24ಕ್ಕೆ ಐಸಿಸಿ ಸಭೆ: ಶ್ರೀನಿವಾಸನ್, 2015ರ ವಿಶ್ವಕಪ್ ಬಗ್ಗೆ ಚರ್ಚೆ
ದುಬೈ: ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿಸಿಸಿಐ ಶ್ರೀನಿವಾಸನ್ ಹೆಸರನ್ನು ಮತ್ತೆ ಖಚಿತ ಪಡಿಸಿರುವ ಹಿನ್ನೆಲೆಯಲ್ಲಿ ಜೂ.24ರಂದು ಆರಂಭವಾಗಲಿರುವ ಐಸಿಸಿ ವಾರ್ಷಿಕ ಸಮಾವೇಶದಲ್ಲಿ ಶ್ರೀನಿಗೆ ಅಧ್ಯಕ್ಷ ಹುದ್ದೆ ನೀಡುವ ಹಾಗೂ 2015ರ ವಿಶ್ವಕಪ್ ಕುರಿತಂತೆ ಚರ್ಚೆ ನಡೆಸಲಾಗುವುದು.
ಮೆಲ್ಬರ್ನ್ನಲ್ಲಿ ನಡೆಯುವ ಈ ಸಮಾವೇಶದಲ್ಲಿ, ಫೆ.8ರಂದು ಸಿಂಗಾಪುರದಲ್ಲಿ ನಡೆದ ಸಭೆ ವೇಳೆ ನಿರ್ಧರಿಸಿದಂತೆ ಐಸಿಸಿಯಲ್ಲಿ ಕೆಲವು ಬದಲಾವಣೆ ತರಲಾಗುವುದು. ಅಲ್ಲದೆ ಜೂ.28ರಂದು ಐಸಿಸಿ ಅಧ್ಯಕ್ಷರಾಗಿ ಶ್ರೀನಿವಾಸನ್ ಅಧಿಕಾರ ಸ್ವೀಕರಿಸಲಿದ್ದಾರೆ. ಅಲ್ಲದೆ 2015ರ ವಿಶ್ವಕಪ್ಗೆ ವಾಣಿಜ್ಯ ಹಕ್ಕುಗಳ ಕುರಿತ ಅಂಶಗಳ ಬಗ್ಗೆ ಚರ್ಚೆ ನಡೆಯಲಿದೆ.
ಇದೇವೇಳೆ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ದಳದ ಕೆಲವು ಅಂಶಗಳು ಸೇರಿದಂತೆ ಇತರೆ ಪ್ರಮುಖ ವಿಚಾರಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ.
ರ್ಯಾಂಕಿಂಗ್: ಒನಿತೆಯರಿಗೆ 50ನೇ ಸ್ಥಾನ
ನವದೆಹಲಿ: ಭಾರತದ ಮಹಿಳಾ ಫುಟ್ಬಾಲ್ ರ್ಯಾಂಕಿಂಗ್ನಲ್ಲಿ ತಂಡ ಒಂದು ಸ್ಥಾನ ಬಡ್ತಿ ಪಡೆದಿದ್ದು, 175 ರಾಷ್ಟ್ರಗಳನ್ನೊಳಗೊಂಡ ಫಿಫಾ ತಂಡಗಳ ಪಟ್ಟಿಯಲ್ಲಿ 50ನೇ ಸ್ಥಾನ ಪಡೆದುಕೊಂಡಿದೆ.
ಇನ್ನು ಎಎಫ್ಸಿ ರ್ಯಾಂಕಿಂಗ್ನಲ್ಲೂ 1 ರ್ಯಾಂಕಿಂಗ್ ಬಡ್ತಿ ಪಡೆದು, 11ನೇ ಸ್ಥಾನ ಪಡೆದುಕೊಂಡಿದೆ. ಫಿಫಾ ರ್ಯಾಂಕಿಂಗ್ನಲ್ಲಿ ವನಿತೆಯರು 50ನೇ ಸ್ಥಾನಕ್ಕೇರುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಮೊದಲು 2003ರಲ್ಲಿ ಅದು ಈ ಸಾಧನೆ ಮಾಡಿತ್ತು.
2013ರಲ್ಲಿ 2014ರ ಏಷ್ಯನ್ ಗೇಮ್ಸ್ ಅರ್ಹತಾ ಸುತ್ತಿನಲ್ಲಿ ಆಡಿದ ಪಂದ್ಯದಲ್ಲಿ ತನಗಿಂತ ಉನ್ನತ ರ್ಯಾಂಕಿಂಗ್ ಹೊಂದಿದ್ದ ಮ್ಯಾನ್ಮಾರ್ ಮತ್ತು ಚೈನೀಸ್ ತೈಪೆ ರಾಷ್ಟ್ರಗಳ ವಿರುದ್ಧ ಸೋಲನುಭವಿಸಿತ್ತು. ನಂತರ ಆತಿಥೇಯ ಪ್ಯಾಲಸ್ತೀನ್ ವಿರುದ್ಧ ಡ್ರಾ ಸಾಧಿಸುವ ಮೂಲಕ ಒಂದು ಅಂಕ ಗಳಿಸಿಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

