ಕ್ರೀಡೆ

ಬ್ಯಾಡ್ಮಿಂಟನ್: ಭಾರತಕ್ಕೆ 5-0 ಸುಲಭ ಗೆಲವು

Published On :

ಗ್ಲಾಸ್ಗೋ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರರು ಕೀನ್ಯಾ ವಿರುದ್ಧ 5-0 ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಶುಕ್ರವಾರ ನಡೆದ ಬಿ ಗುಂಪಿನ ಮಿಶ್ರ ತಂಡದ ಪಂದ್ಯದಲ್ಲಿ ಭಾರತ ಮೇಲುಗೈ ದಾಖಲಿಸಿದೆ. ಕ್ರೀಡಾಕೂಟದ ಮೊದಲ ದಿನ ಘಾನಾ ಹಾಗೂ ಉಗಾಂಡ ವಿರುದ್ಧ 5-0 ಗೆಲವು ದಾಖಲಿಸಿದ್ದ ಭಾರತ ಉತ್ತಮ ಆರಂಭ ಪಡೆದಿತ್ತು.
ಭಾರತದಪರ ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿದ ಕೆ.ಶ್ರೀಕಾಂತ್ ಹಾಗೂ ಜ್ವಾಲಾ ಗುಟ್ಟಾ ಎದುರಾಳಿ ಜೋಡಿ ಮೆರ್ಸಿ ಜೋಸೆಫ್ ಮತ್ತು ಪ್ಯಾಟ್ರಿಕ್ ಬೊಗೊ ವಿರುದ್ಧ 21-8, 21-8 ನೇರ ಸೆಟ್‌ಗಳ ಗೆಲವು ದಾಖಲಿಸಿದರು. ಕೇವಲ 18 ನಿಮಿಷದಲ್ಲಿ ಗೆಲವು ದಾಖಲಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು.
ಪಿ.ಕಶ್ಯಪ್ ತಮ್ಮ ಎದುರಾಳಿ ವಿಕ್ಟೋರ್ ಮುಂಗಾ ವಿರುದ್ಧ 21-7, 21-8 ಸೆಟ್‌ಗಳ ಅಂತರದಲ್ಲಿ, ಪಿ.ಸಿ ತುಳಸಿ ಎದುರಾಳಿ ಲ್ಯಾವಿನಾ ಮಾರ್ಟೀನ್ಸ್ ವಿರುದ್ಧ 21-4, 21-2 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ನಂತರ ಪಂದ್ಯದಲ್ಲಿ ಗುರುಸಾಯಿದತ್ ಹಾಗೂ ಪ್ರಣವ್ ಚೋಪ್ರಾ ಜೋಡಿ, ಕೀನ್ಯಾದ ಜೊಸೆಫ್ ಗಿತಿಟು ಹಾಗೂ ಪ್ಯಾಟ್ರಿಕ್ ಜೋಡಿಯನ್ನು 21-5, 21-6 ಅಂತರದಲ್ಲಿ ಹಾಗೂ ಅಂತಿಮ ಪಂದ್ಯದಲ್ಲಿ ಪಿ.ವಿ ಸಿಂಧು ಹಾಗೂ ಜ್ವಾಲಾ ಗುಟ್ಟಾ 21-4, 21-5 ಅಂತರದ ಮುನ್ನಡೆಯೊಂದಿಗೆ ಗೆಲವು ದಾಖಲಿಸಿ ಕ್ಲೀನ್‌ಸ್ವೀಪ್ ಗೆಲವು ದಾಖಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.