ಕ್ರೀಡೆ

ಯೂತ್ ಒಲಿಂಪಿಕ್ಸ್ಗೆ ಕರ್ನಾಟಕದ ಈಜು ತಾರೆ ದಾಮಿನಿ ಗೌಡ

ಯೂತ್ ಒಲಿಂಪಿಕ್ಸ್ಗೆ ಕರ್ನಾಟಕದ ಈಜು ತಾರೆ ದಾಮಿನಿ ಗೌಡ
Published On :

ಬೆಂಗಳೂರು: ಬಸವನಗುಡಿ ಈಜುಕೊಳ ಕೇಂದ್ರದ ದಾಮಿನಿ ಗೌಡ ಅವರು, ಚೀನಾದ ನಾಜಿಂಗ್ನಲ್ಲಿ ನಡೆಯಲಿರುವ ಎರಡನೇ ಯೂತ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡ ದೇಶದ ಮೊದಲ ಮಹಿಳಾ ಈಜುಪಟು ಎನಿಸಿದ್ದಾರೆ.
ಆಗಷ್ಟ್ 16, 2014ರಿಂದ ನಡೆಯಲಿರುವ ಯೂತ್ ಒಲಿಂಪಿಕ್ಸ್ ಕ್ರೀಡಾಕೂಟದ 200 ಮೀಟರ್ ಬಟರ್ಫ್ಲೈ ಹೀಟ್ಸ್ ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಜೂನ್ 7ರಂದು ನಡೆದ 31ನೇ ಪೊರ್ಚುಗಲ್ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ದಾಮಿನಿಗೆ ಈ ಅದೃಷ್ಟ ಒಲಿದಿದೆ.
ಯೂತ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು 2: 24. 75 ಸೆಕೆಂಡ್ಗಳಲ್ಲಿ ಗುರಿ ಸೇರಬೇಕಾಗಿತ್ತು. ಆದರೆ, 2: 23. 56 ಸೆಕೆಂಡ್ಗಳಲ್ಲೇ ಗುರಿ ಸೇರಿದ ದಾಮಿನಿ ಅರ್ಹತೆ ಗಿಟ್ಟಿಸಿಕೊಂಡರು. ಹೊರಾಂಗಣ ಈಜುಕೊಳದಲ್ಲಿ ನಡೆದ ಮತ್ತು 15 ಡಿಗ್ರಿ ಸೆಲ್ಸಿಯಸ್ ತಾಪಮಾನದ ತಂಬಾ ಗಾಳಿಯಿಂದ ಕೂಡಿದ್ದ ವಾತಾವರಣದಲ್ಲಿ ಅವರು ಅರ್ಹತೆ ಗಿಟ್ಟಿಸಿದ್ದಾರೆ. ಅದಕ್ಕಿಂತ ಮಹತ್ವದ ವಿಷಯವೆಂದರೆ, ಯೂತ್ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಲು 1996ರಿಂದ 1999ರ ನಡುವೆ ಜನಿಸಿರಬೇಕು.ಆದರೆ, ದಾಮಿನಿ ಫೆಬ್ರವರಿ 20, 1999ರಂದು ಜನಿಸಿದ್ದಾರೆ. ಹೀಗಾಗಿ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕಿರಿಯ ಕ್ರೀಡಾಪಟುಗಳಲ್ಲೊಬ್ಬರು ಎನಿಸಿದ್ದಾರೆ ದಾಮಿನಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.