ಗೆಲವು ತಂದ ಯುವಿ ಫಾರ್ಮ್

ಮೀರ್ಪುರ: ಯುಗಾದಿ ಹಬ್ಬದ ಸಂಭ್ರಮದಲ್ಲಿರುವ ಭಾರತೀಯರಿಗೆ ಟೀಂ ಇಂಡಿಯಾಗೆ ಸಿಕ್ಕ ಬೆಲ್ಲದ ಸಿಹಿಯಂತ ಗೆಲವಿನ ಹಾಗೂ ಆಸ್ಟ್ರೇಲಿಯಾಕ್ಕೆ ಸಿಕ್ಕ ಸೋಲಿನ ಬೇವಿನ ಕಹಿಯಿಂದ ಹಬ್ಬದ ಸಂಭ್ರಮ ಹೆಚ್ಚಾಗಿದೆ.
ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಯುವರಾಜ್ ಸಿಂಗ್(60) ಅವರ ಅರ್ಧ ಶತಕ ಹಾಗೂ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್ 10 ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲವು ದಾಖಲಿಸಿದೆ.
ಭಾನುವಾರ ಇಲ್ಲಿನ ಶೇರೇ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ನಂತರ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ಗಳಲ್ಲಿ 6 ವಿಕೆಟ್ಗೆ 159 ರನ್ ಕಲೆ ಹಾಕಿತು. ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 16.2 ಓವರ್ಗಳಲ್ಲಿ 86 ರನ್ಗಳಿಗೆ ಸರ್ವ ಪತನವಾಯಿತು. ಈ ಮೂಲಕ ಭಾರತ ತಂಡ ಪಂದ್ಯಾವಳಿಯಲ್ಲಿ ಅಜೇಯವಾಗುಳಿದು ಸೆಮೀಸ್ ಹಂತಕ್ಕೆ ಪ್ರವೇಶಿಸಿದ ಏಕೈಕ ತಂಡವಾಗಿದೆ.
ಭಾರತ ತಂಡ ಈಗಾಗಲೇ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿರುವುದರಿಂದ ಭಾರತ ತಂಡ ಒತ್ತಡವಿಲ್ಲದೇ ಕಣಕ್ಕಿಳಿದಿತ್ತು. ಈ ಪಂದ್ಯದ ಗೆಲವಿನಿಂದ ಭಾರತ ತಂಡ ಹೆಚ್ಚಿನ ಆತ್ಮ ವಿಶ್ವಾಸದೊಂದಿಗೆ ಉಪಾಂತ್ಯಕ್ಕೆ ತಲುಪಲಿದ್ದು, ಮೊದಲ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡದ ವಿರುದ್ಧ ಸೆಣೆಸಲಿದೆ.
ಆರಂಭದಲ್ಲೇ ಹಿನ್ನಡೆ: ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಸತತ ವೈಫಲ್ಯ ಅನುಭವಿಸಿದ ಆರಂಭಿಕ ಶಿಖರ್ ಧವನ್ ಬದಲಿಗೆ ಈ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಅವರನ್ನು ಕಣಕ್ಕಿಳಿಸಲಾಯಿತು.
ರೋಹಿತ್ ಶರ್ಮಾ(5) ಹಾಗೂ ರಹಾನೆ(19) ಆರಂಭಿಕರಾಗಿ ಕಣಕ್ಕಿಳಿದರಾದರೂ, ಶರ್ಮಾ ಮೊದಲ ಓವರ್ನಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದ್ದು, ಭಾರತಕ್ಕೆ ಆರಂಭಿಕ ಆಘಾತ ನೀಡಿತು.
ನಂತರ ಬಂದ ಕೊಹ್ಲಿ 23 ರನ್ ದಾಖಲಿಸಿ ಉತ್ತಮ ಆರಂಭ ಪಡೆದು ದುಬಾರಿ ಹೊಡೆತಕ್ಕೆ ಬಲಿಯಾದರು. ರೈನಾ ಸಹ ಕೇವಲ 6 ರನ್ ದಾಖಲಿಸಿ ಔಟಾದರು.
