ವಿಶ್ವ 6-ರೆಡ್ ಸ್ನೂಕರ್: ಕ್ವಾರ್ಟರ್ಫೈನಲ್ಗೆ ಪಂಕಜ್ ಆಡ್ವಾಣಿ
ಶರ್ಮ್-ಇಲ್-ಶೇಖ್ (ಈಜಿಪ್ಟ್) : ಭಾರತದ ಪಂಕಜ್ ಆಡ್ವಾಣಿ ಈಜಿಪ್ಟ್ನಲ್ಲಿ ನಡೆಯುತ್ತಿರುವ ವಿಶ್ವ 6-ರೆಡ್ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ಫೈನಲ್ಗೆ ಹೆಜ್ಜೆಹಾಕಿದ್ದಾರೆ.
ಬೆಂಗಳೂರಿನ ಹುಡುಗ ಪಂಕಜ್ ಆಡ್ವಾಣಿ, ಶನಿವಾರ ನಡೆದ ಪ್ರಿಕ್ವಾರ್ಟರ್ಫೈನಲ್ ಸುತ್ತಿನ ಸೆಣಸಿನಲ್ಲಿ ಮಾಲ್ಟಾದ ಅಲೆಕ್ಸ್ ಬೋರ್ಗ್ ಅವರನ್ನು 4-0 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿ ಮುನ್ನಡೆ ಸಾಧಿಸಿದರು.
ಆದರೆ ಪುರುಷರ ಸಿಂಗಲ್ಸ್ನಲ್ಲಿ ಉಳಿದುಕೊಂಡಿದ್ದ ಭಾರತದ ಮತ್ತೊಬ್ಬ ಆಟಗಾರ ಕಮಲ್ ಚಾವ್ಲಾ ಪ್ರಿಕ್ವಾರ್ಟರ್ಫೈನಲ್ನಲ್ಲಿಯೇ ಸೋಲಿನ ಕಹಿ ಅನುಭವಿಸಿದ್ದಾರೆ. ಇಂದೇ ನಡೆದ 16ರ ಘಟ್ಟದ ಸೆಣಸಿನಲ್ಲಿ ಕತಾರ್ನ ಮೊಹಸೆನ್ ಬಕ್ಷೇಶಾ ಅವರು 4-2 ಅಂಕಗಳಿಂದ ಕಮಲ್ಗೆ ಸೋಲುಣಿಸಿದರು.
ಇನ್ನು 15-ರೆಡ್ ಸ್ನೂಕರ್ನ ತಂಡ ವಿಭಾಗದಲ್ಲಿ ಬ್ರಿಜೇಶ್ ದಮನಿ ಜೊತೆಗೂಡಿ ಆಡಿದ್ದ ಪಂಕಜ್ಗೆ ಸೋಲು ಎದುರಾಗಿದೆ. ಪಂಕಜ್ ಮತ್ತು ಬ್ರಿಜೇಶ್ ಜೋಡಿ ಕ್ವಾರ್ಟರ್ಫೈನಲ್ ಸುತ್ತಿನಲ್ಲಿ ಪಾಕಿಸ್ತಾನದ ಮೊಹ್ಮದ್ ಆಸಿಫ್ ಮತ್ತು ಸಜ್ಜಾದ್ ಹುಸೇನ್ ವಿರುದ್ಧ 1-4ರಿಂದ ಸುಲಭವಾಗಿ ಆಘಾತ ಅನುಭವಿಸಿತು.
ಅದೇ ರೀತಿ ಭಾರತದ ಸೌರವ್ ಕೊಠಾರಿ ಮತ್ತು ಶಿವಂ ಅರೋರಾ ಅವರು ಎಂಟರಘಟ್ಟದಲ್ಲಿ ಇರಾನ್ನ ಹುಸೇನ್ ವಫಾಯಿ ಅಯೂರಿ ಮತ್ತು ಈಶನ್ ಹೈದರ್ ವಿರುದ್ಧ ಪರಾಜಯ ಅನುಭವಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

