ಚೆನ್ನೈ- ಕೋಲ್ಕತಾ ಪಂದ್ಯಕ್ಕೆ ಮಳೆ ಅಡ್ಡಿ
ರಾಂಚಿ: ಯುಎಇಯಲ್ಲಿ ಯಶಸ್ವಿಯಾಗಿ ಮೊದಲ ಹಂತದ ಪಂದ್ಯಾವಳಿಯನ್ನು ಮುಗಿಸಿಕೊಂಡು ಭಾರತಕ್ಕೆ ಕಾಲಿಟ್ಟ ಐಪಿಎಲ್ 7ನೇ ಆವೃತ್ತಿಗೆ ಮೊದಲ ಪಂದ್ಯದಲ್ಲೇ ಮಳೆ ಅಡ್ಡಿಪಡಿಸಿದೆ.
ಶುಕ್ರವಾರ ಇಲ್ಲಿನ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ರೈಡರ್ಸ್ ನಡುವಣ ಪಂದ್ಯ ಮಳೆಯ ಅಡಚಣೆಗೆ ಒಳಗಾಗಿದೆ.
ಆರಂಭದಲ್ಲಿ ವಾತಾವರಣ ಪಂದ್ಯಕ್ಕೆ ಅನುಕೂಲಕರವಾಗಿತ್ತು. ಟಾಸ್ ಸಹ ನಿಗದಿತ ಸಮಯಕ್ಕೆ ನಡೆಸಲಾಯಿತು. ಈ ವೇಳೆ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಈ ವೇಳೆ ಕೆಕೆಆರ್ ತಂಡ ಕೆಲವು ಬದಲಾವಣೆಗೆ ಮುಂದಾಗಿತ್ತು. ಮಾರ್ನ್ ಮಾರ್ಕೆಲ್ ಬದಲಿಗೆ ವಿಂಡೀಸ್ ಆಲ್ರೌಂಡರ್ ಆ್ಯಂಡ್ರೆ ರಸ್ಸೆಲ್, ಬಿಸ್ಲಾ ಬದಲಿಗೆ ಯೂಸುಫ್ ಪಠಾಣ್ಗೆ ಸ್ಥಾನ ನೀಡಿತ್ತು.
ಟಾಸ್ ವೇಳೆ ನಿಧಾನವಾಗಿ ಹನಿಗಳು ಬೀಳಲಾರಂಭಿಸಿದವು. ಕೆಲ ನಿಮಿಷಗಳ ನಂತರ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸುವ ಮೂಲಕ ಪಂದ್ಯಕ್ಕೆ ಅಡ್ಡಿಪಡಿಸಿತು.
ಈ ಮೂಲಕ ಭಾರತಕ್ಕೆ ಕಾಲಿಟ್ಟ ಐಪಿಎಲ್ 7ನೇ ಆವೃತ್ತಿಯ ಮೊದಲ ಪಂದ್ಯಕ್ಕೆ ವರುಣ ಕಾಡಿದ್ದಾನೆ. ಯುಎಇಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ಪಂದ್ಯಗಳಲ್ಲಿ 4ರಲ್ಲಿ ಗೆಲವು ದಾಖಲಿಸಿ ಯಶಸ್ಸು ಸಾಧಿಸಿತ್ತು. ಅದೇ ಪ್ರದರ್ಶನವನ್ನು ಭಾರತದಲ್ಲೂ ಮುಂದುವರಿಸಲು ಧೋನಿ ತಂಡ ಕಾತರದಿಂದ ಕಾದಿತ್ತು. ಇನ್ನು ಕೋಲ್ಕತಾ ನೈಟ್ರೈಡರ್ಸ್ ತಂಡ ಆಡಿದ 5 ಪಂದ್ಯಗಳಲ್ಲಿ 2ರಲ್ಲಿ ಗೆಲವು 3ರಲ್ಲಿ ಸೋಲನುಭವಿಸಿ ಸ್ಥಿರ ಪ್ರದರ್ಶನದ ಕೊರತೆ ಎದುರಿಸುತ್ತಿತ್ತು. ಹಾಗಾಗಿ ಭಾರತದಲ್ಲಿ ಹೊಸ ಆರಂಭವನ್ನು ಪಡೆಯುವತ್ತ ಕೆಕೆಆರ್ ಸಜ್ಜಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

