ಕ್ರೀಡೆ

ಕ್ರೀಡಾಂಗಣದ ಸುತ್ತ ಪೊಲೀಸ್ ಸರ್ಪಗಾವಲು

Published On :

ಕ.ಪ್ರ.ವಾರ್ತೆ ,  ಬೆಂಗಳೂರು ,  ಮೇ 3
ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬೆಂಗಳೂರು-ಗುವಾಹಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಅವಳಿ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐದು ಐಪಿಎಲ್ ಪಂದ್ಯಗಳಿಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಕೇಂದ್ರ ವಿಭಾಗದ ಡಿಸಿಪಿ ರವಿಕಾಂತೇಗೌಡ ನೇತೃತ್ವದಲ್ಲಿ 3 ಡಿಸಿಪಿಗಳು, 15 ಎಸಿಪಿ, 25 ಇನ್‌ಸ್ಪೆಕ್ಟರ್‌ಗಳು, ಸೇರಿ 1 ಸಾವಿರ ಪೊಲೀಸ್ ಸಿಬ್ಬಂದಿ ಕ್ರೀಡಾಂಗಣದ ಒಳ-ಹೊರಗೆ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
ಕ್ರೀಡಾಂಗಣದ ಒಳ-ಹೊರಗೆ 100 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಶ್ವಾನ, ಬಾಂಬ್ ಪತ್ತೆದಳ ತಂಡಗಳು ಕ್ರೀಡಾಂಗಣ ಸುತ್ತ ಗಸ್ತು ತಿರುಗುತ್ತಿರುತ್ತವೆ.
ಪಂದ್ಯ ಆರಂಭದ 3 ತಾಸು ಮೊದಲೇ ಒಳಗೆ ಹೋಗಲು ಪ್ರೇಕ್ಷಕರಿಗೆ ಅವಕಾಶವಿದೆ. ಕ್ರಿಕೆಟ್ ಪ್ರೇಮಿಗಳು ಸರತಿಯಲ್ಲಿ ನಿಂತು ಪೊಲೀಸ್ ತಪಾಸಣೆಗೆ ಸಹಕರಿಸಬೇಕೆಂದು ಕೋರಲಾಗಿದೆ.
ಇವುಗಳಿಗೆ ಪ್ರವೇಶವಿಲ್ಲ: ಸಿಗರೇಟ್, ಬೆಂಕಿಪೊಟ್ಟಣ, ಲೈಟರ್, ಹೊರಗಡೆ ತಿಂಡಿ ತಿನಿಸು, ಊಟದ ಡಬ್ಬಿ, ಹೆಲ್ಮೆಟ್, ಬಾವುಟ ಕಡ್ಡಿಗಳು, ಪಟಾಕಿ, ಔಷಕ ಬಾಟಲ್‌ಗಳು, ಸೌಂದರ್ಯ ವರ್ಧಕಗಳು, ಟಾರ್ಚ್, ಕ್ಯಾಮರಾ, ಬೈನಾ ಕ್ಯುಲರ್, ಲ್ಯಾಪ್‌ಟಾಪ್, ಟ್ಯಾಬ್, ವಾದ್ಯ ಸಾಧನಗಳು, ಧ್ವನಿವರ್ಧಕಗಳು, ಚಾಕು, ಚೂರಿ ಮುಂತಾದ ಹರಿತ ವಸ್ತುಗಳು, ಶಸ್ತ್ರಾಸ್ತ್ರಗಳು, ಹ್ಯಾಂಡ್ ಬ್ಯಾಗ್, ಮದ್ಯದ ಬಾಟಲ್, ಮಾದಕ ವಸ್ತು, ಬಣ್ಣದ ಪುಡಿ, ಛತ್ರಿಗಳು, ಗೊಂಬೆಗಳು.
ಹೀಗಾಗಿ ಪಂದ್ಯ ವೀಕ್ಷಿಸಲು ಬರುವ ಅಭಿಮಾನಗಳು ಮೊಬೈಲ್ ಫೋನ್ ಹಾಗೂ ಖರ್ಚಿಗೆ ಬೇಕಾದಷ್ಟು ಹಣ ತಂದರೆ ಉತ್ತಮ.
ವಾರಸುದಾರರಿಲ್ಲದ ಬ್ಯಾಗ್ ಹಾಗೂ ಇತರ ವಸ್ತುಗಳು, ಅನುಮಾನಾಸ್ಪದ ವಸ್ತುಗಳು, ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.