ಸೌರಭ್ ವರ್ಮಾ ರನ್ನರ್ ಅಪ್
ಜೋಹಾರ್ ಬಹ್ರು: ಆಕರ್ಷಕ ಹೋರಾಟ ನಡೆಸುವ ಮೂಲಕ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದ ಭಾರತದ ಸೌರಭ್ ವರ್ಮಾ ಅವರ ಮಲೇಷ್ಯಾ ಗ್ರಾನ್ ಪ್ರಿಕ್ಸ್ ಗೋಲ್ಡ್ ಕನಸು ಭಗ್ನಗೊಂಡಿದೆ. ಕಾರಣ, ಫೈನಲ್ ಪಂದ್ಯದಲ್ಲಿ ಸೌರಭ್ ಅವರು ಇಂಡೋನೇಷ್ಯಾದ ಸಿಮಾನ್ ಸ್ಯಾಂಟೋಸ್ ವಿರುದ್ಧ ಪರಾಭವ ಹೊಂದುವ ಮೂಲಕ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿದ್ದಾರೆ.
21 ವರ್ಷದ ಮಧ್ಯಪ್ರದೇಶದ ಸೌರಭ್ ಅವರು ವಿಶ್ವದ ಮಾಜಿ 3ನೇ ನಂಬರ್ ಆಟಗಾರ ಸಿಮಾನ್ ವಿರುದ್ಧ 21-15, 16-21, 19-21 ಗೇಮ್‌ಗಳಿಂದ ಪರಾಭವ ಹೊಂದಿದರು. ಮೊದಲ ಗೇಮ್‌ನಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದ ಸೌರಭ್, ಎರಡನೇ ಗೇಮ್‌ನಲ್ಲಿ ಎದುರಾಳಿ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ. ಅಂತಿಮ ಗೇಮ್‌ನಲ್ಲೂ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದ ಇಂಡೋನೇಷ್ಯಾ ಆಟಗಾರ ಪ್ರಶಸ್ತಿ ಮುಡಿಗೇರಿಸಿಕೊಂಡರು. ವಿಶ್ವದ 30ನೇ ನಂಬರ್ ಆಟಗಾರ ಸೌರಭ್ ವರ್ಮಾ ಇತ್ತೀಚೆಗಷ್ಟೇ, ಟಾಟಾ ಓಪನ್, ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಚಾಲೆಂಜ್ ಹಾಗೂ ಇರಾನ್ ಫಜ್ರ್ ಅಂತಾರಾಷ್ಟ್ರೀಯ ಚಾಲೆಂಜ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಆದರೆ, 15ನೇ ಶ್ರೇಯಾಂಕ ಪಡೆದಿದ್ದ ಸಿಮಾನ್ ಅಂತಿಮವಾಗಿ ಗಲವಿನ ನಗೆ ಚೆಲ್ಲಿದರು.
ಇದರೊಂದಿಗೆ ಇಂಡೋನೇಷ್ಯಾ ಆಟಗಾರ, ಸೌರಭ್ ವಿರುದ್ಧ ಇದುವರೆಗೂ ಆಡಿದ ಎರಡೂ ಪಂದ್ಯಗಳಲ್ಲೂ ಜಯ ಕಂಡುಕೊಂಡಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

