ರಾಜ್ಯಕ್ಕೆ ಕೈಕೊಟ್ಟ ದಾಂಡಿಗರು ತಮಿಳುನಾಡು ಜಯದ ಕೇಕೆ
ಬೆಂಗಳೂರು: ದಾಂಡಿಗರೆಲ್ಲರೂ ವಿಫಲರಾಗುವುದರೊಂದಿಗೆ ಆತಿಥೇಯ ಕರ್ನಾಟಕ ತಂಡ ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ತಮಿಳುನಾಡು ವಿರುದ್ಧ 7 ವಿಕೆಟ್ಗಳಿಂದ ಸೋಲು ಕಂಡಿದೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಒಡ್ಡಿದ 169 ರನ್ಗಳ ಸಾಧಾರ ಗುರಿ ಬೆಂಬತ್ತಿದ ತಮಿಳುನಾಡು ತಂಡ ಇನ್ನೂ 67 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ ವಿಜಯದ ಗೆರೆ ದಾಟುವಲ್ಲಿ ಯಶಸ್ವಿಯಾಯಿತು.
ಆರಂಭಿಕ ಉಮಾಶಂಕರ್ ಸುಶೀಲ್ (73ರನ್, 105 ಎಸೆತ, 8 ಬೌಂಡರಿ) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸುಬ್ರಹ್ಮಣ್ಯಂ ಬದರಿನಾಥ್ (ಅಜೇಯ 81, 111 ಎಸೆತ, 9 ಬೌಂಡರಿ) ಆಕರ್ಷಕ ಅರ್ಧಶತಕ ಬಾರಿಸುವುದರೊಂದಿಗೆ ತಮಿಳುನಾಡು ತಂಡಕ್ಕೆ ಸುಲಭವಾಗಿ ಗೆಲವು ದೊರೆಯಲು ಕಾರಣರಾದರು.
ತಮಿಳುನಾಡು ಆರಂಭ ಕೂಡ ಉತ್ತಮವಾಗಿರಲಿಲ್ಲ. ಸುಶೀಲ್ ಜೊತೆ ಇನಿಂಗ್ಸ್ ಆರಂಭಿಸಿದ ಮುರಳಿ ವಿಜಯ್ ತಾವು ಎದುರಿಸಿದ ಹಾಗೂ ಇನಿಂಗ್ಸ್ನ ಮೊದಲ ಎಸೆತದಲ್ಲಿಯೇ ವಿನಯ್ಕುಮಾರ್ ದಾಳಿಗೆ ವಿಕೆಟ್ ಒಪ್ಪಿಸಿದರು. ಖಾತೆ ತೆರೆಯುವ ಮೊದಲೇ ಆಘಾತಗೊಂಡ ತಮಿಳುನಾಡು ಪಡೆಗೆ ಕೂಡಲೇ ಮತ್ತೊಂದು ದೊಡ್ಡ ಶಾಕ್ ತಗುಲಿತು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಬಾಬಾ ಅಪರಾಜಿತ್ ಕೇವಲ 6 ರನ್ಗಳಿಸಿ ಔಟಾದಾಗ ತಮಿಳುನಾಡು ಮೊತ್ತ ಕೇವಲ 9 ರನ್ಗಳಾಗಿತ್ತು.
ಈ ಹಂತದಲ್ಲಿ ಜೊತೆಯಾದ ಸುಶೀಲ್ ಮತ್ತು ಬದರಿನಾಥ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 144 ಸೇರಿಸುತ್ತಿದ್ದಂತೆಯೇ ಕರ್ನಾಟಕದ ಗೆಲವಿನ ಆಸೆ ನುಚ್ಚುನೂರಾಯಿತು.
ಕರ್ನಾಟಕದ ಪರ ವಿನಯ್ಕುಮಾರ್ 2 ಮತ್ತು ಅಬ್ರಾರ್ ಖಾಜಿ 1 ವಿಕೆಟ್ ಪಡೆದರೆ, ಇತರೆ ಬೌಲರ್ಗಳು ಎದುರಾಳಿ ಬ್ಯಾಟ್ಸ್ಮನ್ಗಳನ್ನು ಬಂಧಿಸಿಡುವಲ್ಲಿ ವೈಫಲ್ಯ ಅನುಭವಿಸಿದರು.
ಈ ಗೆಲವಿನೊಂದಿಗೆ ತಮಿಳುನಾಡು ಪಡೆ 4 ಅಂಕಗಳನ್ನು ಜೇಬಿಗಿಳಿಸಿಕೊಂಡಿತು.
ಮಧ್ಯಮ ಕ್ರಮಾಂಕ ವಿಫಲ ಕರ್ನಾಟಕದ ಅಲ್ಪ ಮೊತ್ತ:
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕರ್ನಾಟಕ ತಂಡಕ್ಕೆ ಮಧ್ಯಮ ಕ್ರಮಾಂಕದ ವೈಫಲ್ಯವೇ ದೊಡ್ಡ ಆಘಾತ ನೀಡಿತು. ಮಧ್ಯಮ ಹಂತದಲ್ಲಿ ಕೇವಲ 18 ರನ್ಗಳ ಅಂತರದಲ್ಲಿ 4 ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.
