿತಾಂಶವನ್ನೇ ಪಡೆದುಕೊಂಡರು.
ಭಾರತದ ಪರ ಉತ್ತಮ ಹೋರಾಟ ನಡೆಸಿದ ಅಮ್‌ಜೋತ್ ಸಿಂಗ್ 30 ಅಂಕಗಳನ್ನು ಸಂಪಾದಿಸಿ ಗಮನ ಸೆಳೆದರು. ಉಳಿದಂತೆ, ಅಮೃತ್‌ಪಾಲ್ ಸಿಂಗ್ 13 ಮತ್ತು ವಿಶೇಶ್ ಬ್ರಿಗುವಂಶಿ 10 ಅಂಕ ಗಳಿಸಿ ತಂಡದ ನಿರಾಯಾಸ ಗೆಲವಿಗೆ ನೆರವಾದರು.
ಇದಕ್ಕೂ ಮುನ್ನ ಭಾರತ ಜೋರ್ಡಾನ್ ವಿರುದ್ಧ 60-65 ಅಂಕಗಳಿಂದ ಹಾಗೂ ಫಿಲಿಪ್ಪೀನ್ಸ್ ವಿರುದ್ಧ 70-66 ಅಂಕಗಳಿಂದ ಸೋಲುಣ್ಣುವ ಮೂಲಕ ಮುಂದಡಿ ಇಡುವಲ್ಲಿ ವಿಫಲವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.