ಕ್ರೀಡೆ

ಹಾಕಿ ಪಂದ್ಯ ಇನ್ನು ಕೇವಲ 60 ನಿಮಿಷ ಮಾತ್ರ

Published On :

ಲಾವುಸನ್ನೆ: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಹಾಕಿ ಪಂದ್ಯದ ಸ್ವರೂಪದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಹೀಗಾಗಿ ಇದುವರೆಗೂ 70 ನಿಮಿಷಗಳ ಕಾಲ ನಡೆಯುತ್ತಿದ್ದ ಪಂದ್ಯ ಈಗ ಕೇವಲ 60 ನಿಮಿಷಗಳ ಕಾಲ ನಡೆಯಲಿದೆ. ಅಲ್ಲದೆ, ಈ ಮುನ್ನ 35 ನಿಮಿಷಗಳ ಕಾಲ ಮೊದಲಾರ್ಧ ಮತ್ತು ದ್ವಿತೀಯಾರ್ಧ ನಡೆಯುತ್ತಿದ್ದ ಪಂದ್ಯವನ್ನು ಈಗ ನಾಲ್ಕು ಭಾಗಗಳನ್ನಾಗಿಸಲಾಗಿದೆ.
ಪ್ರತಿಯೊಂದು ಭಾಗ 15 ನಿಮಿಷಗಳ ಕಾಲಾವಕಾಶವನ್ನು ಹೊಂದಿದೆ. ಇದು ಬರುವ ಸೆಪ್ಟೆಂಬರ್ 1ರಿಂದಲೇ ಜಾರಿಗೆ ಬರಲಿದೆ. ಮೊದಲ 15 ನಿಮಿಷ ಮತ್ತು ಮೂರನೇ 15 ನಿಮಿಷದ ನಂತರ 2 ನಿಮಿಷಗಳ ಕಾಲ ವಿರಾಮ ಇರಲಿದೆ. ಆದರೆ, ಮೊದಲಾರ್ಧ ಪಂದ್ಯದ ನಂತರ ನೀಡಲಾಗುತ್ತಿದ್ದ 10 ನಿಮಿಷಗಳ ವಿರಾಮದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಬಾಸ್ಕೆಟ್‌ಬಾಲ್, ಅಮೆರಿಕನ್ ಫುಟ್ಬಾಲ್ ಹಾಗೂ ನೆಟ್ಬಾಲ್ ಮಾದರಿಯ ಹಿನ್ನೆಲೆಯಲ್ಲಿ ಎಫ್‌ಐಎಚ್ ಆಡಳಿತ ಮಂಡಳಿ ಈ ತೀರ್ಮಾನ ತೆಗೆದುಕೊಂಡಿದೆ.
 ಹಾಕಿಯ ಅಭಿವೃದ್ಧಿ ಮತ್ತು ತೀವ್ರತೆಯನ್ನು ಸುಧಾರಿಸಲು, ಅಭಿಮಾನಿಗಳ ಉತ್ಸಾಹ ಹೆಚ್ಚಿಸಲು ಹಾಗೂ ಪಂದ್ಯದ ಕುರಿತು ವಿಶ್ಲೇಷಣೆ ಮಾಡಲು ಹೆಚ್ಚಿನ ಸಮಯ ನೀಡಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ತಿಳಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.