ವಿಶ್ವ ಟಿಟಿಗೆ ಭಾರತ ತಂಡ: ಶರತ್ ಕಮಲ್ ಸಾರಥ್ಯ
ನವದೆಹಲಿ: ಭಾರತದ ನಂಬಿಕಸ್ತ ಆಟಗಾರ ಅಚಂತ ಶರತ್ ಕಮಲ್ ಅವರು ಟೋಕಿಯೊದಲ್ಲಿ ಏಪ್ರಿಲ್ 28ರಿಂದ ಮೇ 5ರ ವರೆಗೆ ನಡೆಯಲಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡದ ಸಾರಥ್ಯ ವಹಿಸಿದ್ದಾರೆ,
ಈ ಪಂದ್ಯಾವಳಿಗಾಗಿ ಮಂಗಳವಾರ 10 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಪುರುಷರ ತಂಡದಲ್ಲಿ ಶರತ್ ಕಮಲ್ ಹೊರತಾಗಿ ಸೌಮ್ಯಜೀತ್ ಘೋಶ್, ಹರ್ಮೀತ್ ದೇಸಾಯಿ, ಆಂಥೋನಿ ಅಮಲ್ರಾಜ್ ಮತ್ತು ಸಾನಿಲ್ ಶೆಟ್ಟಿ ಸಹ ಇದ್ದಾರೆ.
ೆಅದೇ ರೀತಿ ಮಹಿಳೆಯರ ವಿಭಾಗದಲ್ಲಿ ಮನಿಕಾ ಬಾತ್ರಾ, ಪೂಜಾ ಸಹಸ್ರಾಬುಧೆ, ಕೆ. ಶಾಮಿನಿ, ಅಂಕಿತಾ ದಾಸ್ ಮತ್ತು ಮಾಧುರಿಕಾ ಪಾಟ್ಕರ್ ಸ್ಥಾನ ಪಡೆದಿದ್ದಾರೆ.
2012ರಲ್ಲಿ ಡಾರ್ಟ್ಮಂಡ್ನಲ್ಲಿ ನಡೆದ ಕಳೆದ ಆವೃತ್ತಿಯ ಪಂದ್ಯಾವಳಿಯಲ್ಲಿ ಭಾರತದ ಪುರುಷರ ತಂಡ 27ನೇ ಸ್ಥಾನ ಪಡೆದಿತ್ತು. ಆದರೆ, ಈ ಬಾರಿ ಉತ್ತಮ ಪ್ರದರ್ಶನ ನೀಡುವ ಮೂಲಕ ಉನ್ನತ ಸ್ಥಾನ ಪಡೆಯುವ ವಿಶ್ವಾಸದಲ್ಲಿ ಭಾರತದ ಆಟಗಾರರಿದ್ದಾರೆ.
ವಿಶ್ವ ಟೇಬಲ್ ಚಾಂಪಿಯನ್ಶಿಪ್ನಲ್ಲಿ ಭಾರತದ ಅತ್ಯುತ್ತಮ ಸಾಧನೆ ಎಂದರೆ 1985ರಲ್ಲಿ ನಡೆದ ಪಂದ್ಯಾವಳಿಯಲ್ಲಿ 12ನೇ ಸ್ಥಾನ ಪಡೆದಿರುವುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

