ಕ್ರೀಡೆ

ಮತ್ತೆ ಸೋತ ವನಿತೆಯರು

ಮತ್ತೆ ಸೋತ ವನಿತೆಯರು
Published On :

ಸಿಲ್ಹೆಟ್: ಇಂಗ್ಲೆಂಡ್ ಆಟಗಾರ್ತಿಯರ ಸಂಘಟಿತ ದಾಳಿಗೆ ತತ್ತರಿಸಿದ ಭಾರತ ವನಿತೆಯರು ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದ್ದಾರೆ.
ಬುಧವಾರ ಇಲ್ಲಿನ ಸಿಲ್ಹೆಟ್ ಕ್ರೀಡಾಂಗಣದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡ 5 ವಿಕೆಟ್‌ಗಳ ಅಂತರದಲ್ಲಿ ಇಂಗ್ಲೆಂಡ್ ತಂಡಕ್ಕೆ ಮಣಿದಿದೆ.
ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಟಾಸ್ ಗೆದ್ದುಕೊಂಡು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ಭಾರತ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 95 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಆಂಗ್ಲರು 18.1 ಓವರ್‌ಗಳಲ್ಲಿ 5 ವಿಕೆಟ್‌ಗೆ 98 ರನ್ ಗಳಿಸಿ ಸುಲಭ ಗೆಲವು ದಾಖಲಿಸಿತು. ಈ ಮೂಲಕ ಸತತ ಎರಡನೇ ಸೋಲುಂಡಿತು.
ಇಂಗ್ಲೆಂಡ್ ಪರ ಸಾರಾ ಟೇಲರ್(28), ಲಿಡಿಯಾ ಗ್ರೀನ್‌ವೇ(26) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಕುಸಿದ ಬ್ಯಾಟಿಂಗ್ ವಿಭಾಗ: ದೊಡ್ಡ ಮೊತ್ತವನ್ನು ಪೇರಿಸುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಬೃಹತ್ ಗುರಿ ನೀಡಬೇಕೆನ್ನುವ ಉದ್ದೇಶದಿಂದ ನಾಯಕಿ ಮಿಥಾಲಿ ರಾಜ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು.
ಆದರೆ ಇನಿಂಗ್ಸ್ ಆರಂಭವಾದ ನಂತರ ನಾಯಕಿಯ ಯಾವುದೇ ಯೋಜನೆ ಜಾರಿಯಾಗಲಿಲ್ಲ.
ಆರಂಭಿಕರಾಗಿ ಕಣಕ್ಕಿಳಿದ ಮಿಥಾಲಿ ರಾಜ್ ಹಾಗೂ ಸ್ಮೃತಿ ಮಂಧನಾ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲವಾದರು. ಮಂಧನಾ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿ ಭಾರತದ ಕುಸಿತಕ್ಕೆ ನಾಂದಿಯಾಡಿದರು.
ನಂತರ ಬಂದ ಲತಿಕಾ ಕುಮಾರಿ (2) ಹಾಗೂ ಶಿಖಾ ಪಾಂಡೆ(2) ಬಂದ ವೇಗದಲ್ಲೇ ಪೆವಿಲಿಯನ್ ಸೇರಿಕೊಂಡರು. ನಂತರ ಕರುಣಾ ಜೈನ್ ಹಾಗೂ ಹರ್ಮನ್‌ಪ್ರೀತ್ ಕೌರ್ ಶೂನ್ಯ ಸಂಪಾದನೆಗೆ ಪೆವಿಲಿಯನ್ ಸೇರಿಕೊಂಡಿದ್ದು, ತಂಡಕ್ಕೆ ಬಲವಾದ ಪೆಟ್ಟು ನೀಡಿತು. ಹಾಗಾಗಿ ಭಾರತ 31 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಮಿಥಾಲಿ ಅರ್ಧಶತಕ: ಒಂದೆಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೆ, ಮತ್ತೊಂದೆಡೆ ಒತ್ತಡವನ್ನು ನಿಭಾಯಿಸುವ ಮೂಲಕ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕಿ ಮಿಥಾಲಿ ರಾಜ್ ಅರ್ಧಶತಕ ದಾಖಲಿಸುವ ಮೂಲಕ ತಂಡ 90ರ ಗಡಿ ತಲುಪುವಂತೆ ಮಾಡಿದರು.
56 ಎಸೆತಗಳನ್ನು ಎದುರಿಸಿದ ಮಿಥಾಲಿ, 8 ಬೌಂಡರಿ ಸೇರಿದಂತೆ 57 ರನ್ ದಾಖಲಿಸಿದರು. ಉಳಿದಂತೆ ಶ್ರಾವಂತಿ ನಾಯ್ಡು 11 ರನ್ ಗಳಿಸಿದ್ದು, ತಂಡದ ಪರ ಎರಡನೇ ಗರಿಷ್ಠ ಮೊತ್ತವಾಯಿತು.
ಇನ್ನು ಇಂಗ್ಲೆಂಡ್ ತಂಡದ ಪರ ಅನ್ಯ ಶ್ರುಬ್ಸೋಲೆ 6 ರನ್‌ಗಳಿಗೆ 3 ವಿಕೆಟ್ ಪಡೆದರೆ, ಜೆನ್ನಿ ಗುನ್ 15ಕ್ಕೆ3 ವಿಕೆಟ್ ಪಡೆದು ಭಾರತಕ್ಕೆ ಮಾರಕವಾಗಿ ಪರಿಣಮಿಸಿದರು.

