ಟಿ20ಯಲ್ಲಿ ರೈನಾ ಸಾಮರ್ಥ್ಯ ಉತ್ತಮ
ಮೀರ್ಪುರ: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸುರೇಶ್ ರೈನಾ ಟಿ-20 ಮಾದರಿಯಲ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ ಎಂಬುದರಲ್ಲಿ ಅನುಮಾನವಿಲ್ಲ. ಆತ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿನ ಪ್ರದರ್ಶನ ಮುಂದಿನ ದಿನಗಳಲ್ಲಿ ಎದುರಾಗುಲಿರುವ ದೊಡ್ಡ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸ ಹೆಚ್ಚಿಸಲಿದೆ.
ಪ್ರಸಕ್ತ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅಭ್ಯಾಸ ಪಂದ್ಯವೂ ಸೇರಿದಂತೆ ರೈನಾ, 41, 54, ಅಜೇಯ 31 ಹಾಗೂ ಅಜೇಯ 1 ರನ್ ದಾಖಲಿಸಿದ್ದು, ಮತ್ತೆ ಫಾರ್ಮ್ ಕಂಡುಕೊಂಡಿರುವುದಕ್ಕೆ ರೈನಾ, ತಮಗೆ ಸಲಹೆ ನೀಡಿದ ಗಂಗೂಲಿ ಅವರಿಗೆ ಶ್ರೇಯ ಸಲ್ಲಿಸಿದ್ದರು.
ಸುರೇಶ್ ರೈನಾ ಅವರ ಪ್ರತಿಭೆ ಹಾಗೂ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನವಿಲ್ಲ. ಆತ ಸೀಮಿತ ಓವರ್ ಕ್ರಿಕೆಟ್ನಲ್ಲಿ ಮನಮೋಹಕ ಆಟ ಪ್ರದರ್ಶಿಸಿದ್ದಾರೆ. ಆತ ಟಿ-20 ಮಾದರಿಯಲ್ಲಿ ಅಪಾಯಕಾರಿ ಬ್ಯಾಟ್ಸ್ಮನ್ ಆಗಿದ್ದು, ಯಾವುದೇ ಎದುರಾಳಿ ತಂಡಕ್ಕೂ ದುಸ್ವಪ್ನವಾಗಿ ಕಾಡಬಲ್ಲ ಆಟಗಾರ. ಈ ವಿಶ್ವಕಪ್ನಲ್ಲಿನ ಪ್ರದರ್ಶನವನ್ನು ರೈನಾ ಮುಂದಿನ ದಿನಗಳಲ್ಲೂ ಮುಂದುವರಿಸುವ ವಿಶ್ವಾಸವಿದೆ ಎಂದು ಗಂಗೂಲಿ ತಿಳಿಸಿದ್ದಾರೆ.
ಭಾರತ ತಂಡ ಜುಲೈನಿಂದ ಇಂಗ್ಲೆಂಡ್ ಪ್ರವಾಸ, ನಂತರ ಆಸ್ಟ್ರೇಲಿಯಾ ಪ್ರವಾಸ ಹಾಗೂ ಏಕದಿನ ವಿಶ್ವಕಪ್ ಈಗೆ ಹಲವಾರು ಬೃಹತ್ ಸವಾಲುಗಳನ್ನು ಎದುರಿಸಲು ಸಜ್ಜಾಗಿದೆ. ಹಾಗಾಗಿ ಸುರೇಶ್ ರೈನಾ ಈ ಮಹತ್ವದ ಸರಣಿಗಳಲ್ಲಿ ಯಶಸ್ಸು ಸಾಧಿಸಬೇಕಾಗಿರುವುದು ಅಗತ್ಯ ಎಂದು ಗಂಗೂಲಿ ಅಭಿಪ್ರಾಯಪಟ್ಟರು.
ಇನ್ನು ರೈನಾಗೆ ಸಲಹೆ ನೀಡಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ಹೌದು ನಾನು ಸುರೇಶ್ ಜತೆಗೆ ಮಾತುಕತೆ ನಡೆಸಿದ್ದೆ. ನಾನು ಆತನೊಂದಿಗೆ ಮಾತನಾಡಿದ್ದು, ಇಬ್ಬರು ವ್ಯಕ್ತಿಗಳ ನಡುವೆ ಇರಬೇಕಾದ ವಿಚಾರವಾಗಿದ್ದು, ಅದನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

