ಕ್ರೀಡೆ

ಕುಸಿದ ಬಾಂಗ್ಲಾ

ಕುಸಿದ ಬಾಂಗ್ಲಾ
Published On :

ಮೀರ್ಪುರ: ಭಾರತದ ಸ್ಪಿನ್ನರ್ಗಳ ಮೋಡಿಗೆ ತಲೆಬಾಗಿದ ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್ನ ಸೂಪರ್ 10 ಹಂತದ ಪಂದ್ಯದಲ್ಲಿ 138 ರನ್ಗಳನ್ನಷ್ಟೇ ಗಳಿಸಲು ಶಕ್ತವಾಗಿದೆ.
ಶುಕ್ರವಾರ ಇಲ್ಲಿನ ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎರಡನೇ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಸಂಘಟಿತ ಬೌಲಿಂಗ್ ಮಾಡುವಲ್ಲಿ ಯಶಸ್ವಿಯಾಯಿತು. ಹಾಗಾಗಿ ಬಾಂಗ್ಲಾ, ಭಾರತಕ್ಕೆ ಕೇವಲ 139 ರನ್ಗಳ ಗುರಿ ನೀಡಿತು.
ಟಾಸ್ ಗೆದ್ದ ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ನಂತರ ಬ್ಯಾಟಿಂಗ್ಗೆ ಇಳಿದ ಬಾಂಗ್ಲಾದೇಶ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 138 ರನ್ ದಾಖಲಿಸಿತು.
ಭಾರತದ ಪರ ಅಮಿತ್ ಮಿಶ್ರಾ 3 ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ 2 ವಿಕೆಟ್ ಪಡೆದು ಬಾಂಗ್ಲಾ ಬ್ಯಾಟ್ಸ್ಮನ್ಗಳಿಗೆ ಮಾರಕವಾಗಿ ಪರಿಣಮಿಸಿದರು.
ಆರಂಭಿಕ ಕುಸಿತ: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಆಗಮಿಸಿದ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕ ತಮೀಮ್ ಇಕ್ಬಾಲ್ (6), ಶಮ್ಸೂರ್ ರೆಹಮಾನ್ (0), ಶಕಿಬ್ ಅಲ್ ಹಸನ್ (1) ಬೇಗನೆ ವಿಕೆಟ್ ಒಪ್ಪಿಸಿದರು.
ಹಾಗಾಗಿ ಬಾಂಗ್ಲಾ 21 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ತೀವ್ರ ಒತ್ತಡಕ್ಕೆ ಸಿಲುಕಿತು. ನಂತರ ಬಂದ ಮುಶ್ಫಿಕರ್ ರಹೀಮ್(24), ಶಮ್ಸೂರ್ ಜತೆಗೂಡಿ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು.
ಈ ಜೋಡಿ ನಾಲ್ಕನೇ ವಿಕೆಟ್ಗೆ 46 ರನ್ಗಳ ಜತೆಯಾಟ ನೀಡಲಷ್ಟೇ ಶಕ್ತವಾಯಿತು. ನಂತರ ಬಂದ ನಾಜಿರ್ ಹುಸೇನ್ (16) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಈ ವೇಳೆ ಕಣಕ್ಕಿಳಿದ ಮಹಮದ್ದುಲ್ಲಾ 23 ಎಸೆತಗಳನ್ನು ಎದುರಿಸಿ ಅಜೇಯ 33 ರನ್ ದಾಖಲಿಸಿ ತಂಡದ ಮೊತ್ತ 100ರ ಗಡಿ ದಾಟಲು ನೆರವಾದರು. ಉಳಿದಂತೆ ಜಹುರ್ ಶೂನ್ಯ ಸಂಪಾದಿಸಿದರೆ, ಮೊರ್ತಜಾ ಅಜೇಯ 6 ರನ್ ದಾಖಲಿಸಿದರು.
ಅಮಿತ್ ಮಿಶ್ರಾ 4 ಓವರ್ಗಳಲ್ಲಿ 26 ರನ್ಗಳಿಗೆ 3 ವಿಕೆಟ್ ಪಡೆದರೆ, ಅಶ್ವಿನ್ 4 ಓವರ್ಗಳಲ್ಲಿ 15 ರನ್ಗಳಿಗೆ 2 ವಿಕೆಟ್ ಪಡೆದರು. ಉಳಿದಂತೆ ಭುವನೇಶ್ವರ್ ಹಾಗೂ ಮೊಹ್ಮದ್ ಶಮಿ ತಲಾ 1 ವಿಕೆಟ್ ಪಡೆದರು.
ಭಾರತ ತಂಡಕ್ಕೆ ಸೆಮಿಫೈನಲ್ ಹಾದಿ ಸುಗಮವಾಗಬೇಕಾದರೆ ಈ ಪಂದ್ಯವನ್ನು ಹೆಚ್ಚು ರನ್ರೇಟ್ನಿಂದ ಗೆಲ್ಲಬೇಕಾಗಿದೆ.


