ಕ್ರೀಡೆ

ಗೆದ್ದು ಬೀಗಿದ ಬಿಎಫ್‌ಸಿ

Published On :

ಕೋಲ್ಕತಾ: ಪದಾರ್ಪಣೆ ಮಾಡಿದ ವರ್ಷವೇ ಐ ಲೀಗ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಕನಸಿನ ಹಾದಿಯಲ್ಲಿ ಸಾಗುತ್ತಿರುವ ಬೆಂಗಳೂರು ಎಫ್‌ಸಿ, ಯುನೈಟೆಡ್ ಎಸ್‌ಸಿ ವಿರುದ್ಧ ಗೆಲವು ದಾಖಲಿಸಿದೆ. ಈ ಮೂಲಕ ಪ್ರಶಸ್ತಿಯ ಸನಿಹಕ್ಕೆ ತಮ್ಮ ಪಯಣ ಮುಂದುವರಿಸಿದೆ.
ಗುರುವಾರ ಇಲ್ಲಿನ ಕಲ್ಯಾಣಿ ಕ್ರೀಡಾಂಗಣದಲ್ಲಿ ನಡೆದ 21ನೇ ಸುತ್ತಿನ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ 3-1 ಗೋಲುಗಳ ಅಂತರದಲ್ಲಿ ಯುನೈಟೆಡ್ ತಂಡವನ್ನು ಮಣಿಸಿದೆ. ಈ ಗೆಲವಿನ ಮೂಲಕ ಬಿಎಫ್‌ಸಿ 37 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ.
ಪಂದ್ಯದ ಆರಂಭದಿಂದಲೂ ಯುನೈಟೆಡ್ ತಂಡದ ವಿರುದ್ಧ ನಿಯಂತ್ರಣ ಸಾಧಿಸಿದ ಬಿಎಫ್‌ಸಿಗೆ ಥಾಯ್ ಸಿಂಗ್(44), ಸೀನ್ ರೂನಿ(61), ಸುನಿಲ್ ಛೆಟ್ರಿ(89) ಗೋಲು ತಂದುಕೊಡುವ ಮೂಲಕ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು ಯುನೈಟೆಡ್ ತಂಡದ ಪರ ಎರಿಕ್ ಬ್ರೌನ್(54) ಗೋಲು ದಾಖಲಿಸಿದರು.
ಈ ಪಂದ್ಯದಲ್ಲಿ ಯುನೈಟೆಡ್ ತಂಡ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದರೆ ಬಿಎಫ್‌ಸಿ ಕೇವಲ ಒಂದು ಬದಲಾವಣೆ ಮಾಡಿದು. ತಂಡದ ಪರ ರಾಬಿನ್ ಸಿಂಗ್ ತಡವಾಗಿ ಕಣಕ್ಕಿಳಿದು, ಬೈಕೊಕಿ ಬೆಂಗೈಚೊ ಅವರ ಸ್ಥಾನ ತುಂಬಿದರು.
ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ಪರಸ್ಪರ ಹೋರಾಟ ನಡೆಸಿದವು. ಈ ವೇಳೆ ಆಕ್ರಮಣಕಾರಿ ದಾಳಿಗಿಳಿದ ಬಿಎಫ್‌ಸಿ ಆಟಗಾರರು ಗೋಲು ದಾಖಲಿಸುವ ಪ್ರಯತ್ನ ನಡೆಸಿದರು. ಆದರೆ ಆರಂಭದಲ್ಲಿ ಯಶಕಾಣಲಿಲ್ಲ.
ಪಂದ್ಯದ ಮೊದಲ ಅವಧಿಯ ಅಂತಿಮದಲ್ಲಿ ಅಂದರೆ 44ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡ ಥಾಯ್ ಸಿಂಗ್ ಬಿಎಫ್‌ಸಿಗೆ ಮೊದಲ ಗೋಲು ತಂದುಕೊಟ್ಟರು. ಈ ಮೂಲಕ ಪಂದ್ಯದ ಮೊದಲಾರ್ಧದಲ್ಲಿ ಬಿಎಫ್‌ಸಿ 1-0 ಅಂತರದ ಮುನ್ನಡೆ ಕಂಡುಕೊಂಡಿತು.
ಇನ್ನು ಎರಡನೇ ಅವಧಿಯ ಆರಂಭದಲ್ಲಿ ಹೋರಾಟ ನೀಡಿದ ಯುನೈಟೆಡ್ ತಂಡದ ಅಂತರವನ್ನು ಸಮಗೊಳಿಸಿತು. 54ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಎರಿಕ್ ಬ್ರೌನ್ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು.
ನಂತರದ ಅವಧಿಯಲ್ಲಿ ಮತ್ತೆ ನಿಯಂತ್ರಣ ಕಂಡುಕೊಂಡ ಬಿಎಫ್‌ಸಿ ಆಟಗಾರರು ಎದುರಾಳಿ ತಂಡಕ್ಕೆ ಕಠಿಣ ಸವಾಲಾಗಿ ಪರಿಣಮಿಸಿದರು. 61ನೇ ನಿಮಿಷದಲ್ಲಿ ಸೀನ್ ರೂನಿ ಗೋಲು ದಾಖಲಿಸುವ ಮೂಲಕ ಬಿಎಫ್‌ಸಿ ಮತ್ತೆ ಮುನ್ನಡೆ ಸಾಧಿಸಲು ನೆರವಾದರು.  ಅಂತಿಮವಾಗಿ ಪಂದ್ಯದ 89ನೇ ನಿಮಿಷದಲ್ಲಿ ಮತ್ತೆ ಚುರುಕಿನ ಪ್ರದರ್ಶನ ನೀಡಿದ ನಾಯಕ ಸುನಿಲ್ ಛೆಟ್ರಿ ಗೋಲು ದಾಖಲಿಸಿ ತಂಡದ ಗೆಲವಿನ ಅಂತರವನ್ನು ಹೆಚ್ಚಿಸಿದರು.
ಈ ಗೆಲವಿನೊಂದಿಗೆ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿರುವ ಬಿಎಫ್‌ಸಿ ಪ್ರಶಸ್ತಿಯತ್ತ ಹೆಜ್ಜೆ ಹಾಕಿದೆ. ಅಂಕಪಟ್ಟಿಯಲ್ಲಿ ಬಿಎಫ್‌ಸಿ 37 ಅಂಕ ಪಡೆದರೆ, ದ್ವಿತೀಯ ಸ್ಥಾನದಲ್ಲಿರುವ ಪುಣೆ ಎಫ್‌ಸಿ 30 ಅಂಕ ಹೊಂದಿದೆ. ಈ ಮೂಲಕ ಅಗ್ರಸ್ಥಾನಕ್ಕೆ 7 ಅಂಕಗಳ ಅಂತರವನ್ನು ಕಾಯ್ದಕೊಂಡಿರುವುದು ಬಿಎಫ್‌ಸಿ ಹಾದಿ ಸುಗಮವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.