ಜಾರ್ಖಂಡ್ಗೆ ಭರ್ಜರಿ ಜಯ
ಮೈಸೂರು: ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಜಾರ್ಖಂಡ್ ಆಟಗಾತಕಿರಿಯ ಮಹಿಳೆಯಗಾರ್ತಿಯರು 4ನೇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಎ ವಿಭಾಗದಲ್ಲಿ ಬಂಗಾಳ ಹಾಕಿ ಸಂಸ್ಥೆಯನ್ನು 19-0 ಅಂತರದಿಂದ ಮಣಿಸಿದ್ದಾರೆ.
ಶನಿವಾರ ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್ನಲ್ಲಿ ನಡೆದ ಎ ವಿಭಾಗದ ಸಿ ಗುಂಪಿನ ಮೊದಲ ಪಂದ್ಯದಲ್ಲಿ ಜಾರ್ಖಂಡ್ ತಂಡದ ಕಾಂತಿ ಪ್ರಧಾನ್ ಐದು ಗೋಲ್, ರಜನಿ ಸೊರೆಂಗ್ ಮತ್ತು ನೋಮಿತ್ ಕ್ಷಲ್ಸೋ ಬಾರಿಸಿದ ತಲಾ ನಾಲ್ಕು ಗೋಲು ಬಾರಿಸಿದರು. ಸಾಲದು ಎಂಬಂತೆ ತನಗೆ ದೊರಕಿದ ಐದು ಪೆನಾಲ್ಟಿ ಕಾರ್ನರ್ನ್ನು ಜಾರ್ಖಂಡ್ ಸದುಪಯೋಗ ಪಡಿಸಿಕೊಂಡು 19-0 ಅಂತರದಲ್ಲಿ ಬಂಗಾಳ ತಂಡವನ್ನು ಸೋಲಿಸಿತು.
ಪಂದ್ಯಾವಳಿಯ ಮೊದಲ ನಿಮಿಷದಲ್ಲಿ ನಿಶಾರಾಣಿ ಬಾರಿಸಿದ ಮೊದಲ ಗೋಲಿನಿಂದಲೆ ಜರ್ಜರಿತವಾದ ಬಂಗಾಳ ತಂಡ ಇಡಿ ಪಂದ್ಯವನ್ನು ಜಾರ್ಖಂಡ್ಗೆ ಒಪ್ಪಿಸಿ ಒತ್ತಡಕ್ಕೆ ಸಿಲುಕಿತು. ನಿಶಾ 1, 28 ಮತ್ತು 34ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಕಾಂತಿ ಪ್ರಧಾನ್ 7 ಮತ್ತು 15ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಎರಡು ಗೋಲು ಬಾರಿಸಿ, ಬಳಿಕ 31, 60 ಮತ್ತು 62ನೇ ನಿಮಿಷದಲ್ಲಿ ಫೀಲ್ಡ್ ಗೋಲು ದಾಖಲಿಸಿದರು. ರಜನಿ ಸೊರಂಗ್ 14, 48, 54 ಮತ್ತು 55(ಪೆನಾಲ್ಟಿ ಕಾರ್ನರ್) ನಿಮಿಷದಲ್ಲಿ ಗೋಲು ಬಾರಿಸಿದರು. ಅಂತೆಯೆ ನೋಮಿತ ಕ್ಷಲ್ಸೋ ಸಹ 49, 58, 61(ಪೆನಾಲ್ಟಿ ಕಾರ್ನರ್) ಮತ್ತು 69ನೇ ನಿಮಿಷದಲ್ಲಿ ಗೋಲು ಮಾಡಿದರು.
ಬಳಿಕ ತಂಡದ ನಾಯಕಿ ನೇಹ ಟೊಪ್ನೋ, ರಂಜಿತ ಮಿಂಜ್ ಮತ್ತು ಸುಭಾಷಿ ಹೆಮಾರೋವ್ (ಪೆನಾಲ್ಟಿ ಕಾರ್ನರ್) ತಲಾ ಒಂದೊಂದು ಗೋಲು ಬಾರಿಸಿದರು. ಜಾರ್ಖಂಡ್ ತಂಡವು ಪಂದ್ಯದ ಮೊದಲಾರ್ಧದಲ್ಲಿಯೆ 10-0 ಅಂತರ ಕಾಯ್ದುಕೊಂಡಿತ್ತು. ದ್ವಿತೀಯಾರ್ಧದಲ್ಲಿ ಮತ್ತೆ 9 ಗೋಲುಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತು. ಬಂಗಾಳ ತಂಡದ ಆಟಗಾರರಿಗೆ ಚೆಂಡು ಗೋಲು ಅಂಕಣದ ಬಳಿಗೆ ಹೋಗದಂತೆ ನೋಡಿಕೊಳ್ಳುವುದೆ ದೊಡ್ಡ ಸವಾಲಾಯಿತು.
