ಭುಜದ ನೋವಿನಲ್ಲೇ ಶತಕ ಸಿಡಿಸಿದ್ದ ಮೈಕೆಲ್ ಕ್ಲಾರ್ಕ್
ಸಿಡ್ನಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಂತಿಮ ಮತ್ತು ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದರೂ, ಆಸ್ಟ್ರೇಲಿಯಾ ತಂಡದ ನಾಯಕ ಮೈಕೆಲ್ ಕ್ಲಾರ್ಕ್ ಶತಕ ಸಿಡಿಸಿರುವುದು ಸೋಮವಾರ ಬಹಿರಂಗವಾಗಿದೆ. ಪಂದ್ಯದಲ್ಲಿ ಕ್ಲಾರ್ಕ್ ಭುಜದ ನೋವಿನಿಂದ ಬಳಲುತ್ತಿದ್ದರಂತೆ. ಅದಾಗ್ಯೂ ಶತಕ ಸಿಡಿಸಿದ್ದು ಸ್ಕ್ಯಾನಿಂಗ್ನಿದ ಬಹಿರಂಗವಾಗಿದೆ. ಇದೇ ತಿಂಗಳು ಕೇಪ್ಟೌನ್ನಲ್ಲಿ ನಡೆದ ಪಂದ್ಯದ ಮೊದಲ ದಿನದ ಆಟದಲ್ಲಿ ಕ್ಲಾರ್ಕ್ಗೆ ಬೌನ್ಸರ್ಗಳನ್ನು ಎದುರಿಸಲು ಅಂಜಿಕೆಯಾಗುತ್ತಿತ್ತಂತೆ. ಆಫ್ರಿಕಾದ ವೇಗಿ ಮಾರ್ನ್ ಮಾರ್ಕೆಲ್ ಅವರು ಎಸೆಯುತ್ತಿದ್ದ ಶಾರ್ಟ್ ಪಿಚ್ ಎಸೆತಗಳು, ಕ್ಲಾರ್ಕ್ ಅವರ ಹಣೆಗೆ, ಮೊಣಕೈ, ಭುಜ ಹಾಗೂ ಹೆಲ್ಮೆಟ್ಗೆ ಬಡಿಯುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತಂತೆ.ಗಾಯದ ಸ್ಥಿತಿಯಲ್ಲೂ ಅಜೇಯ 161 ರನ್ ಗಳಿಸಿದ್ದ ಕ್ಲಾರ್ಕ್ ಅವರು, ತಮ್ಮ ವೃತ್ತಿಜೀವನದಲ್ಲಿ ಶ್ರೇಷ್ಠ ರನ್ ಗಳಿಸುವ ಮೂಲಕ ತಂಡ 3 ಪಂದ್ಯಗಳ ಸರಣಿಯಲ್ಲಿ 2-1 ಅಂತರದಿಂದ ಜಯ ಸಾಧಿಸಲು ಕಾರಣವಾಗಿದ್ದರು. ಗಾಯವಾದ ನಂತರವೂ ಕ್ಲಾರ್ಕ್ ಬ್ಯಾಟಿಂಗ್ ಮಾಡಿರುವುದನ್ನು ಸೋಮವಾರ ಸ್ಕ್ಯಾನ್ ವರದಿಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಈ ವಾರಾಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾದ ದೇಶೀಯ ಶಿಫೀಲ್ಡ್ ಶೀಲ್ಡ್ ಪಂದ್ಯಾವಳಿಯ ಫೈನಲ್ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ನೂ ಸೌತ್ ವೇಲ್ಸ್ ಪರ ಆಡುವ ಅವರ ಕನಸು ಭಗ್ನಗೊಂಡಿದೆ. 'ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ಟೌನ್ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಮೈಕೆಲ್ ಕ್ಲಾರ್ಕ್ ಅವರು ಗಾಯಗೊಂಡಿದ್ದಾರೆ' ಎಂದು ಆಸ್ಟ್ರೇಲಿಯಾ ತಂಡದ ಫಿಸಿಯೋತೆಪಿಸ್ಟ್ ಅಲೆಕ್ಸ್ ಕೌಂಟೌರಿಸ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

