ಕ್ರೀಡೆ

ಕಿವೀಸ್ಗೆ ಜಯ

Published On :

ಚಿತ್ತಗಾಂಗ್: ಮಳೆಯಿಂದ ಅಡಚಣೆಯಾದ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಬೆನ್ನತ್ತಿದರು ಆರಂಭದಲ್ಲಿ ಅಬ್ಬರದ ಆಟ ಪ್ರದರ್ಶಿಸಿದ ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಗೆಲವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಶನಿವಾರ ಇಲ್ಲಿನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹಾಗಾಗಿ ಮೊದಲು ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ತಂಡ 20 ಓವರ್ಗಳಲ್ಲಿ 6 ವಿಕೆಟ್ಗೆ 172 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ನಂತರ ಬ್ಯಾಟಿಂಗ್ಗೆ ಬಂದ ನ್ಯೂಜಿಲೆಂಡ್ ತಂಡ 5.2 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 52 ರನ್ ದಾಖಲಿಸಿತ್ತು.
ಈ ವೇಳೆ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಪಂದ್ಯವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಡಕ್ವರ್ತ್ ಲೂಯಿಸ್ ನಿಯಮದನ್ವಯ ಕಿವೀಸ್ ತಂಡ ಪಂದ್ಯ ನಿಂತಾಗ 43 ರನ್ ಗಳಿಸಬೇಕಿತ್ತು. ಆದರೆ ಕಿವೀಸ್ 52 ರನ್ ಗಳಿಸಿದ್ದ ಹಿನ್ನಲೆಯಲ್ಲಿ 9 ರನ್ಗಳ ಅಂತರದಲ್ಲಿ ಗೆಲವು ದಾಖಲಿಸಿಕೊಂಡಿತು.
ಉತ್ತಮ ಮೊತ್ತ: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಇಂಗ್ಲೆಂಡ್ ತನ್ನ ಖಾತೆಗೆ 1 ರನ್ ಸೇರಿಸುತ್ತಿದ್ದಂತೆ ಆರಂಭಿಕ ಅಲೆಕ್ಸ್ ಹೇಲ್ಸ್ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಈ ವೇಳೆ ತಂಡದ ಜತೆಯಾದ ಮೈಕಲ್ ಲಂಬ್(33) ಹಾಗೂ ಮೊಯೀನ್ ಅಲಿ(36) ತಂಡಕ್ಕೆ 72 ರನ್ ಕಲೆಹಾಕಿ ತಂಡವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು. ನಂತರ ಬಟ್ಲರ್ (32) ಕೊಂಚ ಹೋರಾಟ ನಡೆಸಿದರು.
ಈ ಮೂವರು ಆಟಗಾರರು ಮಹತ್ವದ ಹಂತದಲ್ಲಿ ಔಟಾದರು. ನಂತರ ಬಂದ ಮಾರ್ಗನ್ (12), ಕ್ರಿಸ್ ಜೋರ್ಡನ್(8) ರನ್ ಗಳಿಸಿ ನಿರ್ಗಮಿಸಿದರು. ಅಂತಿಮ ಓವರ್ಗಳಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ರವಿ ಬೊಪಾರ(24) ಹಾಗೂ ಟಿಮ್ ಬ್ರೆಸ್ನನ್(17) ಅಜೇಯರಾಗುಳಿಯುವುದರ ಜತೆಗೆ ತಂಡದ ಮೊತ್ತವನ್ನು 170ರ ಗಡಿಗೆ ಕೊಂಡೋಯ್ದರು.
ಕಿವೀಸ್ ಪರ ಆ್ಯಂಡರ್ಸ್ನ್ 2, ಮಿಲ್ಸ್, ಮೆಕ್ಲೆನಾಗನ್, ಸೌಥಿ ಹಾಗೂ ನಾಥನ್ ಮೆಕಲಂ ತಲಾ 1 ವಿಕೆಟ್ ಪಡೆದರು.
ಕಿವೀಸ್ ತಂಡದ ಪರ ಮಾರ್ಟೀನ್ ಗುಪ್ಟಿಲ್ 11 ರನ್ಗಳಿಸಿ ಔಟಾದರೆ, ವಿಲಿಯಮ್ಸ್ 24(17) ಹಾಗೂ ಬ್ರೆಂಡನ್ ಮೆಕಲಂ 16 (6) ಅಜೇಯರಾಗುಳಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ 20 ಓವರ್ಗಳಲ್ಲಿ  6 ವಿಕೆಟ್ಗೆ 172
(ಮೊಯೀನ್ ಅಲಿ 36, ಮೈಕಲ್ ಲಂಬ್ 33, ಆ್ಯಂಡರ್ಸ್ನ್ 32ಕ್ಕೆ2)
ನ್ಯೂಜಿಲೆಂಡ್ 5.2 ಓವರ್ಗಳಲ್ಲಿ 1 ವಿಕೆಟ್ಗೆ 52
(ಕೇನ್ ವಿಲಿಯಮ್ಸ್ ಅಜೇಯ 24, ಮೆಕಲಂ ಅಜೇಯ 16, ಡರ್ನ್ಬ್ಯಾಚ್ 13ಕ್ಕೆ1)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.