ಗ್ಲಾಸ್ಗೋ ವರ್ಣಮಯ ಚಾಲನೆ

ಕಣ್ಮನ ಸೆಳೆಯುವ ದೀಪಗಳು, ರಾತ್ರಿಯ ಕತ್ತಲೆಯಲ್ಲಿ ಬಣ್ಣಬಣ್ಣ ಬೆಳಕಿನ ಚಿತ್ತಾರಕ್ಕೆ ಸಾಕ್ಷಿಯಾದ 20ನೇ ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಅಭಿಮಾನಿಗಳ ಮನಸೂರೆಗೊಳಿಸಿತು. ಸ್ಕಾಟ್ಲೆಂಡ್ ರಾಜಧಾನಿ ಗ್ಲಾಸ್ಗೋದಲ್ಲಿನ ಸೆಲ್ಟಿಕ್ ಪಾರ್ಕ್ನಲ್ಲಿ ಬುಧವಾರ ತಡರಾತ್ರಿ ವರ್ಣಮಯ ಕಾರ್ಯಕ್ರಮ ಅನಾವರಣಗೊಳ್ಳುವ ಮೂಲಕ ಈ ಮೂಲಕ 11 ದಿನಗಳ ಕಾಲ ನಡೆಯಲಿರುವ ಕ್ರೀಡಾ ಹಬ್ಬಕ್ಕೆ ಅದ್ಧೂರಿ ಚಾಲನೆ ದೊರೆಕಿತು.
ರಾಣಿ 2ನೇ ಎಲಿಜೆಬೆತ್ರಿಂದ ಕೂಟಕ್ಕೆ ಚಾಲನೆ ಸಿಕ್ಕಿತು. ಇನ್ನು ಗ್ಲಾಸ್ಗೋ ಹಾಗೂ ಸ್ಕಾಟ್ಲೆಂಡ್ನ ಜನರ ಜೀವನ ಶೈಲಿ, ಸಂಸ್ಕೃತಿಗಳು ಕಲಾವಿದರಿಂದ ಅನಾವರಣಗೊಳ್ಳುತ್ತಿದ್ದರೆ ಕೇವಲ ಮೈದಾನದ ಪ್ರೇಕ್ಷಕರಷ್ಟೇ ಅಲ್ಲ, ವಿಶ್ವದಾದ್ಯಂತ ಟಿ.ವಿಗಳ ಮೂಲಕ ವೀಕ್ಷಿಸಿದ ಅಭಿಮಾನಿಗಳು ಮೂಕವಿಸ್ಮಿತರಾದರು.
ಉದ್ಘಾಟನಾ ಕಾರ್ಯಕ್ರಮದ ಬಗೆಗಿನ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದ ಕಾರ್ಯಕ್ರಮದ ನಿರ್ದೇಶಕ ಡೇವಿಡ್ ಜೊಲ್ಕ್ವರ್, ಅಭಿಮಾನಿಗಳಿಗೆ ವಿಶ್ವದ ಪ್ರತಿಯೊಬ್ಬ ಕ್ರೀಡಾ ಹಾಗೂ ಕಲಾ ರಸಿಕರಿಗೆ ಮನರಂಜನೆಯನ್ನು ಉಣಬಡಿಸಿದರು. ಈ ಕಾರ್ಯಕ್ರದದಲ್ಲಿ ಖ್ಯಾತ ಗಾಯಕ ನಿಕೊಲ್ ಶರ್ಜಿಂಗರ್, ಸೈಕ್ಲಿಂಗ್ ದಂತಕತೆ ಸರ್ ಕ್ರಿಸ್ ಹಾಯ್, ಫುಟ್ಬಾಲ್ ಖ್ಯಾತ ತಾರೆ ಸರ್ ಅಲೆಕ್ಸ್ ಫರ್ಗುಸನ್, ಖ್ಯಾತ ನಟಿ ಕೀಲೆ ಹವೇಸ್ ಗಮನ ಸೆಳೆದ ಅತಿಥಿಗಳಾಗಿದ್ದರು.
ಇನ್ನು ಮನರಂಜನಾ ಕಾರ್ಯಕ್ರಮ ನೀಡಿದ ಸ್ಕಾಟ್ಲೆಂಡ್ನ ಐಕಾನ್ ರಾಡ್ ಸ್ಟಿವರ್ಟ್, ಬ್ರಿಟೀಷ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದ ವಿಜೇತ ಸೂಸನ್ ಬಾಯ್ಲೆ, ಗಾಯಕ ಆ್ಯಮಿ ಮೆಕ್ಡೊನಾಲ್ಡ್ ಜತೆಗೆ ಸ್ಥಳೀಯ ತಾರಾಮಣಿಗಳು ವಿವಿಧ ಕಾರ್ಯಕ್ರಮಗಳನ್ನು ನೀಡುವ ಮೂಲಕ ಎಲ್ಲರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಗಮನ ಸೆಳೆದ ಮತ್ತೊಂದು ವಿಶೇಷ ಅಂಶ ಎಂದರೆ ಯುನಿಸೆಫ್ನ ದೇಣಿಗೆ ಸಂಗ್ರಹ. ಪುಟ್ ಚಿಲ್ಡ್ರನ್ ಫರ್ಸ್ಟ್ ಎಂಬ ಕಾರ್ಯಕ್ರಮದ ಮೂಲಕ ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ ಮಕ್ಕಳ ಅಭಿವೃದ್ಧಿಗಾಗಿ ದೇಣಿಗೆಯನ್ನು ಸಂಗ್ರಹಿಸಲಾಯಿತು. ಕಾಮನ್ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಣಿಗೆ ಸಂಗ್ರಹಿಸಲಾಯಿತು. ವರ್ಣ ರಂಜಿತ ಕಲಾಕೃತಿಗಳ ಅನಾವರಣ ಅಭಿಮಾನಿಗಳನ್ನು ಬೇರೊಂದು ಲೋಕಕ್ಕೆ ಕರೆದೊಯ್ದಂತೆ ಇತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