ಈ ಮೂಲಕ ಭಾರತ ತಂಡ 11.3 ಓವರ್ಗಳಲ್ಲಿ 66 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಯುವಿ ಫಾರ್ಮ್ಗೆ: ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದ ಯುವರಾಜ್ ಕಡೆಗೂ ಈ ಪಂದ್ಯದಲ್ಲಿ ತಮ್ಮ ಲಯ ಕಂಡುಕೊಂಡಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗ ಜತೆಯಾದ ಯುವರಾಜ್ ಸಿಂಗ್(60 ರನ್, 43 ಎಸೆತ, 5 ಬೌಂಡರಿ, 4 ಸಿಕ್ಸರ್) ಹಾಗೂ ಮಹೇಂದ್ರ ಸಿಂಗ್ ಧೋನಿ(24 ರನ್, 20 ಎಸೆತ, 1 ಬೌಂಡರಿ, 1 ಸಿಕ್ಸರ್) ತಂಡಕ್ಕೆ 84 ರನ್ಗಳ ಜತೆಯಾಟ ನೀಡಿದರು. ಈ ಮೂಲಕ ಭಾರತ ತಂಡ 150ರ ಗಡಿ ತಲುಪುವಲ್ಲಿ ಯಶಸ್ವಿಯಾಯಿತು.
ಇನ್ನು ಆಸ್ಟ್ರೇಲಿಯಾ ತಂಡದ ಪರ ಬ್ರಾಡ್ ಹಾಡ್ಜ್, ಗ್ಲೆನ್ ಮ್ಯಾಕ್ಸ್ವೆಲ್, ಮಿಚೆಲ್ ಸ್ಟಾರ್ಕ್, ಶೇನ್ ವ್ಯಾಟ್ಸನ್, ಡಗ್ ಬೊಲಿಂಜರ್, ಜೇಮ್ಸ್ ಮುರ್ಹೆಡ್ ತಲಾ 1 ವಿಕೆಟ್ ಪಡೆದರು.
ಕುಸಿತ ಕಂಡ ಕಾಂಗರೂ: ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಕಾಂಗರೂ ಪಡೆಗೆ ಆರಂಭದಿಂದಲೂ ಭಾರತೀಯ ಬೌಲರ್ಗಳು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದರು.
ಆಸ್ಟ್ರೇಲಿಯಾ ತಂಡದ ಪರ ಗ್ಲೆನ್ ಮ್ಯಾಕ್ಸ್ವೆಲ್ ಗಳಿಸಿದ 23 ರನ್ ಗರಿಷ್ಠ ಮೊತ್ತವಾಯಿತು. ಉಳಿದಂತೆ ವಾರ್ನರ್ 19, ಬ್ರಾಡ್ ಹಾಡ್ಜ್ 13 ಹೊರತು ಪಡಿಸಿದರೆ, ಉಳಿದ ಯಾವುದೇ ಬ್ಯಾಟ್ಸ್ಮನ್ಗಳು ಭಾರತದ ಸ್ಪಿನ್ ಮೋಡಿಯನ್ನು ಅರಿತು ಎರಡಂಕಿ ರನ್ ದಾಖಲಿಸುವಲ್ಲಿ ವಿಫಲರಾದರು.
ಬೌಲಿಂಗ್ನಲ್ಲಿ ಭಾರತದ ಪರ ಆರ್.ಅಶ್ವಿನ್ 11 ರನ್ಗಳಿಗೆ 4 ವಿಕೆಟ್ ಪಡೆದು ಮಿಂಚಿದರೆ, ಅಮಿತ್ ಮಿಶ್ರಾ 13 ರನ್ಗಳಿಗೆ 2 ವಿಕೆಟ್ ಪಡೆದರು. ಉಳಿದಂತೆ ಭುವನೇಶ್ವರ್, ಮೊಹಿತ್ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದರು. ಆಕರ್ಷಕ ಬೌಲಿಂಗ್ ಪ್ರದರ್ಶನ ನೀಡಿದ ಅಶ್ವಿನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸ್ಕೋರ್ ವಿವರ
