ಕ್ರೀಡೆ

ಬಿಎಫ್ಸಿಗೆ ಪುಣೆ ಸವಾಲು

ಬಿಎಫ್ಸಿಗೆ ಪುಣೆ ಸವಾಲು
Published On :

ಬೆಂಗಳೂರು: ಐ ಲೀಗ್ ಪಂದ್ಯಾವಳಿಗೆ ಪದಾರ್ಪಣೆ ಮಾಡಿದ ವರ್ಷವೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಸಜ್ಜಾಗಿರುವ ಬೆಂಗಳೂರು ಎಫ್ಸಿ ತಂಡಕ್ಕೆ ಪ್ರಶಸ್ತಿ ರೇಸ್ನಲ್ಲಿರುವ ಪುಣೆ ಎಫ್ಸಿ ತಂಡ ಸವಾಲು ನೀಡಲು ಸಜ್ಜಾಗಿದೆ.
ಶುಕ್ರವಾರ ಇಲ್ಲಿನ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ಎಫ್ಸಿ ತಂಡ ಗೆಲವಿನ ಫೇವರಿಟ್ ತಂಡವಾಗಿದೆ. ಈ ಪಂದ್ಯದಲ್ಲಿ ಉಭಯ ತಂಡಗಳು ಬಲಿಷ್ಠವಾಗಿದ್ದು, ರೋಚಕ ಹಣಾಹಣಿಯ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಬೆಂಗಳೂರು ಎಫ್ಸಿ ತಂಡ 37 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರೆ, ಇನ್ನು ಪುಣೆ ತಂಡ 30 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಉಭಯ ತಂಡಗಳಿಗೂ ಪ್ರಶಸ್ತಿಗೆ ಮುತ್ತಿಕ್ಕುವ ಅವಕಾಶವಿದೆ. ಹಾಗಾಗಿ ಈ ಪಂದ್ಯದಲ್ಲಿನ ಗೆಲವು ಉಭಯ ತಂಡಗಳ ಪಾಲಿಗೆ ಹೆಚ್ಚು ಮಹತ್ವದ್ದಾಗಿದೆ.   ಬೆಂಗಳೂರು ಎಫ್ಸಿ ಕಳೆದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದ್ದು, ಕಳೆದ ಪಂದ್ಯದಲ್ಲಿ ಸೋಲನುಭವಿಸಿದೆ. ಇನ್ನು ಪುಣೆ ತಂಡವು ಸಹ ಕಳೆದ ಪಂದ್ಯದಲ್ಲಿ ಸೋಲನುಭವಿಸಿದ್ದು, ಹಿಂದಿನ ಎರಡು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದೆ.
ಎರಡೂ ತಂಡಗಳು ಸೋಲಿನ ಕಹಿಯನ್ನು ಅನುಭವಿಸಿ ಈ ಪಂದ್ಯದಲ್ಲಿ ಆಡುತ್ತಿದ್ದು, ಗೆಲವಿನ ಅಗತ್ಯದಲ್ಲಿದೆ ಉಭಯ ತಂಡಗಳ ಪಾಲಿಗೆ ಪ್ರಮುಖವಾಗಿದೆ.
ಬೆಂಗಳೂರು ತಂಡ ಈ ಪಂದ್ಯವನ್ನು ತವರಿನ ಅಂಗಣದಲ್ಲಿ ಆಡುತ್ತಿದ್ದು, ಅಭಿಮಾನಿಗಳ ಬೆಂಬಲ ದೊರೆಯಲಿದೆ. ಅಲ್ಲದೆ ತಂಡದಲ್ಲಿ ಸುನಿಲ್ ಛೆಟ್ರಿ, ಸೀನ್ ರೂನಿ, ರಾಬಿನ್ ಸಿಂಗ್ ಪ್ರಮುಖ ಸ್ಟ್ರೈಕರ್ಗಳಾಗಿದ್ದು, ತಂಡ ಇವರ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಪುಣೆ ತಂಡ ಈ ಹಿಂದೆ ಬೆಂಗಳೂರಿನ ತಂಡವಾಗಿದ್ದ ಎಚ್ಎಲ್ ವಿರುದ್ಧ ಉತ್ತಮ ಗೆಲವಿನ ದಾಖಲೆ ಹೊಂದಿದ್ದು, ಎರಡು ವರ್ಷಗಳ ನಂತರ ಬೆಂಗಳೂರಿನಲ್ಲಿ ಆಡಲಿದೆ. ಈ ಹಿಂದಿನ ದಾಖಲೆಯನ್ನೇ ಮುಂದುವರಿಸಲು ಪುಣೆ ಎದುರು ನೋಡುತ್ತಿದೆಯಾದರು, ಪ್ರಸ್ತುತ ತಂಡವಾಗಿರುವ ಬಿಎಫ್ಸಿ ತಂಡ ಪ್ರಬಲವಾಗಿರುವುದರಿಂದ ಪುಣೆ ತಂಡ ಯಾವ ರೀತಿ ಕಾರ್ಯ ತಂತ್ರ ಎಣೆಯಲಿದೆ ಎಂಬುದನ್ನು ಕಾದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.