ಗೆದ್ದ ಮಹಾರಾಷ್ಟ್ರ: ಬಳಿಕ ನಡೆದ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವನ್ನು ಮಹಾರಾಷ್ಟ್ರ ತಂಡವು 3-2 ಅಂತರದಿಂದ ಮಣಿಸಿತು. ಮಹಾರಾಷ್ಟ್ರ ತಂಡದ ನಾಯಕಿ ಐಶ್ವರ್ಯ ಚೌಹಾಣ್ 2 ಗೋಲು ಮತ್ತು ಪೂಜಾ ಭೋಯರ್(ಪೆನಾಲ್ಟಿ ಕಾರ್ನರ್) ಒಂದು ಗೋಲು ಬಾರಿಸಿದರೆ, ಇದಕ್ಕೆ ಉತ್ತರವಾಗಿ ಉತ್ತರ ಪ್ರದೇಶದ ತಂಡದ ಸೋನಾಲ್ ತಿವಾರಿ ಮತ್ತು ಶ್ರೇಯಾಸಿಂಗ್ ತಲಾ ಒಂದೊಂದು ಗೋಲು ಬಾರಿಸಿದರು. ಮಹಾರಾಷ್ಟ್ರ ತಂಡ ಪಂದ್ಯದ ಮೊದಲಾರ್ಧದಲ್ಲಿ 3 ಗೋಲು, ಉತ್ತರಪ್ರದೇಶ ತಂಡ 1 ಗೋಲು ಬಾರಿಸಿತ್ತು. ದ್ವಿತೀಯಾರ್ಧದಲ್ಲಿ ಮಹಾರಾಷ್ಟ್ರ ಯಾವುದೆ ಗೋಲು ಬಾರಿಸಲಿಲ್ಲ. ಪಂದ್ಯದ ಕಡೆಯಲ್ಲಿ ಉತ್ತರಪ್ರದೇಶದ ಶ್ರೇಯಾಸಿಂಗ್ ಒಂದು ಗೋಲು ಬಾರಿಸಿದರು.
ಮಂಕಾದ ಸಾಯ್, ರಾಜಸ್ಥಾನ: ಮೂರನೇ ಪಂದ್ಯದಲ್ಲಿ ಎ ಗುಂಪಿನ ತಂಡಗಳಾದ ಹರ್ಯಾಣ ಮತ್ತು ಸಾಯ್(ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ) ಮುಖಾಮುಖಿಯಾದವು. ಹರ್ಯಾಣ ತಂಡವು ಸಾಯ್ ತಂಡವನ್ನು 6-0 ಅಂತರದಿಂದ ಮಣಿಸಿತು. ಹರ್ಯಾಣ ತಂಡ ನವಪ್ರೀತ್ ಕೌರ್ ಎರಡು ಗೋಲು ಬಾರಿಸಿದರು. ಹರಿದೀಪ್ಕೌರ್ ಪಂದ್ಯದ 7ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. ಜ್ಯೋತಿಗುಪ್ತ, ರೀತ್ ಮತ್ತು ದೇವಕಿ ಸೇನ್ ತಲಾ ಒಂದು ಗೋಲು ಬಾರಿಸಿದರು. ಪಂದ್ಯದ ಮೊದಲಾರ್ಧದಲ್ಲಿ 2-0 ಇದ್ದ ಮೊತ್ತ, ದ್ವಿತೀಯಾರ್ಧದ ಅಂತ್ಯಕ್ಕೆ 6-0 ಕ್ಕೆ ತಲುಪಿತು. ನಾಲ್ಕನೇ ಪಂದ್ಯದಲ್ಲಿ ತಮಿಳುನಾಡು ತಂಡವು, ರಾಜಸ್ಥಾನ ತಂಡವನ್ನು 2-0 ಅಂತರದಲ್ಲಿ ಮಣಿಸಿತು.
ಪಂದ್ಯ ಒಂದು- ಬೆಂಗಾಲ್ ತಂಡ ಮಣಿಸಿದ ಜಾರ್ಖಂಡ್ 19-0.
ಜಾರ್ಖಂಡ್ ಗೋಲು ಸ್ಕೋರ್
ನಿಶಾರಾಣಿ 1, 28, 34ನಿ.
ಕಾಂತಿ ಪ್ರಧಾನ್ 7, 15, 31, 60, 62ನಿ.
ರಜನಿ ಸೊರೆಂಜ್ 14, 48, 54, 55ನಿ.
ನೇಹ ಟೊಪ್ನೊ 16ನಿ.
ರಂಜಿತ ಮಿಂಜ್ 32ನಿ.
ಸುಭಾಷಿ ಹೆಮಾರೊವ್ 33ನಿ.
ನೋಮಿತ ಕ್ಷಲ್ಸೋ 49, 58, 61, 69ನಿ.
ಪಂದ್ಯ ಎರಡ ಉತ್ತರ ಪ್ರದೇಶ ತಂಡ ಮಣಿಸಿದ ಮಹಾರಾಷ್ಟ್ರ 3-2.
ಮಹಾರಾಷ್ಟ್ರ ಗೋಲು ಸ್ಕೋರ್
ಐಶ್ವರ್ಯ ಚೌಹಾಣ್ 3, 14ನಿ.
ಪೂಜಾ ಭೋಯರ್ 33ನಿ.
ಉತ್ತರ ಪ್ರದೇಶ ಗೋಲು ಸ್ಕೋರ್
ಸೋನಾಲ್ ತಿವಾರಿ 27ನಿ.
ಶ್ರೇಯಾಸಿಂಗ್ 69ನಿ.
ಪಂದ್ಯ ಮೂರು- ಸಾಯ್ ತಂಡ ಮಣಿಸಿದ ಹರ್ಯಾಣ 6-0.
ಹರ್ಯಾಣ ಗೋಲು ಸ್ಕೋರ್
ಹರಿದೀಪ್ಕೌರ್ 7ನಿ.
ನವಪ್ರೀತ್ ಕೌರ್ 16, 48ನಿ.
ಜ್ಯೋತಿ ಗುಪ್ತ 52ನಿ.
ರೀತು 58ನಿ.
ದೇವಿಕ ಸೇನ್ 62ನಿ.
ಪಂದ್ಯ ನಾಲ್ಕು- ರಾಜಸ್ಥಾನ ತಂಡ ಮಣಿಸಿದ ತಮಿಳುನಾಡು 2-0
ಮೇನಗ 30ನಿ.
ಜಯಲಕ್ಷ್ಮಿ 37ನಿ.
-ಡಿ.ಎನ್. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