ಸ್ಕೋರ್ ವಿವರ
ಭಾರತ 20 ಓವರ್‌ಗೆ 9 ವಿಕೆಟ್‌ಗೆ 95
ಮಿಥಾಲಿ ರಾಜ್ ಸಿ ಬ್ಯೂಮೊಂಟ್ ಬಿ ಎಲ್ವೀಸ್ 57, ಮಂಧನಾ ಸಿ ಗ್ರೀನ್‌ವೇ ಬಿ ಶ್ರುಬ್ಸೊಲೆ 1, ಲತಿಕಾ ಕುಮಾರಿ ಬಿ ರೆಬೆಕ್ಕಾ 2, ಶಿಖಾ ಪಾಂಡೆ ಸಿ ಸ್ಕಿವರ್ ಬಿ ಗುನ್ 2, ಕರುಣಾ ಜೈನ್ ರನೌಟ್(ಗ್ರೀನ್‌ವೇ) 0, ಹರ್ಮನ್‌ಪ್ರೀತ್ ಸಿ ಮತ್ತು ಬಿ ಗುನ್ 0, ಶ್ರಾವಂತಿ ಸಿ ಎಡ್ವರ್ಡ್ಸ್ ಬಿ ಶ್ರುಬ್ಸೋಲೆ 11, ಗೋಸ್ವಾಮಿ ಸ್ಟಂಪ್ ಟೇಲರ್ ಬಿ ಶ್ರುಬ್ಸೋಲೆ 5, ಸೋನಿಯಾ ಅಜೇಯ 7, ಪೂನಮ್ ಯಾದವ್ ಸಿ ಗ್ರೀನ್‌ವೇ ಬಿ ಗುನ್ 1, ಗೊಹರ್ ಸುಲ್ತಾನ ಅಜೇಯ 0. ಇತರೆ 9.
ವಿಕೆಟ್ ಪತನ: 1-8, 2-17, 3-23, 4-30, 5-31, 6-78, 7-87, 8-88, 9-92
ಬೌಲಿಂಗ್ ವಿವರ: ಶ್ರುಬ್ಸೋಲೆ 4-1-6-3, ಹಾಜೆಲ್ 2-0-20-0, ರೆಬೆಕ್ಕಾ 4-0-19-1, ಗುನ್ 4-0-15-3, ಸ್ಕಿವರ್ 3-0-17-0, ಎಲ್ವೀಸ್ 3-0-15-1.
ಇಂಗ್ಲೆಂಡ್ 18.1 ಓವರ್‌ಗಳಲ್ಲಿ 5 ವಿಕೆಟ್‌ಗೆ 98
ಸಾರಾ ಟೇಲರ್ ಸಿ ಮತ್ತು ಬಿ ಪೂನಮ್ 28, ಎಡ್ವರ್ಡ್ಸ್ ಸಿ ಪಾಂಡೆ ಬಿ ಸೋನಿಯಾ 10, ಬ್ಯೂಮೊಂಟ್ ಸಿ ಪಾಂಡೆ ಬಿ ಸೋನಿಯಾ 0, ಗ್ರೀನ್‌ವೇ ಸಿ ಕರುಣಾ ಜೈನ್ 26, ಸ್ಕಿವರ್ ರನೌಟ್ (ಸೋನಿಯಾ) 13, ನೈಟ್ ಅಜೇಯ 6, ಗುನ್ ಅಜೇಯ 5. ಇತರೆ 10.
ವಿಕೆಟ್ ಪತನ: 1-26, 2-34, 3-65, 4-85, 5-89
ಬೌಲಿಂಗ್ ವಿವರ: ಜುಲನ್ ಗೋಸ್ವಾಮಿ 4-0-23-1, ಶಿಖಾ ಪಾಂಡೆ 1-0-7-0, ಸೋನಿಯಾ 4-0-21-2, ಗೊಹರ್ 4-0-14-0, ಶ್ರಾವಂತಿ 1.1-0-12-0, ಪೂನಮ್ 3-0-12-1, ಹರ್ಮನ್‌ಪ್ರೀತ್ 1-0-9-0


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.