ಕ್ರೀಡೆ

ಭಾರತ ವಿರುದ್ಧ ಮತ್ತೊಂದು ಪಂದ್ಯವಾಡಬೇಕು: ಅಜ್ಮಲ್

Published On :


ಕರಾಚಿ: ಪ್ರಸಕ್ತ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಮತ್ತೆ ಪಂದ್ಯವನ್ನಾಡಬೇಕು. ಅಲ್ಲದೆ ಭಾರತದ ಬ್ಯಾಟ್ಸ್ಮನ್ಗಳ ವಿರುದ್ಧ ಕಾದಾಡಬೇಕು ಎಂದು ಪಾಕಿಸ್ತಾನದ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ ತಿಳಿಸಿದ್ದಾರೆ.
ನಾವು ಪಂದ್ಯಾವಳಿಯಲ್ಲಿ ಇನ್ನು ಎರಡು ಗುಂಪು ಹಂತದ ಪಂದ್ಯಗಳನ್ನಾಡಬೇಕಿದೆ. ನಮ್ಮ ತಂಡ ಸೆಮೀಸ್ ಹಂತಕ್ಕೆ ಪ್ರವೇಶಿಸಬೇಕಾದರೆ ಈ ಎರಡೂ ಪಂದ್ಯಗಳಲ್ಲಿ ಗೆಲವು ಅನಿವಾರ್ಯವಾಗಿದೆ. ಹಾಗಾಗಿ ಪ್ರಸ್ತುತವಾಗಿ ನಾನು ಈ ಎರಡೂ ಪಂದ್ಯಗಳ ಬಗ್ಗೆ ಹೆಚ್ಚು ಗಮನ ಹರಿಸಿದ್ದೇನೆ. ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಭಾರತದ ಬ್ಯಾಟ್ಸ್ಮನ್ಗಳ ಜತೆಗಿನ ಕಾದಾಟವನ್ನು ಎದುರು ನೋಡುತ್ತಿದ್ದೇನೆ ಎಂದು ಅಜ್ಮಲ್ ಹೇಳಿದ್ದಾರೆ.
ಟಿ20 ಮಾದರಿಯಲ್ಲಿ ಬೌಲಿಂಗ್ ಮಾಡುವುದು ಸವಾಲಿನ ಕೆಲಸವಾಗಿದೆ. ಅಲ್ಲದೆ ಭಾರತದ ವಿರುದ್ಧದ ಪಂದ್ಯವೆಂದರೆ ಸವಾಲು ಮತ್ತಷ್ಟು ಕಠಿಣವಾಗಿರುತ್ತದೆ. ಏಕೆಂದರೆ ಭಾರತ ಹಾಗೂ ಪಾಕಿಸ್ತಾನ ಪಂದ್ಯವೆಂದರೆ ನಿರೀಕ್ಷೆಗಳು ಹೆಚ್ಚಿರುವುದರಿಂದ ಆಟಗಾರರ ಮೇಲಿನ ಒತ್ತಡವೂ ಹೆಚ್ಚಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ತಂಂಡದಲ್ಲಿ ನನ್ನ ಮೇಲಿನ ಜವಾಬ್ದಾರಿಯನ್ನು ನಿಭಾಯಿಸಿ ಅನುಭವ ಪಡೆದಿದ್ದೇನೆ. ಒತ್ತಡದಲ್ಲಿ ಆಡಲು ನಾನು ಇಚ್ಛಿಸುತ್ತೇನೆ ಎಂದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.