ನಿಯಮಬಾಹಿರ ಶೈಲಿ: ದಾಳಿನಡೆಸದಂತೆ ಕೇನ್ಗೆ ನಿಷೇಧ
ದುಬೈ: ನಿಯಮ ಬಾಹಿರವಾಗಿ ಬೌಲಿಂಗ್ ಪ್ರದರ್ಶಿಸುತ್ತಿರುವ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇನ್ನ್ನು ಮುಂದೆ ಬೌಲಿಂಗ್ ಮಾಡದಂತೆಐಸಿಸಿ ಬುಧವಾರ ಅಮಾನತುಗೊಳಿಸಿದೆ.ಸ್ವತಂತ್ರವಾಗಿ ನಡೆಸಲಾದ ವಿಶೇಷಣೆಯಲ್ಲಿ ಅವರ ಬೌಲಿಂಗ್ ನಿಯಮಬಾಹಿರವಾಗಿರುವುದು ಕಂಡುಬಂದಿದೆ ಎಂದು ಐಸಿಸಿ ತಿಳಿಸಿದೆ. ಜುಲೈ 9ರಂದು ಕಾರ್ಡಿಫ್ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯ, ಕಾರ್ಡಿಫ್ ಸ್ಕೂಲ್ ಆಫ್ ಸ್ಪೋರ್ಟ್ಸ್ನಲ್ಲಿ ಕೇನ್ ವಿಲಿಯಮ್ಸನ್ ಮಾಡಿದ ಬೌಲಿಂಗ್ನ ಹೆಚ್ಚಿನ ಎಸೆತಗಳು 15 ಡಿಗ್ರಿ ಮಟ್ಟಕ್ಕಿಂತ ಹೆಚ್ಚಾಗಿದ್ದದ್ದು ಕಂಡುಬಂದಿದೆ. ಇದು ನಿಯಮಬಾಹಿರವಾಗಿದೆ. ಕಳೆದ ತಿಂಗಳು ಟ್ರಿನಿಡಾಡ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಅವರ ಬೌಲಿಂಗ್ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿತ್ತು. ಬೌಲಿಂಗ್ ನಿಯಮದ ಕಲಂ 2.4 ಪ್ರಕಾರ ವಿಲಿಯಮ್ಸನ್ ಅವರು ತಮ್ಮ ಬೌಲಿಂಗ್ನಲ್ಲಿ ಬದಲಾವಣೆ ಮಾಡಿಕೊಳ್ಳಲು ಮನವಿ ಮಾಡಿಕೊಳ್ಳಬಹುದಾಗಿದೆ. ನಿಯಮ ಬಾಹಿರ ಬೌಲಿಂಗ್ ಪದರ್ಶಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡದಂತೆಅಮಾನತುಗೊಂಡ ನ್ಯೂಜಿಲೆಂಡ್ನ ಮೊದಲ ಕ್ರಿಕೆಟಿಗ ಎನಿಸಿದ್ದಾರೆ ವಿಲಿಯಮ್ಸನ್. ಈ ಮುನ್ನ ಭಾರತದ ಹರ್ಭಜನ್ ಸಿಂಗ್, ಇಂಗ್ಲೆಂಡ್ನ ಜೇಮ್ಸ್ ಕರ್ಟ್ಲಿ, ವೆಸ್ಟ್ ಇಂಡೀಸ್ನ ಜರ್ಮೈನ್ ಲಾಸನ್ ಹಾಗೂ ಶೇನ್ ಶಿಲ್ಲಿಂಗ್ಫೋರ್ಡ್, ಪಾಕಿಸ್ತಾನದ ಶೋಯಿಬ್ ಮಲಿಕ್ ಮತ್ತು ಶಬ್ಬೀರ್ ಅಹ್ಮದ್, ಶ್ರೀಲಂಕಾದ ಸ್ಪಿನ್ನರ್ ಸಚಿತ್ರ ಸೇನಾನಾಯಕೆ ಅವರು ನಿಯಮ ಬಾಹಿರ ಬೌಲಿಂಗ್ನಿಂದ ಅಮಾನತುಗೊಂಡ ಬೌಲರ್ಗಳಾಗಿದ್ದಾರೆ.
ಪುಣೆ ರೇಸ್
ನಾಳೆ ಮಧ್ಯಾಹ್ನ 1-30ರಿಂದ ಆರಂಭವಾಗುವ ಪುಣೆಯ ಮೊದಲನೇ ದಿನದ ರೇಸ್ಗಳಿಗೆ ನಮ್ಮ ಆಯ್ಕೆ ಈ ರೀತಿ ಇದೆ.
1.1-ಡಿಲೈಟ್ಫುಲ್ ಲೇಡಿ 2-ಇಟ್ಸ್ ಹೈ ಟೈಮ್
2.1-ಟೈಟಲಿಸ್ಟ್ 2-ಡ್ರೀಮ್ಲ್ಯಾಂಡ್
3.1-ಬುರ್ಗುಂಡಿ ರೊಸ್ 2-ಕ್ರೌನ್ಡ್ ಪ್ರಿನ್ಸೆಸ್
4.1-ಗ್ರೀಕ್ ಗಾಡ್ 2-ರಾಜಸಮ್ಮಾನ್
5.1-ಡ್ರೀಮ್ಲೈನರ್ 2-ಹಿಡನ್ ಅಸೆಟ್
6.1-ಜೊರಾವರ್ 2-ಫಲ್ಕನ್
7.1-ಆ್ಯಕ್ಟ್ ಆಫ್ ವ್ಯಾಲೊರ್ 2-ಫುಲ್ ಮೂನ್
8.1-ಇನ್ ಟೈಮ್ 2-ಆ್ಯಡಮ್ಸ್ ವಿಂಗ್
9.1-ಪಾಪ್ಪಿಲ್ಲಾನ್ 2-ಫರ್ಗಾಟನ್ ವಾಯ್ಸ್
ದಿನದ ಅತ್ಯುತ್ತಮ: ಗ್ರೀಕ್ ಗಾಡ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

