ಜರ್ಮನಿಗೆ ಟಿಟಿ ತಂಡದ ಪಯಣ
ನವದೆಹಲಿ: ಅನುಭವಿ ಆಟಗಾರ ಶರತ್ ಕಮಲ್ ನಾಯಕತ್ವದ 10 ಸದಸ್ಯರ ಭಾರತ ಟೇಬಲ್ ಟೆನಿಸ್ ತಂಡ ಜರ್ಮನಿ ಮತ್ತು ಸ್ಪೇನ್ಗಳಲ್ಲಿ ನಡೆಯಲಿರುವ ವಿಶ್ವ ಪ್ರೊ ಟೂರ್ನಲ್ಲಿ ಪಾಲ್ಗೊಳ್ಳಲು ಆ ದೇಶಗಳಿಗೆ ಪ್ರಯಾಣ ಬೆಳೆಸಿದೆ. ಈ ತಂಡದಲ್ಲಿ ಶರತ್ ಕಮಲ್ ಅಲ್ಲದೇ, ಸೌಮ್ಯಜೀತ್ ಘೋಷ್, ಹರ್ಮೀತ್ ದೇಸಾಯಿ, ಆಂಥೋನಿ ಅಮಲ್ರಾಜ್ ಮತ್ತು ರಾಷ್ಟ್ರೀಯ ಚಾಂಪಿಯನ್ ಸಾನಿಲ್ ಶೆಟ್ಟಿ ಪುರುಷರ ವಿಭಾಗದಲ್ಲಿದ್ದಾರೆ.
ಇನ್ನು ಮಹಿಳೆಯರ ವಿಭಾಗದಲ್ಲಿ ಕೆ. ಶಾಮಿನಿ ನೇತೃತ್ವ ವಹಿಸಿದ್ದು, ಮಾಧುರಿ ಪಾಟ್ಕರ್, ರಾಷ್ಟ್ರೀಯ ಚಾಂಪಿಯನ್ ಅಂಕಿತಾ ದಾಸ್, ಪೂಜಾ ಸಹಸ್ರಾಬುದ್ಧಿ ಮತ್ತು ಮಾಣಿಕಾ ಬಾತ್ರಾ ಇದ್ದಾರೆ. ಈ ಎರಡೂ ದೇಶಗಳ ಪ್ರವಾಸದಲ್ಲಿ ವಿದೇಶಿ ಕೋಚ್ ಪೀಟರ್ ಎಂಗೆಲ್ ಮತ್ತು ರಾಷ್ಟ್ರೀಯ ಕೋಚ್ ಭವಾನಿ ಮುಖರ್ಜಿ ಆಟಗಾರರಿಗೆ ನೆರವಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

