ಕ್ರೀಡೆ

ಜಾರ್ಖಂಡ್- ಹರ್ಯಾಣ ಸೆಮೀಸ್‌ಗೆ

ಜಾರ್ಖಂಡ್- ಹರ್ಯಾಣ ಸೆಮೀಸ್‌ಗೆ
Published On :

ಕ.ಪ್ರ. ವಾರ್ತೆ, ಮೈಸೂರು, ಮಾ. 17
ಕಿರಿಯ ಮಹಿಳೆಯರ 4ನೇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಜಾರ್ಖಂಡ್ ಮತ್ತು ಹರ್ಯಾಣ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.
ಹಾಕಿ ಕರ್ನಾಟಕ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಎ ವಿಭಾಗದ ಪಂದ್ಯಾವಳಿಯಲ್ಲಿ ಸಿ ಗುಂಪಿನ ಜಾರ್ಖಂಡ್, ಮಹಾರಾಷ್ಟ್ರವನ್ನು 6-2 ಅಂತರದಿಂದಲೂ, ಎ ಗುಂಪಿನ ಹರಿಯಾಣ, ರಾಜಸ್ಥಾನ ತಂಡವನ್ನು 14-0 ಅಂತರದಿಂದಲೂ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿವೆ. ಮಾ. 22ರಂದು ನಡೆಯುವ ಸೆಮಿಫೈನಲ್‌ನಲ್ಲಿ ಈ ತಂಡಗಳು ಮುಖಾಮುಖಿ ಆಗಲಿವೆ.
ದಿನದ ಮೊದಲ ಪಂದ್ಯದಲ್ಲಿ ಜಾರ್ಖಂಡ್ ತಂಡವು ಮಹಾರಾಷ್ಟ್ರ ತಂಡವನ್ನು 6-2 ಅಂತರದಿಂದ ಮಣಿಸಿತು. ಜಾರ್ಖಂಡ್‌ನ ರಜನಿ ಸೊರೆಂಗ್ ಒಂದು ಪೆನಾಲ್ಟಿ ಸ್ಟ್ರೋಕ್ ಮತ್ತು ಎರಡು ಪೆನಾಲ್ಟಿ ಕಾರ್ನರ್‌ನ ಲಾಭ ಪಡೆದು ಒಟ್ಟು ಮೂರು ಗೋಲ್ ಬಾರಿಸಿದರು. ಪಂದ್ಯದ ನಾಲ್ಕನೆ ನಿಮಿಷದಲ್ಲಿಯೆ ಮಹಾರಾಷ್ಟ್ರ ತಂಡಕ್ಕೆ ಜಾರ್ಖಂಡ್‌ಗೆ ಪೆನಾಲ್ಟಿ ಕಾರ್ನರ್‌ನ ಅವಕಾಶ ನೀಡಿತು. ಈ ನಡುವೆ ಮಹಾರಾಷ್ಟ್ರದ ಪೂಜಾ ಸಿಂಧೆ ಮತ್ತು ನಾಯಕಿ ಐಶ್ವರ್ಯ ಚೌಹಾಣ್ ತಲಾ ಒಂದೊಂದು ಗೋಲ್ ಬಾರಿಸಿದರು.
ದಿನದ ಮೂರನೆ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು, ಹಾಕಿ ಹರಿಯಾಣವು 14-0 ಅಂತರದಿಂದ ಮಣಿಸಿ ಸೆಮೀಸ್‌ಗೆ ಅರ್ಹತೆ ಪಡೆಯಿತು. ಹರ್ಯಾಣದ ರೀತ್ ನಾಲ್ಕು ಗೋಲ್, ಜ್ಯೋತಿಗುಪ್ತ 3 ಗೋಲ್, ನಾಯಕಿ ನೇಹ ಗೋಯಲ್, ನರಿಂದರ್ ಕೌರ್ ಮತ್ತು ಹರದೀಪ್ ಕೌರ್ ಅವರು ತಲಾ ಎರಡು ಗೋಲ್ ಬಾರಿಸಿದರು. ಉಳಿದಂತೆ ದೇವಿಕ ಸೇನ್ ಒಂದು ಗೋಲ್ ಬಾರಿಸಿದರು. ತಂಡದ ರೀತ್ 9ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸಿ ಹರಿಯಾಣ ಖಾತೆ ತೆರೆದರು. ಪಂದ್ಯದ ಮೊದಲಾರ್ಧದಲ್ಲಿ 8 ಗೋಲ್ ಮತ್ತು ದ್ವಿತೀಯಾರ್ಧಕ್ಕೆ 14 ಗೋಲ್ ಸಂಪಾದಿಸಿತು.