ಸ್ಕೋರ್ ವಿವರ



ಬಾಂಗ್ಲಾದೇಶ 20 ಓವರ್ನಲ್ಲಿ  7 ವಿಕೆಟ್ಗೆ 138
ತಮೀಮ್ ಇಕ್ಬಾಲ್ ಸಿ ರೈನಾ ಬಿ ಅಶ್ವಿನ್ 6 (10), ಅನಾಮುಲ್ ಹಕ್ ಬಿ ಮಿಶ್ರಾ 44 (43), ರೆಹಮಾನ್ ಸಿ ರೋಹಿತ್ ಬಿ ಅಶ್ವಿನ್ 0(1), ಶಕಿಬ್ ಬಿ ಭುವನೇಶ್ವರ್ 1 (2), ಮುಶ್ಫಿಕರ್ ಸಿ ಕೊಹ್ಲಿ ಬಿ ಶಮಿ 24 (21), ಹುಸೇನ್ ಸ್ಟಂಪ್ ಧೋನಿ ಬಿ ಮಿಶ್ರಾ 16 (17), ಮಹಮದ್ದುಲ್ಲಾ ಅಜೇಯ 33 (23), ಜಹುರ್ ಸಿ ಜಡೇಜಾ ಬಿ ಮಿಶ್ರಾ 0 (1), ಮೊರ್ತಜಾ ಅಜೇಯ 6 (2), ಇತರೆ 8.
ವಿಕೆಟ್ ಪತನ: 1-20, 2-20, 3-21, 4-67, 5-82, 6-131, 7-131
ಬೌಲಿಂಗ್ ವಿವರ:
ಭುವನೇಶ್ವರ್ 3-0-21-1
ಅಶ್ವಿನ್ 4-0-15-2
ಶಮಿ 3-0-29-1
ಜಡೇಜಾ 4-0-30-0
ರೈನಾ 2-0-11-0
ಮಿಶ್ರಾ 4-0-26-3


ಅಂಕಪಟ್ಟಿ


ಗುಂಪು-1
ತಂಡ    ಪಂದ್ಯ    ಜಯ    ಸೋಲು    ಅಂಕ    ರನ್ಸರಾಸರಿ
ಶ್ರೀಲಂಕಾ    3    2    1    4    ೤2.199
ದಕ್ಷಿಣ ಆಫ್ರಿಕಾ    3    2    1    4    ೤0.050
ನ್ಯೂಜಿಲೆಂಡ್    2    1    1    2    ೤0.276
ಇಂಗ್ಲೆಂಡ್    2    1    1    2    -0.067
ನೆದರ್ಲ್ಯಾಂಡ್ಸ್    2    0    2    0    -2.950


ಗುಂಪು-2
ತಂಡ    ಪಂದ್ಯ    ಜಯ    ಸೋಲು    ಅಂಕ    ರನ್ಸರಾಸರಿ
ವೆಸ್ಟ್ ಇಂಡೀಸ್    3    2    1    4    ೤1.223
ಭಾರತ    2    2    0    4    ೤0.363
ಪಾಕಿಸ್ತಾನ    2    1    1    2    ೤0.077
ಆಸ್ಟ್ರೇಲಿಯಾ    2    0    2    0    -0.503
ಬಾಂಗ್ಲಾದೇಶ    1    0    1    0    -3.650

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.