ಕ್ರೀಡೆ

ಕಾಮನ್ ವೆಲ್ತ್ ಗೇಮ್ಸ್‌ಗೆ ಬ್ರುನೀಯಿಂದ ಏಕೈಕ ಅಥ್ಲೀಟ್!

Published On :

ಬಂದರ್ ಸೆರಿ ಬೆಗಾವಾನ್ (ಬ್ರುನೀ): ಮಹತ್ವದ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಒಂದು ದೇಶದಿಂದ ಒಬ್ಬನೇ ಪ್ರತಿನಿಧಿಸುವುದು! ಎಂದರೆ ಅಚ್ಚರಿ ಎನಿಸುವುದಿಲ್ಲವೇ? ಆದರೂ, ಇದು ಸತ್ಯ. ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯಲಿರುವ 2014ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಬ್ರುನೀ ದೇಶದಿಂದ ಒಬ್ಬನೇ ಒಬ್ಬ ಕ್ರೀಡಾಪಟು ಪ್ರತಿನಿಧಿಸುತ್ತಿದ್ದಾನೆ. ಅದು ಸೈಕ್ಲಿಸ್ಟ್ ಮಹಮ್ಮದ್ ಐಮಾಡಿ ಅಬ್ದ್ ಅಜೀಜ್. ಮಹಮ್ಮದ್ ಐ ಮಾಡಿ ಅವರು, ಜುಲೈ 23ರಿಂದ ಆಗಸ್ಟ್ 3ರವರೆಗೆ ನಡೆಯಲಿರುವ ಕ್ರೀಡಾಕೂಟಕ್ಕೆ ತಮ್ಮ ದೇಶದಿಂದ ಶನಿವಾರ ತೆರಳಿದ್ದಾರೆ.22 ವರ್ಷದ ಅಥ್ಲೀಟ್ ಮಹಮ್ಮದ್ ಸೈಕ್ಲಿಂಗ್‌ನ ಮೂರು ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ. ವೈಯಕ್ತಿಕ ಟೈಮ್ ಟ್ರೈಯಲ್, ವೈಯಕ್ತಿಕ ರೋಡ್ ರೇಸ್ ಹಾಗೂ ವೈಯಕ್ತಿಕ ಟ್ರ್ಯಾಕ್ ವೆಲೊಡ್ರೋಮ್ ವಿಭಾಗಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಕಳೆದ ಮೇ ತಿಂಗಳಲ್ಲಿ ಮಲೇಷ್ಯಾದಲ್ಲಿ ನಡೆದ 2014ರ ಶಾ ಅಲಮ್ ಎಂಡೂರಿಡೆ ಸೈಕ್ಲಿಂಗ್ ರೇಸ್‌ನಲ್ಲಿ ಮಹಮ್ಮದ್ 150 ಕಿ.ಮೀಟರ್ ರೇಸ್‌ನಲ್ಲಿ 3 ಗಂಟೆ 42 ನಿಮಿಷ ಹಾಗೂ 25 ಸೆಕೆಂಡ್‌ಗಳಲ್ಲಿ ಗುರಿ ಸೇರುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಮಹಮ್ಮದ್ ಐಮಾಡಿ ಅವರು ಕಜಕಿಸ್ತಾನದಲ್ಲಿ ನಡೆದ 34ನೇ ಏಷ್ಯನ್ ಸೈಕ್ಲಿಂಗ್ ಮತ್ತು 21ನೇ ಏಷ್ಯಾ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ 10ನೇ ಸ್ಥಾನ ಪಡೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.