ಕ್ರೀಡೆ

ಬಿಎಫ್‌ಸಿಗೆ ಚರ್ಚಿಲ್ ಸವಾಲು

Published On :

ಬೆಂಗಳೂರು: ಐ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮೇರೆಯುತ್ತಿರುವ ಬೆಂಗಳೂರು ಎಫ್‌ಸಿಗೆ ಚರ್ಚಿಲ್ ಬ್ರದರ್ಸ್ ಸವಾಲು ನೀಡಲು ಸಜ್ಜಾಗಿದೆ.
ಶನಿವಾರ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದು, ತಮ್ಮ ಅಗ್ರಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ಬಿಎಫ್‌ಸಿ ಸಿದ್ಧತೆ ನಡೆಸಿದೆ.
ಬೆಂಗಳೂರು ತಂಡ ಕಳೆದವಾರ ನಡೆದ ಪಂದ್ಯದಲ್ಲಿ ಶಿಲ್ಲಾಂಗ್‌ನ ರಂಗದಾಜಿದ್ ಯುನೈಟೆಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿತ್ತಾದರೂ, ದ್ವಿತಿಯಾರ್ಧದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ಪಂದ್ಯದಲ್ಲಿ 3-2 ಅಂತರದಲ್ಲಿ ಸೋಲನುಭವಿಸಬೇಕಾಯಿತು. ಹಾಗಾಗಿ ಅಂಕಪಟ್ಟಿಯಲ್ಲಿ ಬಿಎಫ್‌ಸಿ ತಂಡಕ್ಕೆ ಸ್ಪರ್ಧೆ ನೀಡಲು ಇತರೆ ತಂಡಗಳಿಗೆ ಅವಕಾಶ ನೀಡಿದಂತಾಗಿದೆ.
ಬಿಎಫ್‌ಸಿ 31 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಪುಣೆ ಎಫ್‌ಸಿ 29 ಅಂಕಗಳನ್ನು ಪಡೆದಿದೆ. ಅಲ್ಲದೆ ಅಗ್ರಸ್ಥಾನಕ್ಕೆ ಕೇವಲ 2 ಅಂಕಗಳ ಹಿಂದೆ ಇದೆ. ಇನ್ನು ಸ್ಫೋರ್ಟಿಂಗ್ ಕ್ಲಬ್ ಸಹ 28 ಅಂಕಗಳನ್ನು ಗಳಿಸಿದ್ದು, ಅಗ್ರಸ್ಥಾನದ ಪೈಪೋಟಿಯಲ್ಲಿದೆ.
ಈ ಬಾರಿಯ ಪಂದ್ಯಾವಳಿ ಹೆಚ್ಚು ಪೈಪೋಟಿಯಿಂದ ಕೂಡಿದ್ದು ಯಾವ ಫಲಿತಾಂಶ ಎದುರಾಗಲಿದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಪ್ರತಿ ತಂಡ ಏರಿಳಿತಗಳನ್ನು ಕಾಣುತ್ತಿದೆ. ಚರ್ಚಿಲ್ ಬ್ರದರ್ಸ್ ತಂಡ ಸಹ ಉತ್ತಮವಾಗಿದ್ದು, ಈ ಪಂದ್ಯ ಉತ್ತಮ ಹಣಾಹಣಿಯಾಗಲಿದೆ ಎಂದು ಬಿಎಫ್‌ಸಿ ತಂಡದ ಕೋಚ್ ಆ್ಯಶ್ಲೆ ವೆಸ್ಟ್‌ವುಡ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.