ನಂತರ ಪಂದ್ಯದಲ್ಲಿ ಬೆಂಗಾಳ್ ತಂಡವು, ಉತ್ತರಪ್ರದೇಶ ವಿರುದ್ಧ 9-0 ಅಂತರದಿಂದ ಸೋತಿತು. ಇಂದು ನಡೆದ ಪಂದ್ಯಾವಳಿಯಲ್ಲಿ ಉತ್ತರಪ್ರದೇಶ ತಂಡಕ್ಕೆ ಬೆಂಗಾಳ್ ತಂಡದ ಗೋಲ್ ಕೀಪರ್‌ಗಳಾದ ಬರ್ಶ ಘೋಷ್ ಮತ್ತು ಪ್ರಿಯಾಂಕ ರಾಯ್ ಪ್ರಬಲ ಪೈಪೋಟಿ ನೀಡಿದರಾದರೂ, ತಂಡದ ಇತರ ಆಟಗಾರರು ಗೋಲ್ ಬಾರಿಸುವಲ್ಲಿ ವಿಫಲರಾದರು.
ಈ ನಡುವೆ ಉತ್ತರಪ್ರದೇಶ ತಂಡದ ಶ್ರೇಯಾಸಿಂಗ್ ಮತ್ತು ಸೋನಾಲ್ ತಿವಾರಿ ತಲಾ ಮೂರು ಗೋಲ್ ಬಾರಿಸಿದ್ದಾರೆ. ಅಲ್ಲದೆ ಚಾಂದ್ ಖಾನ್, ಸೋನಮ್ ಮತ್ತು ಪ್ರಿಯಾಂಕ ಗೌತಮ್ ತಲಾ ಒಂದೊಂದು ಗೋಲ್ ಬಾರಿಸಿದರು. ಪಂದ್ಯದ 17ನೇ ನಿಮಿಷದಲ್ಲಿ ಶ್ರೇಯಾ ಮೊದಲ ಗೋಲ್ ದಾಖಲಿಸಿದರು. ಪಂದ್ಯದ ಮೊದಲಾರ್ಧದವರೆಗೂ ಶ್ರೇಯಾ ದಾಖಲಿಸಿದ್ದ ಒಂದು ಗೋಲ್ ಮಾತ್ರ ಯುಪಿ ಖಾತೆಯಲ್ಲಿತ್ತು. ದ್ವಿತೀಯಾರ್ಧದಲ್ಲಿ ಶ್ರೇಯಾ ಮತ್ತು ಸೋನಾಲ್ ತಿವಾರಿ ಅವರ ಅಮೋಘ ಆಟದ ನೆರವಿನಿಂದ 9 ಗೋಲ್ ದಾಖಲಾಯಿತು. ಬೆಂಗಾಳ್ ತಂಡಕ್ಕೆ ಪೆನಾಲ್ಟಿ ಸ್ಟ್ರೋಕ್‌ನ ಅವಕಾಶ ಲಭಿಸಿತ್ತಾದರೂ ತಂಡದ ನಾಯಕಿ ರಾಧ ಪಾಸ್ವಾನ್ ಅವರ ಪ್ರಯತ್ನ ಗುರಿ ತಪ್ಪಿತು.
ದಿನದ ಕಡೆಯ ಪಂದ್ಯದಲ್ಲಿ ಹಾಕಿ ತಮಿಳುನಾಡು ತಂಡದ ವಿರುದ್ಧ ಸಾಯ್ ತಂಡ 7-0 ಅಂತರದಿಂದ ಮಣಿಸಿತು. ತಂಡದ ಮನೀಶಾ ಸತತ ನಾಲ್ಕು ಗೋಲ್ ಬಾರಿಸಿ ತಂಡಕ್ಕೆ ಆಸರೆಯಾದರು. ಅಂಜಲಿ ಗೌತಮ್ ಎರಡು ಮತ್ತು ಸಂಗೀತ ರೋಸ್ ಕುಲ್ಲು ಒಂದು ಗೋಲ್ ಬಾರಿಸಿದರು.
ಮಹಾರಾಷ್ಟ್ರ ಮಣಿಸಿದ ಜಾರ್ಖಂಡ್ 6-2ಜಾರ್ಖಂಡ್ ಗೋಲ್ ಸ್ಕೋರ್
ರಜನಿ ಸೊರೆಂಗ್- 4, 12, 18ನಿ.
ರಂಜೀತ ಮಿಂಜ್- 21ನಿ.
ಕಾಂತಿ ಪ್ರಧಾನ್- 29ನಿ.
ನೋಮಿತ್ ಕ್ಷಲಕ್ಸೋ-- 50ನಿ.
ಮಹಾರಾಷ್ಟ್ರ ಗೋಲ್ ಸ್ಕೋರ್
ಪೂಜಾ ಸಿಂಧೆ- 28ನಿ. ಐಶ್ವರ್ಯ ಚೌಹಾಣ್- 49ನಿ.
ಬೆಂಗಾಳ್ ತಂಡ ಮಣಿಸಿದ ಉತ್ತಪ್ರದೇಶ- 9-0ಉತ್ತರಪ್ರದೇಶ ಗೋಲ್ ಸ್ಕೋರ್
ಶ್ರೇಯಾ ಸಿಂಗ್- 17, 51, 55ನಿ.
ಸೋನಾಲ್ ತಿವಾರಿ- 37, 57, 60ನಿ.
ಚಾಂದ್ ಖಾನ್- 49ನಿ.
ಸೋನಮ್- 59ನಿ.
ಪ್ರಿಯಾಂಕ ಗೌತಮ್- 67ನಿ.

ಡಿ.ಎನ್. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.