ಆರಂಭಿಕ ಬ್ಯಾಟ್ಸ್ಮನ್ ರಾಬಿನ್ ಉತ್ತಮ 33 ರನ್ಗಳಿಸಿದ್ದೇ (47 ಎಸೆತ, 6 ಬೌಂಡರಿ) ತಂಡದ ಪರ ವೈಯಕ್ತಿಕ ಗರಿಷ್ಠ ಮೊತ್ತವಾಯಿತು.
ತಮಿಳುನಾಡು ದಾಳಿಯಲ್ಲಿ ಮಿಂಚಿದ ಲಕ್ಷ್ಮೀಪತಿ ಬಾಲಾಜಿ ಮತ್ತು ರಾಹಿಲ್ ಶಾ ತಲಾ 3 ವಿಕೆಟ್ ಉರುಳಿಸಿದರು.
ಸ್ಕೋರ್ ವಿವರ
ಕರ್ನಾಟಕ 40.3 ಓವರುಗಳಲ್ಲಿ 168
ರಾಬಿನ್ ಉತ್ತಪ್ಪ ಸಿ ಸುಶೀಲ್ ಬಿ ಶಾ 33, ಮಾಯಾಂಕ್ ಅಗರ್ವಾಲ್ ಬಿ ಮಹೇಶ್ 16, ಕೆ.ಎಲ್. ರಾಹುಲ್ ಸಿ ಸುಶೀಲ್ ಬಿ ಬಾಲಾಜಿ 11, ಮನೀಷ್ ಪಾಂಡೆ ಸಿ ಸುಶೀಲ್ ಬಿ ಬಾಲಾಜಿ 7, ಕರುಣ್ ನಾಯರ್ ಬಿ ಬಾಲಾಜಿ 0, ಅಮಿತ್ ವರ್ಮಾ ರನೌಟ್ 7, ಸಿ.ಎಂ. ಗೌತಮ್ ನಿವೃತ್ತಿ 17, ವಿನಯ್ಕುಮಾರ್ ಸಿ ವಿಜಯ್ ಬಿ ಅಪರಾಜಿತ್ 14, ಅಬ್ರಾರ್ ಖಾಜಿ ಸಿ ಮೊಹಮ್ಮದ್ ಬಿ ಶಾ 14, ಅಭಿಮನ್ಯು ಮಿಥುನ್ ಸಿ ಶಾರುಖ್ ಬಿ ಶಾ 20, ಎಚ್.ಎಸ್. ಶರತ್ ಅಜೇಯ 0.
ಇತರೆ: (ಲೆಗ್ಬೈ-7, ವೈ-22) 29.
ವಿಕೆಟ್ ಪತನ: 1-45, 2-72, 3-84, 4-85, 5-90, 6-108, 7-133, 8-156, 9-168, 10-168.
ಬೌಲಿಂಗ್ ವಿವರ: ಲಕ್ಷ್ಮೀಪತಿ ಬಾಲಾಜಿ 10-2-39-3, ಮೊಹಮ್ಮದ್ 7-1-27-0, ಯೊ ಮಹೇಶ್ 7-0-37-1, ರಾಹಿಲ್ ಶಾ 9.3-0-28-3, ವಿಜಯ್ ಶಂಕರ್ 3-0-14-0, ಬಾಬಾ ಅಪರಾಜಿತ್ 4-0-16-1.
ತಮಿಳುನಾಡು 38.5 ಓವರುಗಳಲ್ಲಿ 3 ವಿಕೆಟ್ಗೆ 169
ಮುರಳಿ ವಿಜಯ್ ಎಲ್ಬಿ ಬಿ ವಿನಯ್ಕುಮಾರ್ 0, ಉಮಾಶಂಕರ್ ಸುಶೀಲ್ ಎಲ್ಬಿ ಬಿ ಖಾಜಿ 73, ಬಾಬಾ ಅಪರಾಜಿತ್ ಸಿ ಉತ್ತಪ್ಪ ಬಿ ವಿನಯ್ಕುಮಾರ್ 6, ಸುಬ್ರಹ್ಮಣ್ಯಂ ಬದರಿನಾಥ್ ಅಜೇಯ 81, ಶ್ರೀಕಾಂತ್ ಅನಿರುದ್ಧ್ ಅಜೇಯ 3
ಇತರೆ: (ವೈ-6) 6.
ವಿಕೆಟ್ ಪತನ: 1-0, 2-9, 3-153.
ಬೌಲಿಂಗ್ ವಿವರ: ವಿನಯ್ಕುಮಾರ್ 6-2-20-2, ಅಭಿಮನ್ಯು ಮಿಥುನ್ 7-0-33-0, ಎಚ್.ಎಸ್. ಶರತ್ 6-0-28-0, ಅಬ್ರಾರ್ ಖಾಜಿ 7-0-27-1, ಅಮಿತ್ ವರ್ಮಾ 8.5-0-38-0, ಕರುಣ್ ನಾಯರ್ 4-0-23-0.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

