ಕ್ರೀಡೆ

ಸಂತೋಷಿ ಕಂಚು ಲಿಫ್ಟ್

Published On :

ಗ್ಲಾಸ್ಗೋ: ವೇಟ್‌ಲಿಫ್ಟಿಂಗ್‌ನಲ್ಲಿ ಪದಕದ ಭೇಟೆ ಯಶಸ್ವಿಯಾಗಿ ಸಾಗಿದ್ದು, ಉದಯೋನ್ಮುಖ ಆಟಗಾರ್ತಿ ಸಂತೋಷಿ ಮಾತ್ಸಾ ಕೂಡ ಕಂಚಿನ ಪದಕ ಗೆದ್ದು ಗಮನ ಸೆಳೆದಿದ್ದಾರೆ.
ಕಾಮನ್‌ವೆಲ್ತ್ ಕೂಟದ ಎರಡನೇ ದಿನವಾದ ಶುಕ್ರವಾರ ನಡೆದ ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಆಂಧ್ರಪ್ರದೇಶದ ಬಾಲಕಿ ಸಂತೋಷಿ, ಒಟ್ಟು 188 ಕೆ.ಜಿ. ಭಾರ ಎತ್ತುವುದರೊಂದಿಗೆ ಮೂರನೇ ಸ್ಥಾನ ಪಡೆದರು. ಆ ಮೂಲಕ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿಯೇ ಐದನೇ ಪದಕ ಲಭಿಸಿತ್ತು. ನೈಜೀರಿಯಾದ 16ರ ಶಾಲಾ ಬಾಲಕಿ ಚಿಕಾ ಅಮಲ್ಹಾ ಒಟ್ಟು 196 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನದ ಪದಕ ಸಂಪಾದಿಸಿದರೆ, ಪಪುವಾ ನ್ಯೂ ಗಿನಿ ಲಿಫ್ಟರ್ ಡಿಕಾ ಟೌವಾ (193ಕೆ.ಜಿ. ) ಬೆಳ್ಳಿ ಗರಿ ಮೂಡಿಸಿಕೊಂಡರು. ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಭಾರತದ ಮತ್ತೊಬ್ಬ ಆಟಗಾರ್ತಿ ಸ್ವಾತಿ ಸಿಂಗ್ ಒಟ್ಟಾರೆ 183 ಕೆ.ಜಿ. ಭಾರ ಎತ್ತಲಷ್ಟೇ ಶಕ್ತರಾಗಿ ನಾಲ್ಕನೇ ಸ್ಥಾನ ಪಡೆದು ಪದಕದಿಂದ ವಂಚಿತರಾದರು.
ಇಂದು ಭಾರತ
ಶೂಟಿಂಗ್
-    10ಮೀ. ಏರ್ ಪಿಸ್ತೂಲ್ ಪುರುಷರ ಅರ್ಹತಾ ಸುತ್ತು (ಮ) 1-15ಕ್ಕೆ
-    25ಮೀ. ಪಿಸ್ತೂಲ್ ಮಹಿಳೆಯರ ಅರ್ಹತಾ ಸುತ್ತು (ಮ) 1-30ಕ್ಕೆ
ಹಾಕಿ
-    ಭಾರತ ಹಾಗೂ ಸ್ಕಾಟ್ಲೆಂಡ್ ವಿರುದ್ಧ ಪುರುಷರ ಹಾಕಿ ಪಂದ್ಯ ರಾತ್ರಿ 8-30
ಬಾಕ್ಸಿಂಗ್
-    74ಕೆ.ಜಿ ವಿಭಾಗದಲ್ಲಿ ವಿಜೇಂದರ್ ಸಿಂಗ್, ಆ್ಯಂಡ್ರೂ ಕೊಮೆಟಾ ವಿರುದ್ಧ ಪಂದ್ಯ (ಮ) 3-15ಕ್ಕೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.