ಭಾರತ 20 ಓವರ್ಗಳಲ್ಲಿ
7 ವಿಕೆಟ್ಗೆ 159
ರೋಹಿತ್ ಶರ್ಮಾ ಸಿ ಮುರ್ಹೆಡ್ ಬಿ ಬ್ರಾಡ್ ಹಾಡ್ಜ್ 5(3), ಅಜಿಂಕ್ಯ ರಹಾನೆ ಸಿ ಹ್ಯಾಡಿನ್ ಬಿ ಬೊಲಿಂಜರ್ 19(16), ವಿರಾಟ್ ಕೊಹ್ಲಿ ಸಿ ವೈಟ್ ಬಿ ಮುರ್ಹೆಡ್ 23(22), ಯುವರಾಜ್ ಸಿಂಗ್ ಸಿ ಮ್ಯಾಕ್ಸ್ವೆಲ್ ಬಿ ವ್ಯಾಟ್ಸನ್ 60(43), ಸುರೇಶ್ ರೈನಾ ಸಿ ಫಿಂಚ್ ಬಿ ಮ್ಯಾಕ್ಸ್ವೆಲ್ 6(10), ಮಹೇಂದ್ರ ಸಿಂಗ್ ಧೋನಿ ಬಿ ಸ್ಟಾರ್ಕ್ 24(20), ರವೀಂದ್ರ ಜಡೇಜಾ ರನೌಟ್(ವ್ಯಾಟ್ಸನ್) 3(3), ಆರ್ ಅಶ್ವಿನ್ ಅಜೇಯ 2(3), ಭುವನೇಶ್ವರ್ ಅಜೇಯ 0(1)
ಇತರೆ 17
ವಿಕೆಟ್ ಪತನ: 1-6, 2-46, 3-53, 4-66, 5-150, 6-152, 7-158
ಬೌಲಿಂಗ್ ವಿವರ: ಬ್ರಾಡ್ ಹಾಡ್ಜ್ 2-0-13-1, ಗ್ಲೆನ್ ಮ್ಯಾಕ್ಸ್ವೆಲ್ 4-0-20-1, ಮಿಚೆಲ್ ಸ್ಟಾರ್ಕ್ 4-0-36-1, ಶೇನ್ ವ್ಯಾಟ್ಸನ್ 4-0-36-1, ಡಗ್ ಬೊಲಿಂಜರ್ 4-0-24-1, ಜೇಮ್ಸ್ ಮುರ್ಹೆಡ್ 2-0-24-1
ಆಸ್ಟ್ರೇಲಿಯಾ 16.2 ಓವರ್ಗಳಲ್ಲಿ
86 ಕ್ಕೆ ಆಲೌಟ್
ಎರಾನ್ ಫಿಂಚ್ ಸಿ ಕೊಹ್ಲಿ ಬಿ ಅಶ್ವಿನ್ 6(11), ವಾರ್ನರ್ ಸಿ ರೋಹಿತ್ ಬಿ ಅಶ್ವಿನ್ 19(21), ವೈಟ್ ಸಿ ಜಡೇಜಾ ಬಿ ಕುಮಾರ್ 0(2), ವ್ಯಾಟ್ಸನ್ ಬಿ ಮೊಹಿತ್ ಶರ್ಮಾ 1(4), ಗ್ಲೆನ್ ಮ್ಯಾಕ್ಸ್ವೆಲ್ ಬಿ ಅಶ್ವಿನ್ 23(12), ಬೇಯ್ಲಿ ಸಿ ಕೊಹ್ಲಿ ಬಿ ಜಡೇಜಾ 8(10), ಹಾಡ್ಜ್ ಸಿ ಜಡೇಜಾ ಬಿ ಮಿಶ್ರಾ 13(18), ಹ್ಯಾಡಿನ್ ಸಿ ರಹಾನೆ ಬಿ ಮಿಶ್ರಾ 6(8), ಸ್ಟಾರ್ಕ್ ರನೌಟ್ (ರೈನಾ/ಧೋನಿ) 2(4), ಮುರ್ಹೆಡ್ ಸಿ ಧೋನಿ ಬಿ ಅಶ್ವಿನ್ 3(7), ಬೊಲಿಂಜರ್ ಅಜೇಯ 1(1)
ಇತರೆ 4
ವಿಕೆಟ್ ಪತನ: 1-13, 2-19, 3-21, 4-44, 5-55, 6-63, 7-75, 8-79, 9-83, 10-86
ಬೌಲಿಂಗ್ ವಿವರ: ಭುವನೇಶ್ವರ್ 3-0-7-1, ಮೊಹಿತ್ 2-0-11-1, ಅಶ್ವಿನ್ 3.2-0-11-4, ರೈನಾ 1-0-16-0, ಜಡೇಜಾ 4-0-25-1, ಮಿಶ್ರಾ 3-0-13-2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


