ಬೆಂಗಾಲ್ಗೆ ಬಾಗಿದ ಮೊಹಮಡನ್
ಕೋಲ್ಕತಾ: ಗೆಲವಿನ ಹುಡುಕಾಟದಲ್ಲಿದ್ದ ಈಸ್ಟ್ ಬೆಂಗಾಲ್ ತಂಡ ಮೊಹಮಡನ್ ಸ್ಪೋರ್ಟಿಂಗ್ ಕ್ಲಬ್ ವಿರುದ್ಧ ಐ ಲೀಗ್ ಪಂದ್ಯದಲ್ಲಿ ಗೆಲವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡವು 2-1 ಗೋಲುಗಳ ಅಂತರದಲ್ಲಿ ಮೊಹಮಡನ್ ಸ್ಪೋರ್ಟಿಂಗ್ ಕ್ಲಬ್ ತಂಡವನ್ನು ಮಣಿಸಿದೆ. ಈಸ್ಟ್ ಬೆಂಗಾಲ್ ತಂಡದ ಗೆಲವಿನ ರೂವಾರಿಯಾದ ಜೇಮ್ಸ್ ಮೊಂಗಾ ಹಾಗೂ ಎಡೆ ಚಿಡಿ ತಲಾ ಒಂದು ಗೋಲು ದಾಖಲಿಸಿದರು. ಮೊಹಮಡನ್ ತಂಡದ ಪರ ತಾರೊ ಹಸೆಗಾವಾ ಒಂದು ಗೋಲು ದಾಖಲಿಸಿದರು.
ಈ ಪಂದ್ಯಕ್ಕೂ ಮೊದಲು ಆಡಿದ ನಾಲ್ಕು ಪಂದ್ಯಗಳಲ್ಲಿ ಈಸ್ಟ್ ಬೆಂಗಾಲ್ ತಂಡ ಎರಡರಲ್ಲಿ ಸೋಲು ಹಾಗೂ ಎರಡರಲ್ಲಿ ಡ್ರಾ ಸಾಧಿಸಿತ್ತು. ಅಲ್ಲದೆ ಗೆಲವಿನ ಹಾದಿಗೆ ಮರಳಲು ಪ್ರಯತ್ನ ನಡೆಸುತ್ತಿತ್ತು. ಹಾಗಾಗಿ ಈ ಪಂದ್ಯದಲ್ಲಿನ ಗೆಲವು ಈಸ್ಟ್ ಬೆಂಗಾಲ್ ಪಾಲಿಗೆ ಮಹತ್ವದ್ದಾಗಿದೆ.
ಇನ್ನು ಮೊಹಮಡನ್ ತಂಡ ಈ ಪಂದ್ಯವೂ ಸೇರಿದಂತೆ ಕಳೆದ ಹತ್ತು ಪಂದ್ಯಗಳಲ್ಲಿ ಗೆಲವು ಸಾಧಿಸಿಲ್ಲ. ಈ ಮೂಲಕ ಮೊಹಮಡನ್ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿದೆ.
ಪಂದ್ಯದ ಆರಂಭದಿಂದಲೇ ಮೊಹಮಡನ್ ವಿರುದ್ಧ ನಿಯಂತ್ರಣ ಸಾಧಿಸಿದ ಈಸ್ಟ್ ಬೆಂಗಾಲ್, 18ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಈ ವೇಳೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡ ಮೊಂಗಾ ತಂಡಕ್ಕೆ ಆರಂಭಿಕ ಗೋಲು ತಂದುಕೊಟ್ಟರು. ನಂತರ ಪಂದ್ಯದ 34ನೇ ನಿಮಿಷದಲ್ಲಿ ಮತ್ತೆ ತಿರುಗೇಟು ನೀಡಿದ ಮೊಹಮಡನ್ ತಂಡದ ತಾರೊ ಹಸೆಗಾವಾ ತಂಡದ ಅಂತರವನ್ನು ಸಮಗೊಳಿಸಿದರು. ಈ ಮೂಲಕ ಉಭಯ ತಂಡಗಳು ಮೊದಲಾರ್ಧದಲ್ಲಿ 1-1 ಗೋಲುಗಳ ಅಂತರದ ಸಮಬಲ ಸಾಧಿಸಿದ್ದವು. ಇನ್ನು ಪಂದ್ಯದ ಎರಡನೇ ಅವಧಿಯಲ್ಲಿ ಅಬ್ಬರಿಸಿದ ಈಸ್ಟ್ ಬೆಂಗಾಲ್ 84ನೇ ನಿಮಿಷದಲ್ಲಿ ಎಡೆ ಚಿಡಿ ಅವರ ಗೋಲಿನಿಂದ ಗೋಲುಗಳ ಅಂತರವನ್ನು ಹೆಚ್ಚಿಸಿಕೊಂಡಿತು. ಅಂತಿಮವಾಗಿ ಈಸ್ಟ್ ಬೆಂಗಾಲ್ ಗೆಲವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

