ಕ್ರೀಡೆ

ಕೆಲವರು ಮಿಂಚಿದರು, ಕೆಲವರು ಬಾಡಿದರು

Published On :

ರಿಯೋ ಡಿ ಜನೈರೋ: ಕೇವಲ ಒಂದು ಸುತ್ತಿನ ಪಂದ್ಯಗಳಷ್ಟೇ ನಡೆದಿರುವ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಟಾರ್ ಆಟಗಾರರ ದಂಡೇ ಕಾದಟಕ್ಕೆ ಸಜ್ಜಾಗಿ ಕ್ರೀಡಾಂಗಣಕ್ಕೆ ಇಳಿದಿದೆ. ಆದರೆ, ಅದರಲ್ಲಿ ಕೆಲ ಸ್ಟಾರ್‌ಗಳು ಮಿಂಚಿದರೆ, ಇನ್ನು ಕೆಲವರುಸಪ್ಪೆ ಪ್ರದರ್ಶನ ನೀಡುವ ಮೂಲಕ ಬಾಡಿದಂತೆ ಕಾಣುತ್ತಿದ್ದಾರೆ.
ಪ್ರಮುಖ ಸ್ಟಾರ್‌ಗಳಲ್ಲಿ ಹಾಲೆಂಡ್‌ನ ರಾಬಿನ್ ವ್ಯಾನ್ ಪರ್ಸಿ ಮತ್ತು ಅರ್ಜೆಂಟೀನಾದ ಲಯೋನೆಲ್ ಮೆಸ್ಸಿ ಅವರುಈ ಮುನ್ನ ಆಡಿದ ಎರಡು ವಿಶ್ವಕಪ್ ಪಂದ್ಯಾವಳಿಗಳು ಸೇರಿದಂತೆ ಗೋಲು ದಾಖಲಿಸುವಲ್ಲಿ ಸಮಬಲ ಸಾಧಿಸಿದ್ದಾರೆ.
ಈ ಇಬ್ಬರೂ ಆಟಗಾರರು ಈ ಪಂದ್ಯಾವಳಿಯಲ್ಲಿ ಹೆಚ್ಚು ಮಿಂಚುತ್ತಿದ್ದಾರೆ. ಪರ್ಸಿ ಮತ್ತು ಮೆಸ್ಸಿ ಅವರು ಮೂರು ಪಂದ್ಯಾವಳಿಗಳಲ್ಲಿ ತಮ್ಮ ಉತ್ತಮ ಪ್ರದರ್ಶನ ತೋರಲು ವಿಶ್ವಕಪ್ ಮೊದಲ ದಿನದಿಂದಲೂ ಸ್ಪರ್ಧೆಗಳಿದಿದ್ದಾರೆ. ಹೀಗಾಗಿ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಇನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆದ 2010ರ ಪಂದ್ಯಾವಳಿಯಲ್ಲಿ ಐದು ಜನರೊಂದಿಗೆ ಅಗ್ರ ಗೋಲ್ ಸ್ಕೋರರ್ ಎನಿಸಿದ್ದ ಥಾಮಸ್ ಮುಲ್ಲರ್, ಹ್ಯಾಟ್ರಿಕ್ ಸಾಧಿಸಿ ಪಂದ್ಯಾವಳಿಯಲ್ಲಿ ಗಮನ ಸೆಳೆದಿದ್ದಾರೆ.
ಆತಿಥೇಯ ತಂಡದ ಸ್ಟಾರ್ ಆಟಗಾರ 22 ವರ್ಷದ ನೇಮಾರ್, ವಿಶ್ವಕಪ್‌ನ ಪದಾರ್ಪಣೆಯ ಪಂದ್ಯದಲ್ಲೇ ಎರಡು ಗೋಲು ದಾಖಲಿಸಿ ಮಿಂಚುವ ಮೂಲಕ ಕ್ರೊವೇಷಿಯಾ ವಿರುದ್ಧ ಬ್ರೆಜಿಲ್ 3-1 ಗೋಲುಗಳಿಂದ ಜಯ ಸಾಧಿಸುವಲ್ಲಿ ನೆರವಾಗಿದ್ದರು.
ಆದರೆ, ಮೆಕ್ಸಿಕೊ ವಿರುದ್ಧ ನಡೆದ ಪಂದ್ಯದಲ್ಲಿ ಗೋಲು ದಾಖಲಿಸುವಲ್ಲಿ ನೇಮಾರ್ ವೈಫಲ್ಯ ಕಂಡಿದ್ದಾರೆ. ಇದಕ್ಕೆ ಮೆಕ್ಸಿಕೊ ಗೋಲ್ ಕೀಪರ್ ಗಿಲ್ಲೆರ್ಮೋ ಓಚೂವಾ ಅವರ ಪವಾಡದ ಪ್ರದರ್ಶನವೂ ಕಾರಣವಾಗಿತ್ತು.
ಕೆಲ ಆಟಗಾರರು ಗೋಲು ದಾಖಲಿಸಲಾಗದೇ ತೀವ್ರ ಒತ್ತಡದಿಂದ ಬಳಲುತ್ತಿದ್ದಾರೆ. ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಮೆಸ್ಸಿಗೆ ಹೋಲಿಸಲಾಗುವ ಕ್ರಿಸ್ಟಿಯಾನೋ ರೂನಾಲ್ಡೊ ಅವರು ವಿಶ್ವಕಪ್ ಪಂದ್ಯಾವಳಿಯಲ್ಲಿ ವೈಫಲ್ಯವನ್ನು ಮುಂದುವರಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಉತ್ತರ ಕೊರಿಯಾ ವಿರುದ್ಧ ಪೋರ್ಚುಗಲ್ 7-0 ಗೋಲುಗಳಿಂದ ಗೆದ್ದಾಗ ಒಂದು ಗೋಲನ್ನು ಮಾತ್ರ ರೊನಾಲ್ಡೊ ಗಳಿಸಿದ್ದರು. ಬ್ರೆಜಿಲ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ ಸೋತ ಪಂದ್ಯದಲ್ಲಿ ಪೋರ್ಚುಗಲ್ ತಂಡ ಯಾವುದೇ ಗೋಲು ದಾಖಲಿಸುವಲ್ಲಿ ವೈಫಲ್ಯ ಕಂಡಿದೆ.
ನಾಲ್ಕು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಯಾವುದೇ ಗೋಲು ದಾಖಲಿಸಿದೇ ಉಳಿದಿದ್ದ ಮೆಸ್ಸಿ, ಈ ಮುನ್ನ 2006ರಲ್ಲಿ ಜರ್ಮನಿ ವಿರುದ್ಧ ನಡೆದ ಪಂದ್ಯದಲ್ಲಿ ಒಂದು ಗೋಲು ದಾಖಲಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.