ವಿಂಡೀಸ್ ಥಂಡಾ ಥಂಡಾ
ಮಿರ್ಪುರ: ಬೌಲರ್ಗಳನ್ನು ಸಮರ್ಥ್ಯವಾಗಿ ಎದುರಿಸುವಲ್ಲಿ ಕೆರಿಬಿಯನ್ ದಾಂಡಿಗರು ವೈಫಲ್ಯ ಕಂಡ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿಯ ಭಾನುವಾರ ನಡೆದ 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 130 ರನ್ಗಳ ಸಾಧಾರಣ ಗುರಿ ನೀಡಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನಾಯಕ ಧೋನಿ ತೀರ್ಮಾನವನ್ನು ಸಮರ್ಥಿಸಿಕೊಂಡಂತೆ ಬೌಲಿಂಗ್ ಪ್ರದರ್ಶಿಸಿದ ಭಾರತದ ಬೌಲರ್ಗಳು, ಆರಂಭದಿಂದಲೇ ರನ್ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದರು. ಇದು ವಿಂಡೀಸ್ ಪಡೆ ಕೇವಲ 129 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
ಮೊದಲ ಐದು ಓವರ್ಗಳಲ್ಲಿ ವಿಂಡೀಸ್ ಬಳಗ ಕೇವಲ 18 ರನ್ ಗಳಿಸಿತ್ತು. ವಿಕೆಟ್ ಕಾಯ್ದುಕೊಳ್ಳುವ ತಂತ್ರ ಅನುಸರಿಸಿದ ವಿಂಡೀಸ್ ಬ್ಯಾಟ್ಸ್ಮನ್ಗಳು ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರು. ಆದರೆ, 8ನೇ ಓವರ್ನ 5ನೇ ಎಸೆತದಲ್ಲಿ ಆರಂಭಿಕ ಆಟಗಾರ ಡ್ವೈನ್ ಸ್ಮಿತ್ (11) ವಿಕೆಟ್ ಪಡೆಯುವಲ್ಲಿ ರವಿಚಂದ್ರನ್ ಅಶ್ವಿನ್ ಅವರು ಯಶಸ್ವಿಯಾದರು.
ಅಬ್ಬರಿಸದ ಗೇಯ್ಲ್: ವಿಂಡೀಸ್ನ ಭರವಸೆ ಬ್ಯಾಟ್ಸ್ಮನ್ ಕ್ರಿಸ್ ಗೇಯ್ಲ್ (34) ಆರಂಭದಿಂದಲೂ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದರೂ, ನಂತರ ದೊಡ್ಡ ಹೊಡೆತಗಳಿಗೆ ಮುಂದಾದರು. ಆದರೆ, ತಂಡಕ್ಕೆ ದೊಡ್ಡ ಮೊತ್ತ ಗಳಿಸಿಕೊಡುವಲ್ಲಿ ವೈಫಲ್ಯ ಕಂಡರು. 13ನೇ ಓವರ್ನಲ್ಲಿ ರನ್ ಗಳಿಸಲು ಯತ್ನಿಸುತ್ತಿದ್ದಾಗ, ಗೇಯ್ಲ್ ಅವರನ್ನು ಧೋನಿ ಮತ್ತು ಮೊಹ್ಮದ್ ಶಮಿ ರನೌಟ್ ಮಾಡುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಗೇಯ್ಲ್ ವಿಂಡೀಸ್ ಪರ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದರು.
ಮೂರನೇ ಕ್ರಮಾಂಕದಲ್ಲಿ ಆಂಗಣಕ್ಕಿಳಿದ ಮರ್ಲಾನ್ ಸ್ಯಾಮುಯಲ್ಸ್ (18) ಮಿಶ್ರಾ ಬೌಲಿಂಗ್ನಲ್ಲಿ ಸ್ಟಂಪೌಟ್ ಆಗುವುದರೊಂದಿಗೆ ದೊಡ್ಡ ಮೊತ್ತ ಕಲೆ ಹಾಕದೇ ಪೆವಿಲಿಯನ್ ಸೇರಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಲೆಂಡ್ಲ್ ಸಿಮನ್ಸ್ (27) ಕೊಂಚ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರು. ಆದರೆ, ರವಿಂದ್ರ ಜಡೇಜಾ ಎಸೆತದಲ್ಲಿ ಶಿಖರ್ ಧವನ್ಗೆ ಸಿಮನ್ಸ್ ಕ್ಯಾಚ್ ನೀಡಿದ ನಂತರ ವಿಂಡೀಸ್ ಪರ ರನ್ ಗಳಿಗೆ ಮತ್ತಷ್ಟು ನಿಧಾನವಾಯಿತು. ಅಂತಿಮ ಓವರ್ನಲ್ಲಿ ಎರಡು ಸಿಕ್ಸರ್ ಸಿಡಿಸಿದ ಲೆಡ್ಲ್ ಅವರು ತಂಡದ ಮೊತ್ತ 120ರ ಗಡಿ ದಾಟುವಂತೆ ನೋಡಿಕೊಂಡರು.
ಭಾರತ ತಂಡದ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ರವಿಂದ್ರ ಜಡೇಜಾ ಅವರು 3 ವಿಕೆಟ್ ಕಬಳಿಸಿದರೆ, ಅಮಿತ್ ಮಿಶ್ರಾ 2 ಹಾಗೂ ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 129, ಡ್ವೈನ್ ಸ್ಮಿತ್ ಸಿ ಮತ್ತು ಬಿ ಅಶ್ವಿನ್ 11 (29) ಕ್ರಿಸ್ ಗೇಯ್ಲ್ ರನೌಟ್ 34 (33)ಮರ್ಲಾನ್ ಸ್ಯಾಮುಲ್ಸ್ ಸ್ಟಂಪ್ ಧೋನಿ ಬಿ ಮಿಶ್ರಾ 18 (22) ಲೆಂಡ್ಲ್ ಸಿಮನ್ಸ್ ಸಿ ಧವನ್ ಬಿ ಜಡೇಜಾ 27 (22) ಡ್ವೈನ್ ಬ್ರಾವೊ ಎಲ್ಬಿ ಮಿಶ್ರಾ 0 (1) ಡಾರೆನ್ ಸಾಮಿ ಸಿ ಮಿಶ್ರಾ ಬಿ ಜಡೇಜಾ 11 (7) ಆಂಡ್ರೆ ರಸೆಲ್ ಸಿ ಕೊಹ್ಲಿ ಬಿ ಜಡೇಜಾ 7 (5) ಸುನಿಲ್ ನಾರಾಯಣ ಅಜೇಯ 7 (2) ದಿನೇಶ್ ರಾಮ್ದಿನ್ ಅಜೇಯ 0 (0)
ಇತರೆ: (ಎಲ್ಬಿ-1, ವೈಡ್-12, ನೋಬಾಲ್-1) 14
ವಿಕೆಟ್ ಪತನ: 1-38, 2-62, 3-74, 4-74, 5-97, 6-108, 7-121.
ಬೌಲಿಂಗ್: ಭುವನೇಶ್ವರ 3-0-3-0, ಮೊಹ್ಮದ್ ಶಮಿ 3-0-27-0, ಆರ್. ಅಶ್ವಿನ್ 4-0-24-1, ಅಮಿತ್ ಮಿಶ್ರಾ 4-0-18-2, ಸುರೇಶ್ ರೈನಾ 2-0-8-0, ರವಿಂದ್ರ ಜಡೇಜಾ 4-0-48-3.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

