ಪಾಕ್ಗೆ ಭಾರತ ಲಗಾಮು

ಮೀರ್ಪುರ: ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ಉತ್ತರ ನೀಡಲು ವಿಫಲವಾದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್ 10 ಹಂತದ ಪಂದ್ಯದಲ್ಲಿ 131 ರನ್ಗಳ ಗುರಿ ನೀಡಿದೆ. ಈ ಮೂಲಕ ಭಾರತ ತಂಡ ಬೌಲಿಂಗ್ ವಿಭಾಗದಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಶುಕ್ರವಾರ ಇಲ್ಲಿನ ಶೇರೆ ಬಾಂಗ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ವಿಶ್ವ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿತ್ತು. ವಿಶ್ವಕಪ್ನ ಸೂಪರ್ 10ರ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿಗಳ ಕಾಳಗಕ್ಕೆ ಕೋಟ್ಯಾಂತರ ಅಭಿಮಾನಿಗಳು ಕಾದು ಕುಳಿತಿದ್ದರು. ಪಂದ್ಯದಲ್ಲಿ ಒತ್ತಡದೊಂದಿಗೆ ಕಣಕ್ಕಿಳಿದ ಭಾರತಕ್ಕೆ ಆರಂಭದಲ್ಲೇ ಮುನ್ನಡೆ ದೊರೆಯಿತು. ಪರಿಣಾಮ ಭಾರತ ತಂಡ ಟಾಸ್ ಗೆದ್ದುಕೊಂಡಿತು.
ಬಾಂಗ್ಲಾದಲ್ಲಿ ರಾತ್ರಿಯ ವೇಳೆ ಇಬ್ಬನಿ ಸುರಿಯುವ ಹಿನ್ನಲೆಯಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 130 ರನ್ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಸ್ಪಿನ್ ಅಸ್ತ್ರ ಪ್ರಯೋಗ: ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಪಾಕ್ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸಲು ಬಳಸಿದ್ದು, ಸ್ಪಿನ್ ಅಸ್ತ್ರ. ಧೋನಿ ತಂಡದ ಹನ್ನೊಂದರ ಬಳಗದಲ್ಲಿ ಮೂವರು ಸ್ಪಿನ್ನರ್ಗಳಿಗೆ ಸ್ಥಾನ ನೀಡಿದರು. ಅಲ್ಲದೆ 20 ಓವರ್ಗಳಲ್ಲಿ 13 ಓವರ್ಗಳು ಸ್ಪಿನ್ನರ್ ಪಾಲಾದವು. ಅಲ್ಲದೆ ರನ್ ನಿಯಂತ್ರಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು.
ಪಾಕಿಸ್ತಾನದ ಪರ ಉಮರ್ ಅಕ್ಮಲ್(33), ಅಹಮದ್ ಶೆಹಜಾದ್(22), ಶೊಹೆಬ್ ಮಕ್ಸೂದ್(21) ಹೊರತು ಪಡಿಸಿದರೆ, ಉಳಿದ ಯಾವುದೇ ಬ್ಯಾಟ್ಸ್ಮನ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಉಳಿದಂತೆ ಅಫ್ರಿದಿ(8), ಕಮ್ರಾನ್ ಅಕ್ಮಲ್(8) ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸಲಿಲ್ಲ ಹಾಗಾಗಿ ತಂಡ ಅಲ್ಪ ಮೊತ್ತಕ್ಕೆ ಕುಸಿಯಿತು.
ಭಾರತದ ಪರ ಮಿಶ್ರಾ 2, ಭುವನೇಶ್ವರ್, ಶಮಿ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ 20 ಓವರ್ಗಳಲ್ಲಿ 7 ವಿಕೆಟ್ಗೆ 130
ಕಮ್ರಾನ್ ಅಕ್ಮಲ್ ರನೌಟ್(ಭುವನೇಶ್ವರ್) 8(10)
ಅಹಮದ್ ಶೆಹಜಾದ್ ಸ್ಟಂಪ್ ಧೋನಿ ಬಿ ಮಿಶ್ರಾ 22(17)
ಮೊಹಮದ್ ಹಫೀಜ್ ಸಿ ಕುಮಾರ್ ಬಿ ಜಡೇಜಾ 15(22)
ಉಮರ್ ಅಕ್ಮಲ್ ಸಿ ರೈನಾ ಬಿ ಶಮಿ 33(30)
ಶೊಹೆಬ್ ಮಲಿಕ್ ಸಿ ರೈನಾ ಬಿ ಮಿಶ್ರಾ 18(20)
ಶಾಹಿದ್ ಅಫ್ರಿದಿ ಸಿ ರೈನಾ ಬಿ ಭುವನೇಶ್ವರ್ 8(10)
ಶೊಹೆಬ್ ಮಕ್ಸೂದ್ ರನೌಟ್ (ಜಡೇಜಾ/ಧೋನಿ) 21(11)
ಬಿಲಾವಲ್ ಬಟ್ಟಿ ಅಜೇಯ 0(0)
ಇತರೆ (ಎಲ್ಬಿ 2, ವೈಡ್ 3) ಒಟ್ಟು 5
ವಿಕೆಟ್ ಪತನ: 1-9, 2-44, 3-47, 4-97, 5-103, 6-114, 7-130
ಬೌಲಿಂಗ್ ವಿವರ:
ಆರ್ ಅಶ್ವಿನ್ 4-0-23-0
ಭುವನೇಶ್ವರ್ ಕುಮಾರ್ 3-0-21-1
ಮೊಹಮದ್ ಶಮಿ 4-0-31-1
ಅಮಿತ್ ಮಿಶ್ರಾ 4-1-22-2
ರವೀಂದ್ರ ಜಡೇಜಾ 4-0-18-1
ಯುವರಾಜ್ ಸಿಂಗ್ 1-0-13-0
ಇಂದಿನ ಪಂದ್ಯಗಳು
ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ
(ಸ್ಥಳ: ಚಿತ್ತಗಾಂಗ್, ಸಮಯ: ಮಧ್ಯಾಹ್ನ 3 ಗಂಟೆ)
ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್
(ಸ್ಥಳ: ಚಿತ್ತಗಾಂಗ್, ಸಮಯ: ಸಂಜೆ 7 ಗಂಟೆ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


