ಮಿಶ್ರಾಗೆ ದಂಡಿಸಿದ ಧೋನಿ
ಫಾತುಲ್ಹಾ: ತಮ್ಮ ಕೊನೇ ಅಭ್ಯಾಸ ಪಂದ್ಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಮಂಗಳವಾರ ಫಾತುಲ್ಹಾದಲ್ಲಿ ನೆಟ್ ಪ್ರಾಕ್ಟೀಸ್ ನಡೆಸಿತು. ವಿಷಯ ಅದಲ್ಲ, ನೆಟ್ ಅಭ್ಯಾಸದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಸ್ಪಿನ್ನರ್ ಅಮಿತ್ ಮಿಶ್ರಾ ಬೌಲಿಂಗ್ ಅನ್ನು ಸುಲಭವಾಗಿ ಎದುರಿಸಿದ್ದು, ಅದು, ಕೆಲ ವರ್ಷಗಳ ಹಿಂದೆ ಮುರಳಿ ಕಾರ್ತಿಕ್ ಬೌಲಿಂಗ್ನಲ್ಲಿ ಆಗ ತಂಡದ ನಾಯಕರಾಗಿದ್ದ ಸೌರವ್ ಗಂಗೂಲಿ ಮಾದರಿಯಲ್ಲೇ ಧೋನಿ ಅವರು ಮಿಶ್ರಾ ಬೌಲಿಂಗ್ ಎದುರಿಸಿದರು. ಮಿಶ್ರಾ ಅವರಿಂದ 10 ಎಸೆತಗಳನ್ನು ಎದುರಿಸಿದ ಧೋನಿ ಸುಮಾರು 5 ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸಿದರು.
ಇದು ಧೋನಿ, ಯಾಕೆ ಆಡುವ ಹನ್ನೊಂದು ಆಟಗಾರರಲ್ಲಿ ಹರ್ಯಾಣದ ಸ್ಪಿನ್ನರ್ ಮಿಶ್ರಾಗೆ ಅವಕಾಶ ನೀಡುವುದಿಲ್ಲ ಎಂಬುದಕ್ಕೆ ಉತ್ತರವಾಗಿತ್ತು.
ಗಂಗೂಲಿ ಸಹ ಎಡಗೈ ಸ್ಪಿನ್ನರ್ಗಳ ಬಗ್ಗೆ ವಿಶ್ವಾಸ ಹೊಂದಿರಲಿಲ್ಲವಂತೆ. ಕಾರಣ, ಕಾರ್ತಿಕ್ ಬೌಲಿಂಗ್ ಎದುರಿಸುವಲ್ಲಿ ಗಂಗೂಲಿ ಯಾವತ್ತೂ ಸಮಸ್ಯೆ ಅನುಭವಿಸರಲಿಲ್ಲವಂತೆ. ಆದರೆ, ಗಂಗೂಲಿಯಿಂದಲೇ 2000ರಿಂದ 2004ರಲ್ಲಿ ಕೇವಲ 8 ಪಂದ್ಯಗಳಲ್ಲೇ ಕಾರ್ತಿಕ್ ತಮ್ಮ ಟೆಸ್ಟ್ ಕ್ರಿಕೆಟ್ ಜೀವನ ಮುಕ್ತಾಯಗೊಂಡಿತು ಎಂದು ವದಂತಿಯಾಗಿತ್ತು.
ಈಗ ಮಿಶ್ರಾ ಅವರ ಬೌಲಿಂಗ್ ಅನ್ನು ಧೋನಿ ಎದುರಿಸುತ್ತಿದ್ದಾಗ ನೋಡಿದವರೇ ನಾಚಿಕಪಡುವಂತಿತ್ತು. ಅದು ಇಂಗ್ಲೆಂಡ್ ತಂಡದ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯಕ್ಕೂ ಮುನ್ನ ಈ ರೀತಿಯಾಗಿದ್ದು ಅಚ್ಚರಿ ಉಂಟುಮಾಡಿತು.
ಒಂದೇ ಒಂದು ಎಸೆತದಲ್ಲಿ ಧೋನಿಗೆ ತೊಂದರೆಯಾಗುವಂತೆ ಬೌಲಿಂಗ್ ಮಾಡಲು ಮಿಶ್ರಾ ಅವರಿಂದ ಸಾಧ್ಯವಾಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

