ಕ್ರೀಡೆ

ಸವಾಲಿಗೆ ನಾವ್ ರೆಡಿ...

ಸವಾಲಿಗೆ ನಾವ್ ರೆಡಿ...
Published On :

ಗ್ಲಾಸ್ಗೋ: ಪ್ರಸಕ್ತ ಕಾಮನ್‌ನೆಲ್ತ್ ಕ್ರೀಡಾಕೂಟದಲ್ಲಿ ಪೊಡಿಯಂ ಸ್ಥಾನ ಪಡೆಯಲೇಬೇಕೆಂದು ಪಣತೊಟ್ಟಿರುವ ಭಾರತ ವನಿತೆಯರ ಹಾಕಿ ತಂಡ, ಕೆನಡಾ ವಿರುದ್ಧದ ಮೊದಲ ಪಂದ್ಯದಲ್ಲಿ ಗೆಲವು ಸಾಧಿಸಿ ಶುಭಾರಂಭ ಮಾಡಲು ಸಜ್ಜಾಗಿದೆ.
ಗುರುವಾರ ನಡೆಯಲಿರುವ ಎ ಗುಂಪಿನ ಮೊದಲ ಪಂದ್ಯದಲ್ಲಿ 13ನೇ ರ್ಯಾಂಕಿಂಗ್‌ನ ಭಾರತ ತಂಡ 22ನೇ ರ್ಯಾಂಕಿಂಗ್‌ನ ಕೆನಡಾ ಸವಾಲನ್ನು ಎದುರಿಸಲಿದ್ದು, ಉತ್ತಮ ಆರಂಭ ಪಡೆಯುವ ಮೂಲಕ ಗೆಲವಿನ ಹಾದಿಯಲ್ಲಿ ಸಾಗಲು ಸಿದ್ಧತೆ ನಡೆಸಿದೆ. ನಂತರ ಭಾರತ ತಂಡ ನ್ಯೂಜಿಲೆಂಡ್, ಟ್ರಿನಿಡಾಡ್ ಅಂಡ್ ಟೊಬಾಗೊ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟ ನಡೆಸಲಿದೆ. ಭಾರತ ತಂಡ ಆರಂಭಿಕ ಪಂದ್ಯದಲ್ಲಿ ಗೆಲವು ದಾಖಲಿಸುವ ಮೂಲಕ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸಿದೆ. ಭಾರತ ವನಿತೆಯರು ಕೆನಡಾ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದ್ದು, 2012ರಲ್ಲಿ ಕೆನಡಾ ತಂಡವನ್ನು 4-0 ಅಂತರದಿಂದ ಮಣಿಸಿತ್ತು. ಇನ್ನು 2002ರಲ್ಲಿ ಹಾಗೂ 2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡ ಕೆನಡಾವನ್ನು ಎದುರಿಸಿದ್ದು, ಎರಡೂ ಬಾರಿಯೂ ಗೆಲವು ದಾಖಲಿಸಿದೆ.
ಇನ್ನು ಇತ್ತೀಚೆಗೆ ಮಲೇಷ್ಯಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ವನಿತೆಯರು 6-0 ಅಂತರದ ಗೆಲವುದಾಖಲಿಸಿರುವುದು, ತಂಡ ಆತ್ಮ ವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಒಟ್ಟಿನಲ್ಲಿ ಯುವ ಹಾಗೂ ಅನುಭವಿ ಆಟಗಾರ್ತಿಯರ ಸಮತೋಲಿತ ತಂಡವಾಗಿರುವ ಭಾರತ ವನಿತೆಯರು ಕ್ರೀಡಾಕೂಟದಲ್ಲಿ ಮಿಂಚು ಹರಿಸಲು ಎದುರುನೋಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.