ಕ್ರೀಡೆ

ಸೂಪರ್ 10ಕ್ಕೆ ಬಾಂಗ್ಲಾ

Published On :

ಚಿತ್ತಗಾಂಗ್: ಹಾಂಕಾಂಗ್ ವಿರುದ್ಧ ಅಲ್ಪ ಮೊತ್ತಕ್ಕೆ ಕುಸಿದು ಪಂದ್ಯದಲ್ಲಿ ಸೋಲನುಭವಿಸಿದರೂ ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್‌ನ ಸೂಪರ್ 10 ಹಂತಕ್ಕೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ಗುರುವಾರ ಇಲ್ಲಿನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹಾಂಕಾಂಗ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾ 16.3 ಓವರ್‌ಗಳಲ್ಲಿ 108 ರನ್‌ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಹಾಂಕಾಂಗ್ 19.4 ಓವರ್‌ಗಳಲ್ಲಿ 8 ವಿಕೆಟ್‌ಗೆ 114 ರನ್ ದಾಖಲಿಸಿತು.
ಹಾಂಕಾಂಗ್ ತಂಡ ಈ ಮೊತ್ತವನ್ನು 13.1 ಓವರ್ ಒಳಗೆ ಬೆಂಬತ್ತಿದ್ದರೆ, ನೇಪಾಳ ತಂಡ ಸೂಪರ್ 10 ಹಂತಕ್ಕೆ ಪ್ರವೇಶ ಪಡೆಯಲಿತ್ತು. ಆದರೆ ಬಾಂಗ್ಲಾದೇಶ ಆರಂಭದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸುವ ಮೂಲಕ ಸೂಪರ್ 10ರ ಹಂತಕ್ಕೆ ಪ್ರವೇಶಿಸಿತು.
ಬಾಂಗ್ಲಾದೇಶದ ಪರ ಆರಂಭಿಕ ಅನಾಮುಲ್ ಹಕ್(26), ಶಕಿಬ್ ಅಲ್ ಹಸನ್(34), ಮುಶ್ಫಿಕರ್ ರಹೀಮ್(23) ಹೊರತು ಪಡಿಸಿ ಉಳಿದ ಯಾವುದೇ ಬ್ಯಾಟ್ಸ್‌ಮನ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಲಿಲ್ಲ. ಪರಿಣಾಮ ಬಾಂಗ್ಲಾದೇಶ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು. ಹಾಂಕಾಂಗ್ ಪರ ನದೀಮ್ 21 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದರು.
ಆರಂಭಿಕ ಕುಸಿತ: ಅಲ್ಪ ಗುರಿಯನ್ನು ಬೆನ್ನಟ್ಟಿದ ಹಾಂಕಾಂಗ್ ತಂಡದ ಗೆಲವಿನ ಹಾದಿ ಸುಗಮವಾಗಿರಲಿಲ್ಲ. ಆರಂಭದಿಂದಲೇ ನಿರಂತರ ಅವಧಿಯಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಹಾಂಕಾಂಗ್ ಒಂದು ಹಂತದಲ್ಲಿ ಸೋಲಿನ ದವಡೆಯಲ್ಲಿತ್ತು. ಈ ವೇಳೆ ಉತ್ತಮ ಬ್ಯಾಟಿಂಗ್ ನಡೆಸಿದ ಮುನಿರ್ ದರ್(36) ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ಇನ್ನು ಆರಂಭಿಕರಾಗಿ ಕಣಕ್ಕಿಳಿದ ಇರ್ಫಾನ್ ಅಹ್ಮದ್(34) ಸಹ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬಾಂಗ್ಲಾದೇಶದ ಪರ ಆಲ್ರೌಂಡ್ ಪ್ರದರ್ಶನ ನೀಡಿದ ಶಕಿಬ್ ಅಲ್ ಹಸನ್, ತಂಡ ಸೂಪರ್ 10 ಹಂತಕ್ಕೆ ಪ್ರವೇಶಿಸಲು ಪ್ರಮುಖ ಪಾತ್ರ ವಹಿಸಿದರು. 4 ಓವರ್ ಮಾಡಿದ ಶಕಿಬ್ 9 ರನ್ ನೀಡಿ 3 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ 16.3 ಓವರ್‌ಗಳಲ್ಲಿ 108
ಶಕಿಬ್ ಅಲ್ ಹಸನ್ 34, ಅನಾಮುಲ್ ಹಕ್ 26, ನದೀಮ್ 21ಕ್ಕೆ4
ಹಾಂಕಾಂಗ್ 19.4 ಓವರ್‌ಗಳಲ್ಲಿ 8 ವಿಕೆಟ್‌ಗೆ 114
ಮುನಿರ್ ದರ್ 36, ಇರ್ಫಾನ್ ಅಹ್ಮದ್ 34, ಶಕಿಬ್ 9ಕ್ಕೆ3

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.