ಕಾಮನ್ವೆಲ್ತ್ನಲ್ಲಿ ಪ್ರಶಸ್ತಿ: ಜೀತು ವಿಶ್ವಾಸ
ನವದೆಹಲಿ: ಇತ್ತೀಚೆಗಷ್ಟೇ ಐಎಸ್ಎಸ್ಎಫ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಿನ್ನ ಸೇರಿದಂತೆ ಪದಕಗಳನ್ನು ಗೆದ್ದ ಜೀತು ರೈ ಮುಂಬರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೂನ್ ಆರಂಭದಲ್ಲಿ ನಡೆದ ಮರಿಬೋರ್ ಮತ್ತು ಸ್ಲೋವೇನಿಯಾದಲ್ಲಿ ಎರಡು ಪದಕ ಗೆದ್ದಿದ್ದ ಜೀತು, ಭಾರತದ ಶೂಟಿಂಗ್ನಲ್ಲಿ ಇತಿಹಾಸ ನಿರ್ಮಿಸಿದ್ದರು. ಅಲ್ಲದೆ, ಮ್ಯೂನಿಚ್ನಲ್ಲಿ ನಡೆದ ಐಎಸ್ಎಸ್ಎಫ್ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. 'ಈ ಪ್ರದರ್ಶನ ನನಗೆ ಹೆಚ್ಚಿನ ಸಮಯ ನೆರವಾಗಲಿದೆ. ಸದ್ಯ ನನ್ನ ಪ್ರದರ್ಶನ ನೋಡಿದರೆ, ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ವಿಶ್ವಾಸವನ್ನು ನಾನು ಹೊಂದಿದ್ದೇನೆ' ಎಂದಿದ್ದಾರೆ ಜೀತು.
ಇತ್ತೀಚೆಗೆ 27 ವರ್ಷದ ಜೀತು ಅವರು ನೀಡಿರುವ ಪ್ರದರ್ಶನವನ್ನು ಗಮನಿಸಿರುವ ರಾಷ್ಟ್ರೀಯ ರೈಫಲ್ ಸಂಸೆ ಸೋಮವಾರ ರು. 5 ಲಕ್ಷ ನಗದು ಬಹುಮಾನ ನೀಡಿ ಗೌರವಿಸಿತು. ಲಕ್ನೋ ಮೂಲದ ರೈ ಅವರು ಮ್ಹೋನಲ್ಲಿರುವ ಸೇನಾ ಮಾರ್ಕ್ಸ್ಮನ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
'ನನ್ನ ಕೋಚ್ ಪಾವೆಲ್ ಸ್ಮಿರ್ನೋವ್ ನನ್ನ ಪ್ರದರ್ಶನದಲ್ಲಿ ಚೇತರಿಸಿಕೊಳ್ಳಲು ಸಾಕಷ್ಟು ನೆರವಾಗಿದ್ದಾರೆ. ವಿಶೇಷವಾಗಿ ನನ್ನ ತಂತ್ರಿಗಾರಿಕೆ ಮೊನಚುಗೊಳ್ಳಲು ನೇರವಾಗಿ ಪರಿಣಾಮಬೀರಿದ್ದಾರೆ' ಎಂದಿದ್ದಾರೆ ಜೀತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

